4 ಕಾರುಗಳು ಪರಸ್ಪರ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರಾದ ಸನ್ನಿ!

Published : May 13, 2019, 04:12 PM IST
4 ಕಾರುಗಳು ಪರಸ್ಪರ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರಾದ ಸನ್ನಿ!

ಸಾರಾಂಶ

ಕಾರು ಅಪಘಾತ, ಕೂದಲೆಳೆ ಅಂತರದಲ್ಲಿ ಪಾರಾದ ಸನ್ನಿ ಡಿಯೋಲ್| ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸನ್ನಿ ಡಿಯೋಲ್| ರೋಡ್ ಶೋಗೆ ತೆರಳುತ್ತಿದ್ದಾಗ ಘಟನೆ

ಛತ್ತೀಸ್ಘಡ್[ಮೇ.13]: ಪಂಜಾಬ್ ನ ಗುರುದಾಸ್ಪುರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಗುರುದಾಸ್ಪುರ- ಅಮೃತಸರ ರಾಷ್ಟ್ರೀಯ ಹೆದ್ದಾರಿ ಮೂಲಕ ಚುನಾವಣಾ ಪ್ರಚಾರಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದ ಸನ್ನಿ ಕಾರು ಇದ್ದಕ್ಕಿದ್ದಂತೆ ಪಂಕ್ಚರ್ ಆಗಿದೆ. ಇದಾದ ಬಳಿಕ ಸಂಭವಿಸಲಿದ್ದ ಬಹುದೊಡ್ಡ ಅಪಾಯ ತಪ್ಪಿದೆ.

ವರದಿಗಳನ್ವಯ ಸನ್ನಿ ಡಿಯೋಲ್ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಇದ್ದಕ್ಕಿದ್ದಂತೆ ಕಾರಿನ ಟಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ಸದ್ದಿನಿಂದಾಗಿ ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಕಾರು ಪಂಕ್ಷರ್ ಆಗಿ ನಿಂತಿದ್ದ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಮಾರ್ನಾಲ್ಕು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯ ಬಳಿಕ ಸನ್ನಿ ಡಿಯೋಲ್ ಬೇರೆ ಕಾರಿನಲ್ಲಿ ಕುಳಿತು ತೆರಳಿದ್ದಾರೆ. ಸನ್ನಿ ಡಿಯೋಲ್ ನಾಮಪತ್ರ ಸಲ್ಲಿಸಿದ ದಿನದಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಫಿಡವಿಟ್ ನಲ್ಲಿ ಸಲ್ಲಿಸಿದ್ದ ಸಾಲದ ಹೊರೆಯ ವಿಚಾರ, ಅವರ ಹೆಸರಿನ ವಿವಾದ ಹೀಗೆ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸದ್ದು ಮಾಡುತ್ತಿದ್ದಾರೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!