ಲೋಕಸಭಾ ಚುನಾವಣೆ : ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಬಿಜೆಪಿಗೆ ಜಯ

By Web DeskFirst Published May 16, 2019, 12:19 PM IST
Highlights

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೇನು ದಿನಗಣನೆಯಾಗುತ್ತಿದೆ. ಯಾರು ಗೆಲ್ತಾರೆ ಯಾರೂ ಸೋಲ್ತಾರೆ ಎನ್ನುವುದನ್ನು ಮತದಾರ ಪ್ರಭು ಈಗಾಗಲೇ ನಿರ್ಧರಿಸಿದ್ದು, ನಾಯಕರು ಅಚಲ ವಿಶ್ವಾಸದಿಂದ ಇದ್ದಾರೆ.

ಹುಬ್ಬಳ್ಳಿ : ದೇಶದಲ್ಲಿ ಇನ್ನೊಂದು ಹಂತದ ಲೋಕಸಭಾ ಚುನಾವಣೆಯಷ್ಟೇ ಬಾಕಿ ಉಳಿದಿದ್ದು ಫಲಿತಾಂಶಕ್ಕೂ ದಿನಗಣನೆ ಆರಂಭವಾಗಿದೆ. 

ವಿವಿಧ ಪಕ್ಷಗಳ ನಾಯಕರಲ್ಲಿ ತಮ್ಮದೇ ಗೆಲುವಿನ ವಿಶ್ವಾಸವಿದ್ದು,  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ದೇಶದಾದ್ಯಂತ ಮೋದಿಯ ಅಲೆ ಇದ್ದು, ಕರ್ನಾಟಕದಲ್ಲಿ‌ ದಾಖಲೆ ಪ್ರಮಾಣದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಉಪಚುನಾವಣೆಯಲ್ಲಿಯೂ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ. 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಈ ಫಲಿತಾಂಶ ಮೈತ್ರಿ ಸರ್ಕಾರಕ್ಕೆ  ಸ್ಫೋಟಕವಾಗಲಿದೆ. ಈಗಾಗಲೇ ಅಸಮಾಧಾನ ಹೊಗೆಯಾಡುತ್ತಿದೆ ಎಂದರು. 

ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನ ನಾವು ಬೀಳಿಸುತ್ತಿಲ್ಲ. ಸರ್ಕಾರ ಉಳಿಸಿಕೊಳ್ಳುವುದು ಬಿಡೋದು ಅವರಿಗೆ ಬಿಟ್ಟಿದ್ದು. ಮೈತ್ರಿ ಸರ್ಕಾರಕ್ಕೆ ಆಯಸ್ಸಿದೆ ಎಂದು ಯಾರಿಗೂ ಎನಿಸುತ್ತಿಲ್ಲ ಎಂದರು. 

ಇನ್ನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸುಸಂಸ್ಕೃತ ಕರ್ನಾಟಕ ರಾಜ್ಯಕ್ಕೆ ಸಿದ್ಧರಾಮಯ್ಯ ಈ ಮೂಲಕ ಅಪಮಾನ ಮಾಡುತ್ತಿದ್ದಾರೆ.  ಅವರನ್ನು ಸರಿ ಮಾಡಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದು ಲೇವಡಿ ಮಾಡಿದ್ದಾರೆ.

click me!