‘ದೇವೇಗೌಡರಿಗೆ 14 ಜನ ಮಕ್ಕಳಿಲ್ಲ ಎಂಬ ನೋವಿದೆ’

By Web Desk  |  First Published Apr 1, 2019, 4:54 PM IST

ಕೊಪ್ಪಳದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಈಶ್ವರಪ್ಪ ದೇವೇಗೌಡ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ್ದಾರೆ.


ಕೊಪ್ಪಳ[ಏ. 01]  ಬಿಜೆಪಿ ನಾಯಕ ಈಶ್ವರಪ್ಪ ಮನೆಯಲ್ಲಿ ಓಟಿಂಗ್ ಮಶಿನ್ ಸಿಕ್ಕಿದೆ ಎಂಬ ವಿಚಾರ ಮತ್ತೆ ಚರ್ಚೆಗೆ  ಬಂದಿದೆ.  ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಮೆಶಿನ್ ಸಿಕ್ಕಿವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಮ್ಮ ಮನೆಯಲ್ಲಿ ನೋಟ್ ಕೌಂಟಿಗ್ ಮಶಿನ್ ಇವೆ ಅದನ್ನ ಒಪ್ಕೋತಿನಿ‌. ಕುಮಾರಸ್ವಾಮಿ ಮನೆಯಲ್ಲಿ ನೋಟ್ ಪ್ರಿಂಟಿಗ್ ಮಶಿನ್ ಇದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

Tap to resize

Latest Videos

ದೇವೇಗೌಡರ ಕುಟುಂಬದ ಮೇಲೆ ಕೆಂಡ ಕಾರಿದ ಈಶ್ವರಪ್ಪ, ದೇವೆಗೌಡರಿಗೆ 28 ಜನ ಮಕ್ಕಳಿದ್ರೆ 28 ಜನಕ್ಕೂ ಟಿಕೆಟ್ ಕೊಡ್ತಿದ್ರು ಪಾಪ 14 ಜನ ಆದ್ರೂ ಮಕ್ಕಳಿರಬೇಕಿತ್ತು, ಯಾಕಂದ್ರೆ 14 ಜನ ಸೊಸೆಯಿಂದರು ಬರ್ತಿದ್ರು. ಅವಾಗ 28 ಕ್ಷೇತ್ರಗಳಿಗೆ ದೇವೇಗೌಡರ ಕುಟುಂಬ ಸರಿಯಾಗಿರ್ತಿತ್ತು.

ಯಶ್- ದರ್ಶನ್ ಕಳ್ಳೆತ್ತು: ಮಾತಿನಲ್ಲೇ ಜೋಡೆತ್ತುಗಳ ಬೆಂಡೆತ್ತಿದ ಈಶ್ವರಪ್ಪ

ದೇವೆಗೌಡರಿಗೆ 14 ಜನ ಮಕ್ಕಳಿಲ್ಲ ಅಂತಾ ನನಗೆ ನೋವಿದೆ. ಕುಟುಂಬವೇ ದೇಶಕ್ಕೆ ನಷ್ಟ ಆಯ್ತು ಅನ್ನೋ ಹಾಗೆ ಕಣ್ಣೀರು ಹಾಕ್ತಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎನ್ನುತ್ತಲೆ ಸಮಾಜ ಒಡೆದಿದ್ದಾರೆ. ಕುರುಬ ನಾಯಕರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ.  ಸಿದ್ದರಾಮಯ್ಯ ಸ್ವಯಂ‌ಘೋಷಿತ ಅಹಿಂದ ನಾಯಕ. ಸಿದ್ದರಾಮಯ್ಯರನ್ನ ಯಾರೂ ನಾಯಕರು ಎಂದು ಕರೆದಿಲ್ಲ. ಕುರುಬರನ್ನ ರಾಜಕಾರಕ್ಕೆ ಬಳಸಿಕೊಳ್ಳೋದು ಸಿದ್ದರಾಮಯ್ಯ ಕೆಲಸ ಎಂದು ಆರೋಪಿಸಿದರು.

ಅಭ್ಯರ್ಥಿಗಳು ಸಿಗದ ದುಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಏನಾದ್ರೂ ಮಾಡಿದ್ರೆ ನಾನು ರಾಜಕೀಯ ಸನ್ಯಾಸತ್ವ ತಗೆದುಕೊಳ್ತೀನಿ. ಸಿದ್ದರಾಯ್ಯನಿಗೆ ಸವಾಲ್ ಹಾಕಿದ ಈಶ್ವರಪ್ಪ. ಚಾಮುಂಡೇಶ್ವರಯಲ್ಲಿ ಕುರುಬರೇ ಸಿದ್ದರಾಮಯ್ಯರನ್ನ ಸೋಲಿಸಿದ್ದು. ಸಿದ್ದರಾಮಯ್ಯ ಕೋಮುವಾದಿ, ಕೊಲೆಗಡಕ ಎಂದು ಈಶ್ವರಪ್ಪ ಆರೋಪ ಮಾಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!