
ಇಂದೋರ್[ಏ.22]: ಈ ಬಾರಿ ಲೋಕಸಭಾ ಟಿಕೆಟ್ ವಂಚಿತ ಬಿಜೆಪಿಯ ಹಿರಿಯರ ಸಾಲಿಗೆ ಇದೀಗ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡಾ ಸೇರಿದ್ದಾರೆ.
ಸುಮಿತ್ರಾ ಅವರು 9 ಬಾರಿ ಗೆದ್ದಿದ್ದ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರಕ್ಕೆ ಅವರ ಆಪ್ತರಾದ ಶಂಕರ್ ಲಾಲ್ವಾಣಿ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಇದರೊಂದಿಗೆ ಲಾಲ್‌ಕೃಷ್ಣ ಅಡ್ವಾಣಿ, ಮನೋಹರ ಜೋಶಿ ಸಾಲಿಗೆ ಸುಮಿತ್ರಾ ಕೂಡಾ ಸೇರಿದ್ದಾರೆ.
ಹಿರಿತನದ ಕಾರಣಕ್ಕೆ ಟಿಕೆಟ್ ನಿರಾಕರಿಸುವ ಸಂದೇಹದ ಮೇರೆಗೆ ಸುಮಿತ್ರಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಸುಮಿತ್ರಾಗೆ 76 ವರ್ಷ ತುಂಬಿದೆ. 75 ವರ್ಷ ತುಂಬಿದವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಅಘೋಷಿತ ನಿಯಮವನ್ನು ಬಿಜೆಪಿ ಪಾಲಿಸಿದೆ.