
ಹೈದರಾಬಾದ್(ಏ.14): ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ-ಮಜ್ನು ಅವರಿಗಿಂತಲೂ ಫೇಮಸ್ ಜೋಡಿ ಎಂದು ಎಐಎಂಎಂ ನಾಯಕ ಅಸದುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ಮಾತನಾಡಿರುವ ಒವೈಸಿ ಮೋದಿ-ನಿತೀಶ್ ಪ್ರೀತಿ ಲೈಲಾ-ಮಜ್ನು ಅವರಿಗಿಂತಲೂ ಸ್ಟ್ರಾಂಗ್ ಆಗಿದೆ. ಇವರಿಬ್ಬರೂ ಸೇರಿದರೆ ದೇಶದ ಕೋಮು ಸೌಹಾರ್ದತೆ ನಾಶವಾಯ್ತು ಎಂದೇ ಅರ್ಥ ಎಂದು ಒವೈಸಿ ಕಿಡಿಕಾರಿದ್ದಾರೆ.
ಆದರೆ ಮೋದಿ-ನಿತೀಶ್ ಜೋಡಿಯಲ್ಲಿ ಯಾರು ಲೈಲಾ ಯಾರು ಮಜ್ನು ಎಂದು ಮಾತ್ರ ಕೇಳಬೇಡಿ ಎಂದು ಒವೈಸಿ ಕುಹುಕವಾಡಿದ್ದಾರೆ. ಒವೈಸಿ ಹೇಳಿಕೆಯನ್ನು ಬಿಜೆಪಿ ಮತ್ತು ಜೆಡಿಯು ತೀವ್ರತವಾಗಿ ಖಂಡಿಸಿವೆ.