ಪಠ್ಯದಲ್ಲಿ ದಲಿತರ ಹತ್ಯಾಕಾಂಡ ಮಾಹಿತಿ ಏಕಿಲ್ಲ?: ಹನುಮಂತಯ್ಯ

By Govindaraj S  |  First Published Jul 13, 2022, 4:30 AM IST

‘ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ತಿಳಿಸಲು ಯತ್ನಿಸುತ್ತಿದೆ. ಆದರೆ, ದಲಿತರ ಮೇಲೆ ನಡೆದ ಹತ್ಯಾಕಾಂಡದ ಬಗ್ಗೆ ಯಾಕೆ ತಿಳಿಸಿಲ್ಲ. ಮಕ್ಕಳಿಗೆ ಹತ್ಯಾಕಾಂಡಗಳ ಬಗ್ಗೆ ಬೋಧನೆ ಮಾಡಿದರೆ ಅವರ ಮನಃಸ್ಥಿತಿ ಏನಾಗುತ್ತದೆ ಎಂಬ ಕಾಳಜಿ ಇದೆಯೇ?’ ಎಂದು ರಾಜ್ಯಸಭೆ ಸದಸ್ಯ ಎಲ್‌. ಹನುಮಂತಯ್ಯ ಪ್ರಶ್ನಿಸಿದ್ದಾರೆ.


ಬೆಂಗಳೂರು (ಜು.13): ‘ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ತಿಳಿಸಲು ಯತ್ನಿಸುತ್ತಿದೆ. ಆದರೆ, ದಲಿತರ ಮೇಲೆ ನಡೆದ ಹತ್ಯಾಕಾಂಡದ ಬಗ್ಗೆ ಯಾಕೆ ತಿಳಿಸಿಲ್ಲ. ಮಕ್ಕಳಿಗೆ ಹತ್ಯಾಕಾಂಡಗಳ ಬಗ್ಗೆ ಬೋಧನೆ ಮಾಡಿದರೆ ಅವರ ಮನಃಸ್ಥಿತಿ ಏನಾಗುತ್ತದೆ ಎಂಬ ಕಾಳಜಿ ಇದೆಯೇ?’ ಎಂದು ರಾಜ್ಯಸಭೆ ಸದಸ್ಯ ಎಲ್‌. ಹನುಮಂತಯ್ಯ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಬಿಜೆಪಿಯು ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಹಾಗೂ ಹೈದರಾಲಿ ಅವರ ಪಠ್ಯ ತೆಗೆಯುತ್ತೇವೆ ಎಂದು ಜನರಿಗೆ ನಂಬಿಸಿ, ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಕುವೆಂಪು ಅವರ ವಿಚಾರ ತಿರುಚುವ ಪ್ರಯತ್ನ ಮಾಡಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸೇರಿಸುವ ಇವರು ದಲಿತರ ಹತ್ಯಾಕಾಂಡ ಯಾಕೆ ಸೇರಿಸಿಲ್ಲ? ಶಂಕರಾಚಾರ್ಯರು ಅನೇಕ ಬೌದ್ಧ ಸ್ತೂಪಗಳನ್ನು ಒಡೆದು ಹಾಕಿದ್ದಾರೆ. ಅದನ್ನು ಯಾಕೆ ಸೇರಿಸಿಲ್ಲ?’ ಎಂದು ಪ್ರಶ್ನಿಸಿದರು.

Tap to resize

Latest Videos

undefined

Bengaluru: ಚಕ್ರತೀರ್ಥ ಸಮಿತಿಯ ಪಠ್ಯಕ್ಕೆ ಬರಗೂರು ರಾಮಚಂದ್ರಪ್ಪ ಕಿಡಿ

‘ಪಠ್ಯದಲ್ಲಿ ಕಾಶ್ಮೀರಿ ಪಂಡಿತರು, ದಲಿತರು, ಮುಸ್ಲೀಮರು, ಕ್ರೈಸ್ತರ ಹತ್ಯಾಕಾಂಡಗಳ ಬಗ್ಗೆ ಸೇರಿಸಿದರೆ ನಮ್ಮ ಪಠ್ಯಗಳು ಹತ್ಯಾಕಾಂಡಗಳ ಸರಪಳಿಯಾಗುತ್ತವೆ. ನಮ್ಮ ಮಕ್ಕಳಿಗೆ ಇದನ್ನು ಕಲಿಸಬೇಕಾ? ಈ ರೀತಿ ಕಲಿತ ಮಕ್ಕಳು ಮುಂದೆ ಕ್ರೂರ ಪ್ರಜೆಯಾಗುವ ಸಾಧ್ಯತೆಯಿದೆ. ಇಂತಹ ಪಠ್ಯವನ್ನು ಮುಂದುವರೆಸುವ ದುಸ್ಸಾಹಸಕ್ಕೆ ಕೈ ಹಾಕದೆ ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಆರೋಗ್ಯಕರವೇ?- ಬಿಕೆಸಿ: ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್‌ ಮಾತನಾಡಿ, ಹಿಂದೂಗಳ ಹತ್ಯಾಕಾಂಡವನ್ನು ಪಠ್ಯದಲ್ಲಿ ಸೇರಿಸುವುದು ಮಕ್ಕಳಲ್ಲಿ ಆರೋಗ್ಯಕರ ಚಿಂತನೆ ರೂಪಿಸುತ್ತದೆಯೇ ಎಂಬುದನ್ನು ಅರಿಯಬೇಕು. ಸರ್ಕಾರ ಯಾಕೆ ಕುವೆಂಪು, ಅಂಬೇಡ್ಕರ್‌, ನೆಹರೂ ಹಾಗೂ ಗಾಂಧಿ ಅವರನ್ನು ಯಾಕೆ ಈ ರೀತಿ ಅಪಮಾನ ಮಾಡುತ್ತಿದ್ದಾರೆ ಎಂಬುದನ್ನು ಜನರು ಅರಿಯಬೇಕು ಎಂದು ಹೇಳಿದರು.

ನಾರಾಯಣ ಗುರು ಪಾಠ ಮತ್ತೆ ಸಮಾಜ ವಿಜ್ಞಾನಕ್ಕೇ ಸೇರ್ಪಡೆ: ಶಾಲಾ ಪಠ್ಯ ಪರಿಷ್ಕರಣೆ ನಂತರ ಕನ್ನಡ ವಿಷಯದ ಪಠ್ಯಪುಸ್ತಕಕ್ಕೆ ಸೇರಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ಅವರ ಪಾಠವನ್ನು ವಾಪಸ್‌ ಸಮಾಜ ವಿಜ್ಞಾನ ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರವಷ್ಟೆ ನಗರದಲ್ಲಿ ಸಚಿವ ನಾಗೇಶ್‌ ಅವರನ್ನು ಭೇಟಿ ಮಾಡಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಅವರು ನಾರಾಯಣಗುರುಗಳ ಪಾಠವನ್ನು ಸಮಾಜ ವಿಜ್ಞಾನದಲ್ಲಿ ಕೈಬಿಟ್ಟು ಕನ್ನಡ ಭಾಷಾ ವಿಷಯಕ್ಕೆ ಸೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. 

ನಾರಾಯಣಗುರುಗಳ ಕುರಿತ ಪಾಠ ಸಮಾಜ ವಿಜ್ಞಾನ ಪಠ್ಯದಲ್ಲಿದ್ದರೆ ಎಲ್ಲ ಮಕ್ಕಳೂ ಓದುತ್ತಾರೆ. ಕನ್ನಡ ಭಾಷಾ ಪಠ್ಯದಲ್ಲಿದ್ದರೆ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುವ ಮಕ್ಕಳು ಮಾತ್ರ ಓದುತ್ತಾರೆ. ಹಾಗಾಗಿ ಈ ಪಾಠವನ್ನು ಸಮಾಜ ವಿಜ್ಞಾನ ಪಠ್ಯಕ್ಕೆ ವಾಪಸ್‌ ಸೇರಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕೂಡ ಜೊತೆಗಿದ್ದರು. 

Textbook Row; ಸರ್ಕಾರದ ವಿರುದ್ಧ ನಾರಾಯಣ ಗುರು ವಿಚಾರ ವೇದಿಕೆ ಪ್ರತಿಭಟನೆ

ಇದರ ಬೆನ್ನಲ್ಲೇ ಸಚಿವರು ನಾರಾಯಣ ಗುರುಗಳ ಪಾಠವನ್ನು ಕನ್ನಡ ಭಾಷಾ ಪಠ್ಯದಿಂದ ಕೈಬಿಟ್ಟು ಸಮಾಜ ವಿಜ್ಞಾನ ವಿಷಯಕ್ಕೆ ಮರು ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್‌ ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಈ ಹಿಂದೆ ನಾರಾಯಣ ಗುರುಗಳ ಪಾಠವನ್ನು ಸಮಾಜ ವಿಜ್ಞಾನ ಪಠ್ಯದಿಂದ ಕೈಬಿಟ್ಟಿದ್ದ ಬಗ್ಗೆ ತೀವ್ರ ವಿವಾದ ಆಗಿತ್ತು. ಆಕ್ಷೇಪಗಳು ವ್ಯಕ್ತವಾದ ಬಳಿಕ ಕನ್ನಡ ಭಾಷಾ ವಿಷಯಕ್ಕೆ ಸರ್ಕಾರ ಸೇರಿಸಿತ್ತು.

click me!