ಹೆಂಡತಿ ತೊರೆದ ಗಂಡನ ವಿರುದ್ಧ ಮಾಯಾ ವ್ಯಂಗ್ಯ ಪ್ರಹಾರ

Published : May 13, 2019, 01:21 PM ISTUpdated : May 13, 2019, 01:49 PM IST
ಹೆಂಡತಿ ತೊರೆದ  ಗಂಡನ ವಿರುದ್ಧ ಮಾಯಾ ವ್ಯಂಗ್ಯ ಪ್ರಹಾರ

ಸಾರಾಂಶ

ಪ್ರಧಾನಿ ಮೋದಿ ವಿರುದ್ಧ ಮಾಯಾವತಿ ನೇರ ವಾಗ್ದಾಳಿ| ಬಿಜೆಪಿ ಮಹಿಳಾ ನಾಯಕಿಯರು ತಮ್ಮ ಗಂಡದಿರು ಮೋದಿ ಸುತ್ತ ಸುಳಿದರೂ ಹೆದರುತ್ತಾರೆ| ಹೆಂಡತಿಯನ್ನು ಬಿಟ್ಟ ವ್ಯಕ್ತಿ ಬೇರೊಬ್ಬರ ಸಹೋದರಿ, ಹೆಂಡತಿಯನ್ನು ಗೌರವಿಸಲು ಹೇಗೆ ಸಾಧ್ಯ?

ಲಕ್ನೋ[ಮೇ.13]: BSP ಪಕ್ಷದ ಮುಖ್ಯಸ್ಥೆ ಮಾಯಾವತಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮಹಿಳಾ ನಾಯಕಿಯರು ತಮ್ಮ ಗಂಡ ಮೋದಿ ಸುತ್ತ ಸುಳಿದರೂ ಹೆದರುತ್ತಾರೆ. ಮೋದಿ ತಮ್ಮ ಗಂಡಂದಿರನ್ನೂ ತಮ್ಮಿಂದ ದೂರ ಮಾಡುವರೋ ಎಂಬ ಭಯವೇ ಇದಕ್ಕೆ ಕಾರಣ ಎಂದಿದ್ದಾರೆ. 

ಸುದ್ದಿ ಸಂಸ್ಥೆ ANI ಈ ಕುರಿತಾಗಿ ಟ್ವೀಟ್ ಒಂದನ್ನು ಮಾಡುತ್ತಾ ಮಾಯಾವತಿ 'ಬಿಜೆಪಿಯಲ್ಲಿ ಅದರಲ್ಲೂ ವಿಶೇಷವಾಗಿ ವಿವಾಹಿತ ಮಹಿಳೆಯರು, ತಮ್ಮ ಗಂಡಂದಿರು ಶ್ರೀ ನರೇಂದ್ರ ಮೋದಿ ಸಮೀಪ ಓಡಾಡಿದರೂ ಹೆದರುತ್ತಾರೆ ಎಂಬ ವಿಚಾರ ತಿಳಿದು ಬಂತು. ಮೋದಿ ಹೆಂಡತಿಯನ್ನು ಬಿಟ್ಟಂತೆ, ತಾವು ಕೂಡಾ ತಮ್ಮ ಗಂಡನಿಂದ ದೂರವಾಗಬೇಕಾಗುತ್ತದೋ ಎಂಬ ಭಯ ಅವರನ್ನು ಕಾಡಲಾರಂಭಿಸಿದೆ' ಎಂದಿದ್ದಾರೆ.

ಅಲ್ವರ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ. 'ನರೇಂದ್ರ ಮೋದಿ ಅಲ್ವರ್ ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಮೌನ ತಾಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ. ರಾಜಕೀಯ ಲಾಭ ಪಡೆಯಲು ತನ್ನ ಹೆಂಡತಿಯನ್ನೇ ಬಿಟ್ಟ ವ್ಯಕ್ತಿ ಮತ್ತೊಬ್ಬರ ಸಹೋದರಿ ಹಾಗೂ ಪತ್ನಿಯನ್ನು ಗೌರವಿಸಲು ಹೇಗೆ ಸಾಧ್ಯ?' ಎಂದು ಕಿಡಿ ಕಾರಿದ್ದಾರೆ.

ಸದ್ಯ ಮಾಯಾವತಿಯ ಈ ಕಟು ಮಾತುಗಳಿಗೆ ಪ್ರಧಾನಿ ಮೋದಿ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂದು ಕಾದು ನೋಡಬೇಕಷ್ಟೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!