7 ಸಚಿವರು ಔಟ್, ಮಾಲೆಗಾಂವ್ ಆರೋಪಿ ನಟರಿಗೆ ಟಿಕೆಟ್: ಬಿಜೆಪಿಗೆ ತರೂರ್ ಏಟು

By Web DeskFirst Published May 3, 2019, 4:11 PM IST
Highlights

ಮೋದಿ ಸರ್ಕಾರದ ವಿರುದ್ಧ ತರೂರ್ ಟ್ವೀಟ್| 7 ಸಚಿವರು ಯಾಕೆ ಸ್ಪರ್ಧಿಸ್ತಿಲ್ಲ ಎಂದು ಪ್ರಶ್ನಿಸಿದ ತರೂರ್ ಮುಂದೆ ಹೇಳಿದ್ದೇನು?| ತರೂರ್ ಪ್ರಶ್ನೆಗೆ ಉತ್ತರಿಸ್ತಾರಾ ಮೋದಿ?

ಲೋಕಸಭಾ ಚುನವಣೆ 2019ರಲ್ಲಿ ನರೇಂದ್ರ ಮೋದಿ ಸರ್ಕಾರದ ಹಲವಾರು ಸಚಿವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಚುನಾವಣಾ ಕಣದಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಬದಲು, ತಮ್ಮ ಪಕ್ಷದೇ ಇತರ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇವರಲ್ಲಿ ಕೆಲವರು ಲೋಕಸಭಾ ಕಣದಲ್ಲಿ ಸ್ಪರ್ಧಿಸದೆ ರಾಜ್ಯಸಭಾ ಕೋಟಾದಡಿ ಸಂಸತ್ತು ಪ್ರವೇಶಿಸಿದವರೂ ಇದ್ದಾರೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಇಂತಹ ಬಿಜೆಪಿ ಸಚಿವರ ಕುರಿತಾಗಿ ಟ್ವೀಟ್ ಮಾಡುತ್ತಾ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

ಈ ಕುರಿತಾಗಿ ಟ್ವಿಟ್ ಮಾಡಿರುವ ಸಶಿ ತರೂರ್ ಮೋದಿ ಸರ್ಕಾರದ ವಿದೆಶಾಂಗ ಸಚಿವೆ, ಹಣಕಾಸು ಸಚಿವ, ರಕ್ಷಣಾ ಸಚಿವೆ, ರೈಲ್ವೇ ಸಚಿವ, ಇಂಧನ ಸಚಿವ, ಶಿಕ್ಷಣ ಮಂತ್ರಿ, ಕಲ್ಲಿದ್ದಲು ಸಚಿವ ಇವರ್ಯಾರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಲೋಕಸಭಾ ಸ್ಪೀಕರ್ ಕೂಡಾ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ನಿರ್ದೇಶಕ ಮಂಡಳಿಯೂ ಸ್ಪರ್ದಿಸುತ್ತಿಲ್ಲ. ಹಾಗಾದ್ರೆ ಸ್ಪರ್ಧಿಸುತ್ತಿರುವವರು ಯಾರು? ನಿರ್ಹುವಾ ಯಾದವ್, ಸನ್ನಿ ಡಿಯೋಲ್, ಪ್ರಜ್ಞಾ ಠಾಕೂರ್! ಎಂದಿದ್ದಾರೆ. ಈ ಮೂಲಕ ತರೂರ್ ಹಲವಾರು ದಿಗ್ಗಜ ನಾಯಕರ ಬದಲಾಗಿ ನಟರು ಹಾಗೂ ಮಾಲೆಗಾಂವ್ ಬಾಂಬ್ ಸ್ಟೋಟದ ಆರೋಪಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ವಯನಾಡು ಸ್ಪರ್ಧೆ:

ಸಶಿ ತರೂರ್ ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ 'ರಾಹುಲ್ ಗಾಂಧಿ ನಿರ್ಧಾರ ತಾವು ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಕಡೆಯಿಂದ ಗೆಲ್ಗೆಲುತ್ತೇವೆಂಬ ವಿಶ್ವಾಸ ಹೊಂದಿದ್ದಾರೆ ಎಂಬುವುದನ್ನು ಸಾರಿ ತೋರಿಸುತ್ತದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಸವಾಲೆಸೆದಿರುವ ತರೂರ್ ಪ್ರಧಾನಿ ಮೋದಿಗೆ ಕೇರಳ ಅಥವಾ ತಮಿಲುನಾಡಿನ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವ ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ.

click me!