
ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಮೊಬೈಲ್‌ನ್ನು ಹೋಟೆಲ್‌ನಲ್ಲೇ ಬಿಟ್ಟು ಏರ್ ಪೋರ್ಟ್ ವರೆಗೆ ತೆರಳಿದ ಘಟನೆ ನಗರದಲ್ಲಿ ನಡೆದಿದೆ.
ಶಾ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಬೆಳಗ್ಗೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ದಾವಣ ಗೆರೆಗೆ ತೆರಳಲು ಏರ್‌ಪೋರ್ಟ್‌ಗೆ ಹೋಗಿದ್ದರು.
ವಿಮಾನ ನಿಲ್ದಾಣಕ್ಕೆ ಹೋದ ಬಳಿಕ ರೂಮಿನಲ್ಲಿ ಮೊಬೈಲ್ ಬಿಟ್ಟು ಬಂದಿರುವುದು ಶಾಗೆ ಗೊತ್ತಾಗಿದೆ. ಕೂಡಲೇ ಹೋಟೆಲ್‌ಗೆ ಕರೆ ಮಾಡಿ ಮೊಬೈಲ್ ತರಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.