ಕಂಗನಾ ರಣಾವತ್ ಅವರು ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮಾಡಿದ ಬಳಿಕ ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಹಿಮಾಚಲ ಪ್ರದೇಶದಲ್ಲಿ ಮೋದಿ ವೇವ್ ಇದೆ, ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಎಲ್ಲ ಸ್ಥಾನ ಗೆಲ್ಲುತ್ತದೆ..
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಂಡಿ ಕ್ಷೇತ್ರದಲ್ಲಿ ಗೆದ್ದು ಬೀಗುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ನಟಿ ಕಂಗನಾ ರಣಾವತ್ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ವಿರುದ್ಧ ನಟಿ ಕಂಗನಾ ರನೌತ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಮಂಡಿ ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಪ್ರತಿಭಾ ಸಿಂಗ್ ಪ್ರತಿನಿಧಿಸುತ್ತಿದ್ದಾರೆ. ತುಂಬಾ ಹಳೆಯ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಆದರೆ ಕೇಸರಿ ಪಕ್ಷದ ಸಂಸದ ರಾಮ್ ಸ್ವರೂಪ್ ಶರ್ಮಾ ನಿಧನರಾದ ನಂತರ 2021ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನವನ್ನು ಹಿಂಪಡೆಯಲು ಕೇಸರಿ ಪಕ್ಷವು ಪ್ರಯತ್ನಿಸುತ್ತಿದೆ. ಕೆಲವು ವರ್ಷದಿಂದ ಕಂಗನಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇದ್ದರೂ ಈಗ ನಟಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಚುನಾವಣೆಗೆ ಸ್ಪರ್ಧೆ ಕೂಡಾ ಮಾಡಿದ್ದಾರೆ.
undefined
ಮಂಡಿ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಸ್ಪರ್ಧೆ ಇರಲಿದೆ. ನಟಿಯಾಗಿ ಈಗಾಗಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕಂಗನಾ ರಣಾವತ್ ಅವರು ಈ ಬಾರಿ ರಾಜಕಾರಣಿಯಾಗಿ ಮೊದಲ ಚುನಾವಣೆಯನ್ನು ಎದುರಿಸಿದ್ದಾರೆ. ಕಂಗನಾ ರಣಾವತ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಹಾಗೂ ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ.
ಕಂಗನಾ ರಣಾವತ್ ಅವರು ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮಾಡಿದ ಬಳಿಕ ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಹಿಮಾಚಲ ಪ್ರದೇಶದಲ್ಲಿ ಮೋದಿ ವೇವ್ ಇದೆ, ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಎಲ್ಲ ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಹಿಮಾಚಲ ಪ್ರದೇಶ, ಅದರಲ್ಲೂ ಮಂಡಿ ಲೋಕಸಭಾ ಕ್ಷೇತ್ರದ ಬಗ್ಗೆ ಅರಿವಿದ್ದವರು 'ಕಂಗನಾಗೆ ಗೆಲುವು ಅಷ್ಟು ಸುಲಭ ಅಲ್ಲ, ಭಾರೀ ಫೈಟ್ ಅಂತೂ ಇರಲಿದೆ ಎಂದಿದ್ದರು.
ಕಂಗನಾ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ಪ್ರಕಾರ 28.7 ಕೋಟಿ ಚರಾಸ್ತಿ ಮತ್ತು 62.9 ಕೋಟಿ ಸ್ಥಿರಾಸ್ತಿ ಸೇರಿದಂತೆ 90 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇವರ ಬಳಿ 2 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಸುಮಾರು 1.35 ಕೋಟಿ ರೂಪಾಯಿ ಹಣ ಇದೆ. ಕಂಗನಾ ಅವರು ಮುಂಬೈ, ಪಂಜಾಬ್ ಮತ್ತು ಮನಾಲಿಯಲ್ಲಿ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂಪಾಯಿಯ ಮರ್ಸಿಡಿಸ್ ಮೇಬ್ಯಾಚ್ ಸೇರಿದಂತೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ನಟಿಯ ಬಳಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಬೆಳ್ಳಿ ಮತ್ತು 3 ಕೋಟಿ ರೂಪಾಯಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳನ್ನು ಹೊಂದಿದ್ದಾರೆ. ಆಕೆಯ ಹೆಸರಿನಲ್ಲಿ 50 ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ಪಾಲಿಸಿಗಳಿವೆ ಮತ್ತು ಆಕೆಯ ಒಟ್ಟು ಸಾಲಗಳು 7.3 ಕೋಟಿ ರೂಪಾಯಿ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕಂಗನಾ ಚಂಡೀಗಢದ ಖಾಸಗಿ ಶಾಲೆಯಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಚುನಾವಣಾ ದಾಖಲೆಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಿಸಿರುವಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮೂರು ಸೇರಿದಂತೆ ಕಂಗನಾ ವಿರುದ್ಧ ಒಟ್ಟು ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.