ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ವೈಯಕ್ತಿಕ ಟೀಕೆಗಳ ಭರಾಟೆ ಜೋರಿದ್ದು, ಅದರಲ್ಲಿ ದಳಪತಿ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ವೈಯಕ್ತಿ ಟೀಕೆಗಳನ್ನ ಮಾಡಿ ಟ್ರಾಲ್ ಆಗುತ್ತಿದ್ದಾರೆ. ಇದೀಗ ಯಶ್ ತಂಟೆಗೆ ಹೋಗಿದ್ದ ನಿಖಿಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಾರತಿಯಾಗಿದೆ.
ಕೊಪ್ಪಳ, (ಏ.10): ತಮ್ಮ ಮನೆ ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಯಶ್‌ಗೆ ಟಾಂಗ್ ಕೊಟ್ಟಿದ್ದ ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಯಶ್ ಏನು ಮಾಡಿದ್ದಾನೆ ಎಂದು ಕೊಪ್ಪಳಕ್ಕೆ ಬಂದು ನೋಡಿ. ಯಶ್ ಸ್ವತಃ ತಮ್ಮ ಹಣದಲ್ಲಿ ತಲ್ಲೂರು ಕೆರೆ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಯಶ್ ಕೆಲಸದಿಂದ ತಲ್ಲೂರು ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ ಎಂದು ಯಶ್ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
‘ಬಾಡಿಗೆ’ ಬಗ್ಗೆ ಪ್ರಶ್ನಿಸಿದ ಅಭಿಮಾನಿಗೆ ಯಶ್ ಕೊಟ್ಟ ಉತ್ತರ! ‘ದಳಪುತ್ರ’ ತತ್ತರ
ಕಳೆದ ಎರಡು ವರ್ಷಗಳ ಹಿಂದೆ ಯಶ್ 4 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಅಭಿವೃದ್ಧಿಯಾಗಿದೆ. ಅಲ್ಲದೆ ಯಶೋಮಾರ್ಗದ ಮೂಲಕ ಯಶ್ ಕೆರೆ ಹೂಳೆತ್ತಿದ್ದಾರೆ.
ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ ಎಂದು ಅಭಿಮಾನಿಗಳು ನಿಖಿಲ್‍ಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಯಶ್ ಅಭಿಮಾನಿಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ನಿಖಿಲ್ ಹೇಳಿದ್ದೇನು?
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟಿದ್ದರು.