ಮೋದಿ ವಿರುದ್ಧ ಮಾತಾಡಿದ್ದಕ್ಕೆ ಯುವಕನಿಂದ ಹೊಡೆಸಿದ್ದಾರೆ: ಕೇಜ್ರಿ!

By Web DeskFirst Published May 5, 2019, 1:31 PM IST
Highlights

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ ಪ್ರಕರಣ| ಇದು ಬಿಜೆಪಿಯ ವ್ಯವಸ್ಥಿತ ಷಡ್ಯಂತ್ರ ಎಂದು ಹರಿಹಾಯ್ದ ಕೇಜ್ರಿವಾಲ್| ಮೋದಿ ವಿರುದ್ಧ ಮಾತನಾಡಿದರೆ ಹಲ್ಲೆ ನಡೆಸಲಾಗುತ್ತದೆ ಎಂದು ಆರೋಪ| ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ ಎಂದು ಕೇಜ್ರಿವಾಲ್ ಆರೋಪ| ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಿದ್ದ ಸುರೇಶ್​ ಚವ್ಹಾಣ್ ಎಂಬ ಯುವಕ|

ನವದೆಹಲಿ(ಮೇ.05): ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ಬಿಜೆಪಿಯ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

Delhi CM: This was 9th attack on me in last 5 yrs & 5th attack after becoming CM. I don't think in India's history there has been such attacks on any CM. In this country Delhi CM is the only only CM whose security's responsibility is in the hands of opposition party that is BJP. pic.twitter.com/jPwGTuroDY

— ANI (@ANI)

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಕ್ಷಮಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸಲೆಂದೇ ಯುವಕನನ್ನು ಕಳುಹಿಸಿ ತಮ್ಮ ಮೇಲೆ ಹಲ್ಲೆ ಮಾಡಿಸಲಾಗಿದೆ ಎಂದು ಕೇಜ್ರಿವಾಲ್​ ಆರೋಪಿಸಿದ್ದಾರೆ.

Delhi CM Arvind Kejriwal: Is hamlawar ko isliye bheja gaya, ye message dene ki koshish ki ja rahi hai desh ko, ki modi ji ke khilaaf jo bhi bolega is desh ke andar usko bakhsha nahi jaega. Ye tanashahi ki nishaani hai ki apne khilaaf har aawaz ko band kar diya jaye. pic.twitter.com/YZVfNztxOg

— ANI (@ANI)

ದೇಶದಲ್ಲಿ ಮೋದಿ ವಿರುದ್ಧ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದೊಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Delhi CM Arvind Kejriwal: A Chief Minister was attacked and the Central govt says, 'didn't receive the complaint, unable to move ahead with further proceedings, the PM should resign over it. It's not an attack on Arvind Kejriwal, it is an attack on Delhi's mandate. pic.twitter.com/RsUlRFhlVn

— ANI (@ANI)

ದೆಹಲಿಯ ಮೋತಿ ನಗರದಲ್ಲಿ ನಿನ್ನೆ(ಮೇ.05)ಚುನಾವಣಾ ಪ್ರಚಾರ ನಿಮಿತ್ತ ರೋಡ್​ ಶೋ ನಡೆಸುತ್ತಿದ್ದ ಅರವಿಂದ ಕೇಜ್ರಿವಾಲ್​ ಅವರಿಗೆ ಸುರೇಶ್​ ಚವ್ಹಾಣ್ ಎಂಬ ಯುವಕ ಕಪಾಳ ಮೋಕ್ಷ ಮಾಡಿದ್ದ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

click me!