ಬೆಳಗಾವಿ ಕ್ಷೇತ್ರದಿಂದ 101 ಅಭ್ಯರ್ಥಿಗಳು ಕಣಕ್ಕೆ : ಇವಿಎಂ ಬದಲು ಬ್ಯಾಲೆಟ್ ಪೇಪರ್

By Web DeskFirst Published Mar 31, 2019, 9:11 AM IST
Highlights

ಬೆಳಗಾವಿ ಕ್ಷೇತ್ರದಿಂದ 101 ಮಂದಿಕಣಕ್ಕೆ ಇಳಿಯುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಇಲ್ಲಿ ಇವಿಎಂ ಬದಲು ಮತಪತ್ರ ಬಳಕೆ ಮಾಡುವ ಸಾಧ್ಯತೆ ಇದೆ. 

ಬೆಳಗಾವಿ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎಂಇಎಸ್‌ನಿಂದ 101 ಮಂದಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. 

ಒಂದು ವೇಳೆ ಎಂಇಎಸ್, ಇತರೆ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 64 ಕ್ಕೂ ಅಧಿಕ ಮಂದಿ ಸ್ಪರ್ಧಿಸಿದರೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕಾಗುತ್ತದೆ. ಮತಯಂತ್ರದಲ್ಲಿ ಗರಿಷ್ಠ 64 ಅಭ್ಯರ್ಥಿಗಳು ಹೆಸರಿಗೆ ಅವಕಾಶ ಇರುತ್ತದೆ. ಅದರಲ್ಲಿ ಒಂದು ನೋಟಾ ಮತದಾನಕ್ಕೆ ಅವಕಾಶ ಇರುತ್ತದೆ. 

ಹೀಗಾಗಿ 63 ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಿದಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಅನಿವಾರ್ಯ ವಾಗುತ್ತದೆ. ಒಂದು ಮತಯಂತ್ರದಲ್ಲಿ 15 ಅಭ್ಯರ್ಥಿ ಹಾಗೂ 1 ನೋಟಾ ಸೇರಿ 16 ಜನರ ಚಿಹ್ನೆ ಅಥವಾ ಹೆಸರು ಅಳವಡಿಸಬಹುದು. ಅದರಂತೆ ನಾಲ್ಕು ಮತಮಂತ್ರ ಗಳಲ್ಲಿ ಒಟ್ಟು 64 ಅಭ್ಯರ್ಥಿಗಳ ಹೆಸರು ನಮೂದಿಸಬಹುದು.

click me!