ಇಂಡಿ: ವಸತಿ ಶಾಲೆ ಊಟದಲ್ಲಿ ಹುಳುಗಳು..!

By Kannadaprabha News  |  First Published Oct 6, 2023, 11:00 PM IST

ವಸತಿ ಶಾಲೆಯಲ್ಲಿ ವಿಸ್ತಾರವಾದ ಆಟದ ಮೈದಾನ ಇದ್ದರೂ ಆಟ ಆಡಿಸುತ್ತಿಲ್ಲ, ಮೇಲಾಧಿಕಾರಿಗಳ ಮುಂದೆ ಸಮಸ್ಯೆ ಹೇಳಿದರೆ ನಮ್ಮನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭದಿಂದ ಫಿಜಿಕ್ಸ್ ಪಾಠ ಮಾಡಿಲ್ಲ, ಅರ್ಧ ವಾರ್ಷಿಕ ಪರೀಕ್ಷೆ ನಡೆದಿದೆ ಪರೀಕ್ಷೆ ಹೇಗೆ ಬರೆಯುವುದು ಎಂದು  ಅಳಲು ತೋಡಿಕೊಂಡ ವಿದ್ಯಾರ್ಥಿಗಳು


ಇಂಡಿ(ಅ.06): ತಾಲೂಕಿನ ಅಂಜುಟಗಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆ ಆಧೀನದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಕ್ಕೆ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸಶಿಧರ ಕೋಸಂಬೆ ಭೇಟಿ ನೀಡಿದರು.

ಈ ವೇಳೆ ವಸತಿ ನಿಲಯದ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸದಸ್ಯರ ಮುಂದೆ ಬಿಚ್ಚಿಟ್ಟರು. ವಸತಿ ನಿಲಯದಲ್ಲಿ ಸ್ನಾನಕ್ಕೆ ಬಿಸಿ ನೀರು ದೊರೆಯುತ್ತಿಲ್ಲ. ತಣ್ಣೀರಲ್ಲೇ ಸ್ನಾನ ಮಾಡಬೇಕು. ಮಲಗುವ, ಓದುವ ಕೋಣೆಯಲ್ಲಿ ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲ, ಹಲವು ಕೋಣೆಗಳಲ್ಲಿ ಫ್ಯಾನ್ ಅಳವಡಿಸಿಲ್ಲ, ಸ್ನಾನದ ಕೋಣೆ ಬ್ಲಾಕ್ ಆಗಿದೆ, ಊಟದಲ್ಲಿ ಹುಳು ಬಂದಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ, ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ, ಪ್ರಸಕ್ತ ಸಾಲಿನಲ್ಲಿ ಶಾಲೆ ಆರಂಭವಾಗಿನಿಂದಲೂ ಕಿಟ್ ಕೊಟ್ಟಿಲ್ಲ, ಶಿಕ್ಷಕರಲ್ಲಿ ಒಗ್ಗಟ್ಟಿಲ್ಲ. ಇಲ್ಲದಕ್ಕಾಗಿ ಗುಂಪುಗಾರಿಕೆ ಮಾಡುತ್ತದ್ದಾರೆ. ಅವರಲ್ಲಿನ ಭಿನ್ನಾಭಿಪ್ರಾಯಗಳಿಂದ ವಿನಾಕಾರಣ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

Tap to resize

Latest Videos

ವಿಜಯಪುರದಲ್ಲಿ ಹೆಮ್ಮಾರಿಯರ ಆರ್ಭಟ: ಡೆಂಗ್ಯೂ, ಚಿಕನ್‌ ಗುನ್ಯಾ ಹೊಡೆತಕ್ಕೆ ಜನರ ನರಳಾಟ!

ವಸತಿ ಶಾಲೆಯಲ್ಲಿ ವಿಸ್ತಾರವಾದ ಆಟದ ಮೈದಾನ ಇದ್ದರೂ ಆಟ ಆಡಿಸುತ್ತಿಲ್ಲ, ಮೇಲಾಧಿಕಾರಿಗಳ ಮುಂದೆ ಸಮಸ್ಯೆ ಹೇಳಿದರೆ ನಮ್ಮನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭದಿಂದ ಫಿಜಿಕ್ಸ್ ಪಾಠ ಮಾಡಿಲ್ಲ, ಅರ್ಧ ವಾರ್ಷಿಕ ಪರೀಕ್ಷೆ ನಡೆದಿದೆ ಪರೀಕ್ಷೆ ಹೇಗೆ ಬರೆಯುವುದು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ವಸತಿ ನಿಲಯ ಪರಿಶೀಲನೆ ನಡೆಸಿದಾಗ, ಮಕ್ಕಳ ರಕ್ಷಣಾ ನೀತಿ 2016ರ ಪ್ರಕಾರ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿಲ್ಲ. ಮಕ್ಕಳ ಸಮಸ್ಯೆ ಹೇಳಿಕೊಳ್ಳಲು 1098 / 112 ಮಾಹಿತಿ ಬರೆದಿಲ್ಲ. ಜೊತೆಗೆ ದೂರು ಪೆಟ್ಟಿಗೆ ಅಳವಡಿಸಿಲ್ಲ, ಭೋಜನಾಲಯದಲ್ಲಿ ಸ್ವಚ್ಛತೆ ಇಲ್ಲ.ವಾರ್ಡನ್ ಪ್ರಸಕ್ತ ಸಾಲಿನಿಂದ ಆಹಾರ ದಾಸ್ತಾನು ವಹಿ (ರಜಿಸ್ಟರ್‌) ನಿರ್ವಹಿಸದೆ ಇರುವುದನ್ನು ಕಂಡು, ಆ.6ರಂದು ವಿಜಯಪುರದ ಜಿಲ್ಲಾ ಪಂಚಾಯತನಲ್ಲಿ ನಡೆಯಲಿರುವ ಮಕ್ಕಳ ಪ್ರಗತಿ ಪರಿಶೀಲನ ಸಭೆಗೆ ಹಾಜರಾಗುವಂತೆ ಪ್ರಾಂಶುಪಾಲ ಹಾಗೂ ವಾರ್ಡನ್ ಹಾಗೂ ವಿಜ್ಞಾನ ಶಿಕ್ಷಕರಿಗೆ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.ಇಂಡಿ ಸಿಡಿಪಿಒ ಕಚೇರಿಯ ಸುಧಾ, ಸಮಾಜ ಕಾರ್ಯಕರ್ತರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ಗುರುರಾಜ ಇಟಗಿ ಇದ್ದರು.

click me!