
ಪಾಟ್ನಾ(ಏ.14): ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಪ್ರಧಾನಿ ಮೋದಿ ಅವರ 'ಅಚ್ಛೇದಿನ್' ಕುರಿತು ಡಬ್ ಸ್ಮ್ಯಾಶ್ ಮಾಡಿ ಲೇವಡಿ ಮಾಡಿದ್ದಾರೆ.
2014ರ ಲೋಕಸಭೆ ಚುನಾವಣಣೆ ವೇಳೆ ಮೋದಿ ಮಾಡಿದ್ದ ಭಾಷಣಕ್ಕೆ ಡಬ್ ಸ್ಮ್ಯಾಶ್ ಮಾಡಿರುವ ಲಾಲೂ, ಕೊನೆಯಲ್ಲಿ ಅಚ್ಛೇದಿನ್ ಅಂದರೆ ಜುಮ್ಲಾ ಎಂದು ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿ ನೀಡಿದ್ದ ಭರವಸೆಯನ್ನೂ ಕುಹುಕವಾಡಿರುವ ಲಾಲೂ, ದೇಶದ ಜನ 15 ಲಕ್ಷ ರೂ. ಎಲ್ಲಿದೆ ಎಂದು ಕೇಳುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದಾರೆ.