ಅವಮಾನಿಸಿದವರಿಗೆ ಬ್ಯಾಂಕ್ ಬ್ಯಾಲೆನ್ಸ್‌ನಿಂದಲೇ ಪ್ರತ್ಯುತ್ತರ, ವೈರಲ್ ಆಯ್ತು ಯುವಕನ ಸಕ್ಸಸ್ ಸ್ಟೋರಿ

Published : Aug 02, 2025, 06:39 PM IST
reddit post

ಸಾರಾಂಶ

"ಹುಡುಗನ ಕೈಲೀ ಏನೂ ಮಾಡಲು ಸಾಧ್ಯವಾಗಲ್ಲ" ಎಂದು ಸಂಬಂಧಿಕರು ಹೀಯಾಳಿಸದಾಗಲೇ ಅವರು ಕಂಪ್ಯೂಟರ್ ಕೋರ್ಸ್ ಮಾಡಲು ಪ್ರಾರಂಭಿಸಿದರು. ಆಗಲೂ ಅವರ ಸಂಬಂಧಿಕರು ಚೇಡಿಸುತ್ತಲೇ ಇದ್ದರು. ಆದರೆ ಈಗ…

ಇಡೀ ಜಗತ್ತೇ ನಿಮ್ಮ ವಿರುದ್ಧ ತಿರುಗಿಬಿದ್ದಾಗ ಅಥವಾ ಜೀವನದಲ್ಲಿ ನಿಮಗೆ ಏನನ್ನೂ ಮಾಡಲು ಸಾಧ್ಯ ಆಗ್ತಿಲ್ಲ ಎಂಬ ಭಾವನೆ ಬಂದಾಗಲೇ ನೀವು ಏನನ್ನಾದರೂ ಸಾಧಿಸಿದರೆ ಎಲ್ಲರೂ ಹುಬ್ಬೇರಿಸುತ್ತಾರೆ. ರೆಡ್ಡಿಟ್ (reddit) ಬಳಕೆದಾರರೊಬ್ಬರು ಇಂತಹ ಒಂದು ಯಶಸ್ಸಿನ ಕಥೆಯನ್ನು ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ. ಅದರಲ್ಲಿ ಅವರು 10 ನೇ ತರಗತಿಯಲ್ಲಿ 60 ಪ್ರತಿಶತ ಅಂಕಗಳನ್ನು ಗಳಿಸಿದಾಗ ಅವರ ಸಂಬಂಧಿಕರು ಹೇಗೆಲ್ಲಾ ಗೇಲಿ ಮಾಡಿದ್ರು ಎಂಬುದನ್ನೂ ಹೇಳಿದ್ದಾರೆ.

"ಹುಡುಗನ ಕೈಲೀ ಏನೂ ಮಾಡಲು ಸಾಧ್ಯವಾಗಲ್ಲ" ಎಂದು ಸಂಬಂಧಿಕರು ಹೀಯಾಳಿಸದಾಗಲೇ ಅವರು ಕಂಪ್ಯೂಟರ್ ಕೋರ್ಸ್ ಮಾಡಲು ಪ್ರಾರಂಭಿಸಿದರು. ಆಗಲೂ ಅವರ ಸಂಬಂಧಿಕರು ಅವರನ್ನು ಚೇಡಿಸುತ್ತಲೇ ಇದ್ದರು. ಆದರೆ ಈಗ ಕೊನೆಗೂ ಅವರ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಲಕ್ಷಗಟ್ಟಲೆ ಹಣವಿದ್ದು, ಎಲ್ಲರ ಬಾಯಿ ಮುಚ್ಚಿಸಿಯಾಗಿದೆ.

r/Indian_flexನ ರೆಡ್ಡಿಟ್ ಪೇಜ್‌ನಲ್ಲಿ @Key_Landscape6399 ಎಂಬುವವರು 'ನನ್ನ ಕಂಪ್ಯೂಟರ್ ಕೋರ್ಸ್ ಅನ್ನು ಅಪಹಾಸ್ಯ ಮಾಡಿದರು. ಇಂದು ಖಾತೆಯಲ್ಲಿ ₹3.25 ಲಕ್ಷ ಇದೆ. ಇದು ನನ್ನ ಪೋಷಕರಿಗೆ' ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್ ಪೋಸ್ಟ್ ಬರೆದಿದ್ದಾರೆ. ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಬ್ಯಾಂಕ್ ಖಾತೆಗೆ ಸುಮಾರು 3 ಲಕ್ಷ 25 ಸಾವಿರ ಜಮಾ ಆಗಿರುವುದನ್ನ ನೀವು ನೋಡಬಹುದು.

ಬಳಕೆದಾರರು ಹೇಳಿಕೊಂಡಂತೆ ತಾನು 10ನೇ ತರಗತಿಯಲ್ಲಿ 60% ಅಂಕಗಳನ್ನು ಗಳಿಸಿದ್ದೇನೆ ಎಂದು ಹೇಳುತ್ತಾರೆ. ಅವರು ಹಳ್ಳಿಯ ಹುಡುಗ, ಆರ್ಥಿಕ ನಿರ್ಬಂಧಗಳು, ಕನಸುಗಳು ಸ್ಪಷ್ಟವಾಗಿರಲಿಲ್ಲ. "ನನಗೆ ನೆನಪಿದೆ, ಚಿಕ್ಕಮ್ಮ ನನ್ನನ್ನು ಗೇಲಿ ಮಾಡುತ್ತಿದ್ದರು. ನೀನು ಕಂಪ್ಯೂಟರ್ ಕೋರ್ಸ್ ಮಾಡುತ್ತೀಯಾ ಸರಿ. ಆದರೆ ತಿಂಗಳಿಗೆ 1-2 ಲಕ್ಷ ಸಂಪಾದಿಸುತ್ತೀಯಾ?" ಎಂದು ಕೇಳುತ್ತಿದ್ದರು. ಅಷ್ಟೇ ಅಲ್ಲ, "ನನ್ನ ಹೆತ್ತವರ ಮುಂದೆ ಎಲ್ಲರೂ ನಗುತ್ತಿದ್ದರು. ಆದರೆ ಅವರು ಮನುಷ್ಯರು, ಸರಳ ಜನರು ಸುಮ್ಮನಿದ್ದರು. ಇದನ್ನೆಲ್ಲಾ ಕೇಳಿದ ನಂತರ ನಾನು ಒಳಗಿನಿಂದ ಒದ್ದಾಡಿದೆ, ಆದರೆ ಇದೆಲ್ಲವೂ ಅಲ್ಲಿಂದ ಪ್ರಾರಂಭವಾಯಿತು" ಎಂದು ರೆಡ್ಡಿಟ್ ಬಳಕೆದಾರರು ಹಿಂದೆ ತನ್ನ ಫ್ಯಾಮಿಲಿಗಾದ ಅವಮಾನವನ್ನ ನೆನಪಿಸಿಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ ನೋಡಿ 

"ನಾನು ಎಂಜಿನಿಯರಿಂಗ್ ಮಾಡಿಲ್ಲ, ಐಐಟಿಗೂ ಹೋಗಿಲ್ಲ. ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದೇನೆ. ಎಲ್ಲರೂ ಇದರಿಂದಾಗುವ ಪ್ರಯೋಜನವಾದ್ರೂ ಏನು ಎಂದು ಕೇಳುತ್ತಿದ್ದರು.

ನೀವು ಎಲ್ಲಿಂದ ಬಂದರೂ ಕಠಿಣ ಪರಿಶ್ರಮ ಎಂಬುದು ಎಂದಿಗೂ ಸಣ್ಣದಲ್ಲ. ಇಂದು, NEFT ಮೂಲಕ ನನ್ನ ಖಾತೆಗೆ 3 ಲಕ್ಷ 25 ಸಾವಿರ 99 ರೂಪಾಯಿ ಬಂದಿದೆ. ನನ್ನ ಜೀವನದ ಅತಿದೊಡ್ಡ ಕ್ರೆಡಿಟ್. ನಾನು ಹಣವನ್ನು ತೋರಿಸಲು ಬಯಸುವುದಿಲ್ಲ. ತಿಂಗಳಿಗೆ 10,000 ರೂ.ಸಂಪಾದಿಸುವುದೇ ದೊಡ್ಡ ವಿಷಯವಾಗಿದ್ದ ಆ ಹಳ್ಳಿಯಲ್ಲಿ, ಅಲ್ಲಿಂದ ಬಂದರೆ 3 ಲಕ್ಷ ರೂ. ಸಂಪಾದಿಸಲು ಸಾಧ್ಯವಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ.

ನಿಮ್ಮ ಹಿನ್ನೆಲೆ ಸಿಂಪಲ್ ಆಗಿದ್ರೆ, ಇತರರು ನಿಮ್ಮನ್ನು ಅವಮಾನಿಸಿದರೆ ಮತ್ತು ನೀವು ದೊಡ್ಡ ಕನಸುಗಳನ್ನು ಹೊಂದಿದ್ದರೆ ಎಂದಿಗೂ ನಿಲ್ಲಿಸಬೇಡಿ! ಅವನ ಕೈಲೀ ಏನೂ ಆಗುವುದಿಲ್ಲ ಎಂದು ಎಲ್ಲರೂ ನನಗೆ ನಗುತ್ತಲೇ ಹೇಳಿದರು. ಆದರೆ ಇಂದು ಎಲ್ಲವೂ ಸಾಧ್ಯವೆಂದು ತೋರುತ್ತದೆ. ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ಪದವಿ ಅಥವಾ ಹಿನ್ನೆಲೆ ಮುಖ್ಯವಲ್ಲ. ಆಲೋಚನೆ ಮಾತ್ರ ಮುಖ್ಯ. ನಾನು ಬಲವಂತದಿಂದ ಪ್ರಾರಂಭಿಸಿದೆ. ಆದರೆ ಈಗ ಜೀವನ ನನ್ನದು ಎಂದು ನನಗೆ ಅನಿಸುತ್ತದೆ.

ಅಂದಹಾಗೆ ಈ ರೆಡ್ಡಿಟ್ ಪೋಸ್ಟ್ ಕೇವಲ 17 ಗಂಟೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಅಪ್ಸ್ ಮತ್ತು 200 ಕ್ಕೂ ಹೆಚ್ಚು ಕಾಮೆಂಟ್ಸ್ ಪಡೆದುಕೊಂಡಿದೆ.

ರೆಡ್ಡಿಟ್ ಬಳಕೆದಾರನ ಸಕ್ಸಸ್ ಸ್ಟೋರಿ ಓದಿದ ನಂತರ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಪ್ರತಿಕ್ರಿಯಿಸುತ್ತಿದ್ದಾರೆ. "ಅದ್ಭುತ! ನೀವು ಅದನ್ನು ಸಾಧಿಸಿದ್ದೀರಿ. ದೇವರು ನಿಮಗೆ ಹೆಚ್ಚಿನ ಸಾಧನೆ ಮಾಡುವ ಶಕ್ತಿ ನೀಡಲಿ. ಈಗ ನೀವು ಅದೇ ಹಾದಿಯಲ್ಲಿ ನಡೆಯುವ ಜನರಿಗೆ ಸಹಾಯ ಮಾಡುವ, ಅವರಿಗೆ ಮಾರ್ಗದರ್ಶನ ನೀಡುವ ಮತ್ತು ಜಗತ್ತಿಗೆ ಏನನ್ನಾದರೂ ನೀಡುವ ಸಮಯ. ನೀವು ಇದನ್ನೆಲ್ಲಾ ಮಾಡುತ್ತಿದ್ದೀರಿ ಎಂದು ಕನ್‌ಫರ್ಮ್ ಆಗಿದೆ. ಶುಭಾಶಯಗಳು" ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ