Hijab Row ಸಮವಸ್ತ್ರ ಇಲ್ಲದೆ ಬಂದ್ರೆ 200 ರೂಪಾಯಿ ದಂಡ: ಕಾಲೇಜಿನಿಂದ ನೋಟಿಸ್

By Suvarna News  |  First Published Feb 19, 2022, 6:19 PM IST

* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು
* ಇದರ ಮಧ್ಯೆ ಸಮವಸ್ತ್ರ ಇಲ್ಲದೆ ಬಂದ್ರೆ 200 ರೂಪಾಯಿ ದಂಡ
* ಹಾಸನದ ಕಾಲೇಜೊಂದಲ್ಲಿ ನೋಟಿಸ್


ಹಾಸನ, (ಫೆ.19): ಉಡುಪಿಯಲ್ಲಿ (Udupi) ಶುರುವಾದ ಈ ಹಿಜಾಬ್ ವಿವಾದದ (Hijab Row) ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ.

ಇದರ ಮಧ್ಯೆ ಸಮವಸ್ತ್ರ (Uniform) ಇಲ್ಲದೆ ಬಂದರೆ 200 ರೂಪಾಯಿ ದಂಡ ಪಾವತಿಸಬೇಕು ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ನೋಟಿಸ್​ ಹಾಕಲಾಗಿದೆ.

Tap to resize

Latest Videos

Hijab Protest: ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌, 58 ಮಂದಿ ಸಸ್ಪೆಂಡ್‌

ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಗುರುತಿನ ಪತ್ರ ಹಾಕಿಕೊಂಡು ತರಗತಿಗೆ ಹಾಜರಾಗಬೇಕು ಎಂದು ಆಡಳಿತ ಮಂಡಳಿ ಆದೇಶಿಸಿದೆ. ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. 

ಒಂದು ವೇಳೆ ಮೊಬೈಲ್ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಶುಕ್ರವಾರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಕಾಲೇಜು ಈ ಸುತ್ತೋಲೆ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರವೂ ಸಹ ಪಿಯು ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಆದ್ರೆ, ಪದವಿ ಕಾಲೇಜುಗಳಿಗೆ ಯಾವುದೇ ಸಮವಸ್ತ್ರ ಕಡ್ಡಾಯ ಇಲ್ಲ ಎಂದು ಹೇಳಿದೆ.

ಹಿಜಾಬ್ ಕಿಚ್ಚು
ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದದ ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ.  ಇನ್ನು ಹಿಜಾಬ್‌ ವಿವಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.  

ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್‌ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್‌ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ. 

ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌
ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ‌ ಮಾಡಬೇಕಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ (S Sureshkumar) ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಶಿಕ್ಷಣ‌ ಮಂತ್ರಿಗಳಾದ ಶ್ರೀ ಬಿ ಸಿ. ನಾಗೇಶ್ (BC Nagesh) ಅವರುಗಳಿಗೆ  ಸುದೀರ್ಘ ಪತ್ರ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ‌ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ‌ (Education) ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ. 

ಶಿಕ್ಷಣ ಇಲಾಖೆ (Education Department) ಹೊಸ ನಾಯಕತ್ವದೊಂದಿಗೆ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಸಮವಸ್ತ್ರದ ಬಗ್ಗೆ ಹೆಮ್ಮೆ ಪಡಬೇಕು. ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕಾದರೆ ಶಿಕ್ಷಣ ಇಲಾಖೆಯ ಕಾರ್ಯವು ಮಹತ್ವದ್ದಾಗಿರಬೇಕು ಎಂದು ಶಾಸಕ ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಲಯವು ಸಾಂವಿಧಾನಿಕ ಅವಕಾಶಗಳನ್ನು ನೋಡುತ್ತಿದೆ. ಆದರೆ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದ ಸರ್ಕಾರದ ಪರ ವಕೀಲ

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹಿಜಾಬ್ ಪ್ರಕರಣದಲ್ಲಿ (Hijab Issue) ಶುಕ್ರವಾರ ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ (Advocate General Prabhu Navadgi) ವಾದ ಮಂಡಿಸಿದರು. ಹಿಜಾಬ್ ಎನ್ನುವುದು ಎಂದಿಗೂ ಇಸ್ಲಾಂ ನ ಅವಿಭಾಜ್ಯ ಅಂಗವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಏನೇ ತೊಂದರೆ ಆದರೂ ಶಿಕ್ಷಕರ ಸಮಿತಿಯ ಮುಂದೆ ಹೋಗಬಹುದು. ಶಿಕ್ಷಣ ಇಲಾಖೆಯ 12ನೇ ಕಲಂ ನ ಅಡಿ ರಚನೆ ಮಾಡಿರುವ ಸಮಿತಿ ಇದಾಗಿದೆ ಎಂದು ನಾವದಗಿ ವಾದ ಮಂಡನೆ ಮಾಡಿದ್ದಾರೆ.

click me!