ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ಘಟಾನುಘಟಿ ನಾಯಕರ ಭಾಷಣಕ್ಕೆ ಬ್ರೇಕ್!

By Web DeskFirst Published Apr 16, 2019, 1:51 PM IST
Highlights

ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ನಾಯಕರ ಭಾಷಣಕ್ಕೆ ಬ್ರೇಕ್ ಹಾಕಿದ ಚುನಾವಣಾ ಆಯೋಗ| ಆಕ್ರಮಣಕಾರಿ ಹೇಳಿಕೆ ನೀಡಿದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಗ್ಗೊಳ್ಳುವಂತಿಲ್ಲ

ನವದೆಹಲಿ[ಏ.16]: ಲೋಕಸಭಾ ಚುನಾವಣೆ 2019ರ ಪ್ರಚಾರ ಸಭೆಗಳಲ್ಲಿ ರಾಜಕೀಯ ನಾಯಕರು ನೀಡುತ್ತಿರುವ ಆಕ್ರಮಣಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬಹಳಷ್ಟು ಅಲರ್ಟ್ ಆಗಿದೆ. ಚುನಾವಣಾ ಭಾಷಣಗಳಲ್ಲಿ ರಾಜಕೀಯ ಮುಖಂಡರರು ನೀಡುತ್ತಿರುವ ದ್ವೇಷ ಹಬ್ಬಿಸುವ ಭಾಷಣಗಳ ಕುರಿತಾಗಿ ಬರುತ್ತಿರುವ ದೂರುಗಳ ತನಿಖೆ ಆರಂಭಿಸಿ ಕ್ರಮ ಕೈಗೊಳ್ಳಲಾರಂಭಿಸಿದೆ. ಇದರ ಅನ್ವಯ ಈವರೆಗೆ ಒಟ್ಟು ನಾಲ್ವರು ಘಟಾನುಘಟಿ ನಾಯಕರ ಭಾಷಣಕ್ಕೆ ಬ್ರೇಕ್ ಹಾಕಿದೆ.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎಚ್ಚೆತ್ತ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಹಾಗೂ SP ನಾಯಕ ಅಜಂ ಖಾನ್ ಭಾಷಣಕ್ಕೆ ಕೆಲ ಸಮಯದವರೆಗೆ ನಿರ್ಬಂಧ ಹೇರಿದೆ. 

ಇದರ ಅನ್ವಯ ಈ ನಾಲ್ವರು ನಾಯಕರು ಯಾವುದೇ ರೋಡ್ ಶೋ ಹಾಗೂ ಸಮಾವೇಶದಲ್ಲಿ ಪಾಗ್ಗೊಳ್ಳುವಂತಿಲ್ಲ. ಚುನಾವಣಾ ಆಯೋಗದ ಈ ಕ್ರಮವನ್ನು ಅಭಿನಂದಿಸಿರುವ ಸುಪ್ರೀಂ 'ನಮ್ಮ ಆದೇಶದ ಬಳಿಕ ಬಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ' ಎಂದು ತಿಳಿಸಿದೆ.

ಯೋಗಿ ಆದಿತ್ಯನಾಥ್ ಭಾಷಣಕ್ಕೆ 72 ಗಮಟೆಗಳ ನಿಷೇಧ ಹೇರಿದ್ದರೆ, ಮಾಯಾ ಭಾಷಣಕ್ಕೆ 48 ಗಂಟೆಗಳ ನಿರ್ಭಂಧ ಹೇರಿದೆ. ಇತ್ತ ಅಜಂ ಖಾನ್ ಭಾಷಣಕ್ಕೂ 72 ಗಂಟೆಗಳ ನಿಷೇಧ ಹೇರಿದ್ದು, ಮನೇಕಾ ಗಾಂಧಿಗೆ 48 ಗಂಟೆಗಳವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ತಡೆ ಹೇರಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!