ಸೋಲಾರ್ ಪ್ರಕರಣ ಆರೋಪಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತ

By Web DeskFirst Published Apr 6, 2019, 12:59 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಕೇರಳದಲ್ಲಿ  ಏಪ್ರಿಲ್ 23 ರಂದು ನಡೆಯುವ ಚುನಾವಣೆಗೆ ನಾಮಪತ್ರ ಪರಿಶೀಲನೆ ನಡೆದಿದ್ದು, ಈ ವೇಳೆ ಸೋಲಾರ್ ಹಗರಣ ಆರೋಪಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತವಾಗಿದೆ. 

ತಿರುವನಂತರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಈ ವೇಳೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. 

ಕೇರಳದಲ್ಲಿ ಏಪ್ರಿಲ್ 23 ರಂದು 17 ಕ್ಷೇತ್ರಗಳಿಗೆ  ನಡೆಯುವ ಚುನಾವಣೆಗೆ 253 ನಾಮಪತ್ರ ಅಂಗೀಕಾರವಾಗಿದ್ದು, 54 ನಾಮಪತ್ರಗಳು ತಿರಸ್ಕೃತವಾಗಿವೆ. 

Latest Videos

ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಿದ್ದು, ಈ ವೇಳೆ ಸೋಲಾರ್ ಹಗರಣದ ರೂವಾರಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತವಾಗಿದೆ. 

ವಯನಾಡು ಹಾಗೂ ಎರ್ನಾಕುಲಂನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಾಮಪತ್ರ ಪರಿಶೀಲನೆಯಲ್ಲಿ ಸರಿತಾ ನಾಯರ್ ನಾಮಪತ್ರ ತಿರಸ್ಕೃತವಾಗಿದೆ. 

ಸರಿತಾ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಸರಿತಾ ನಾಮಪತ್ರ ತಿರಸ್ಕೃತವಾಗಿದೆ. 

ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಕೆ.ಸಿ ವೇಣುಗೋಪಾಲ್ ವಿರುದ್ಧ ಸರಿತಾ ನಾಯರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿದ್ದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!