ಏಕಾಂಗಿಯಾಗಿ 300ರ ಗಡಿ ದಾಟಿದ ಬಿಜೆಪಿ: ನಮೋ ನಮೋ ಅಂತಿದೆ ಭಾರತ!

Published : May 23, 2019, 02:23 PM IST
ಏಕಾಂಗಿಯಾಗಿ 300ರ ಗಡಿ ದಾಟಿದ ಬಿಜೆಪಿ: ನಮೋ ನಮೋ ಅಂತಿದೆ ಭಾರತ!

ಸಾರಾಂಶ

ಸತತ ಎರಡನೇ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ| ದೇಶದ ಒಟ್ಟು 300 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ| ಕಳೆದ ಲೋಕಸಭೆ ಚುನಾವಣೆಯಲ್ಲಿ 282 ಲೋಕಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದ ಬಿಜೆಪಿ| ಅಧಿಕಾರ ಹಿಡಿಯಲು ಅಗತ್ಯ ಸಂಖ್ಯಾಬಲ ಪಡೆದ ಬಿಜೆಪಿ| 350 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ|

ನವದೆಹಲಿ(ಮೇ.23): ಸತತ ಎರಡನೇ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಿದ್ದು, ದೇಶದ ಒಟ್ಟು 300 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಕಳೆದ(2014)ಲೋಕಸಭೆ ಚುನಾವಣೆಯಲ್ಲಿ 282 ಲೋಕಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದ ಬಿಜೆಪಿ ಈ ಬಾರಿ 18 ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ಬಹುತೇಕ ನಿಚ್ಚಳವಾಗಿದೆ.

ಈ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅಗತ್ಯ ಸಂಖ್ಯಾಬಲವನ್ನು ಸತತ ಎರಡನೇ ಬಾರಿಗೆ ಬಿಜೆಪಿ ಪಡೆದಿದೆ. ಇದೇ ವೇಳೆ ಎನ್‌ಡಿಎ ಈ ಬಾರಿ 350 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದೀ ಕೂಡ 2014ರ ಗೆಲುವಿಗಿಂತ ದೊಡ್ಡ ಮಟ್ಟದ ಗೆಲುವು ಎನ್ನಬಹುದಾಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!