ಮತದಾನ ಮಾಡಿ: ಖಾಕಿ ಖದರ್ ಹೆಚ್ಚಿಸಿದವರ ಮನವಿ ಹೀಗಿತ್ತು ನೋಡಿ!

By Web DeskFirst Published Apr 16, 2019, 3:25 PM IST
Highlights

ಮೊದಲ ಹಂತದ ಮತದಾನಕ್ಕೆ ಸಜ್ಜಾದ ಕರ್ನಾಟಕ| ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪವಿತ್ರ ಕರ್ತವ್ಯ| ಮತದಾನ ಜಾಗೃತಿ ಅಭಿಯಾನಕ್ಕೆ ಖಾಕಿ ಸಾಥ್| ಮತದಾನ ಮಾಡುವಂತೆ ಮಾಡುವಂತೆ ಮನವಿ ಮಾಡಿದ ಇಬ್ಬರು ಜನಪ್ರಿಯ ಪೊಲೀಸ್ ಅಧಿಕಾರಿಗಳು| ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ವಿಡಿಯೋ ವೈರಲ್| ಪ್ರಜಾಪ್ರಭುತ್ವದ ಬಲವರ್ಧನೆಗೆ ಮತದಾನ ಮಾಡುವಂತೆ ಮನವಿ|

ಬೆಂಗಳೂರು(ಏ.16): ಇನ್ನೇನು ಎರಡು ದಿನದಲ್ಲಿ ರಾಜ್ಯ ಮೊದಲ ಹಂತದ ಮತದಾನಕ್ಕೆ ಸಜ್ಜಾಗಲಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪವಿತ್ರ ಕರ್ತವ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೇ ಕಾರಣಕ್ಕೆ ಚುನಾವಣಾ ಆಯೋಗ, ವಿವಿಧ ಸಂಘ ಸಂಸ್ಥೆಗಳು, ಎನ್‌ಜಿಓಗಳು ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳುತ್ತವೆ. ಅದರಂತೆ ಬೆಂಗಳೂರಿನ ಎಟಿಎಂ ಸ್ಟುಡಿಯೋಸ್ ಮತ್ತು ಆನ್ಯಾ ಐಎನ್ ಸಿ ಸಂಸ್ಥೆ ಜಂಟಿಯಾಗಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಈ ಮತದಾನ ಜಾಗೃತಿ ಅಭಿಯಾನಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಕೈ ಜೋಡಿಸಿದ್ದಾರೆ.

ಸುಮಾರು 2 ನಿಮಿಷದ ವಿಡಿಯೋದಲ್ಲಿ ರವಿ ಚನ್ನಣ್ಣನವರ್ ಮತ್ತು ಅಣ್ಣಾಮಲೈ ಮತದಾನ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವ ಬಲವರ್ಧನೆಗೆ, ಸದೃಢ ಸಮಾಜ ನಿರ್ಮಾಣಕ್ಕೆ ಮತದಾನ ಅತ್ಯಂತ ಅವಶ್ಯಕ ಎಂದು ರವಿ ಚನ್ನಣ್ಣನವರ್ ಹೇಳಿದರೆ, ಮತದಾನ ಅತ್ಯಂತ ಪವಿತ್ರ ಕಾರ್ಯವಾಗಿದ್ದು ಮತದಾನ ಮಾಡುವ ಮೂಲಕ ಉತ್ತಮ ಸಮಾಜ ಕಟ್ಟಲು ನೆರವಾಗಬೇಕು ಎಂದು ಅಣ್ಣಾಮಲೈ ಮನವಿ ಮಾಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!