
ಶಿಮ್ಲಾ(ಏ.12): ತಮ್ಮ ಮಗನನ್ನು ಕಾಂಗ್ರೆಸ್ ಪಕ್ಷ ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿದ ಕಾರಣಕ್ಕೆ, ಹಿಮಾಚಲ ಪ್ರದೇಶ ಇಂಧನ ಸಚಿವ ಅನಿಲ್ ಶರ್ಮಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅನಿಲ್ ಶರ್ಮಾ ಅವರ ಪುತ್ರ ಆಶ್ರಯ್ ಶರ್ಮಾ ಅವರನ್ನು ಕಾಂಗ್ರೆಸ್ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅನಿಲ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅನಿಲ್ ಶರ್ಮಾ ತಂದೆ, ಮಾಜಿ ಕೇಂದ್ರ ಸಚಿವ ಸುಖ್ ರಾಮ್ ಶರ್ಮಾ ಮತ್ತು ನಿಲ್ ಶರ್ಮಾ ಪುತ್ರ ಆಶ್ರಯ್ ಶರ್ಮಾ ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದರು.
ಅದರಂತೆ ಪುತ್ರನ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ ಎಂದು ಅನಿಲ್ ಶರ್ಮಾ ಸ್ಪಷ್ಟಪಡಿಸಿದ್ದರು. ಅನಿಲ್ ಶರ್ಮಾ ಅವರ ಈ ನಿರ್ಧಾರ ಬಿಜೆಪಿಯನ್ನು ಕೆರಳಿಸಿತ್ತು.