Ukraine For Indian Students: ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಲು ಪ್ರೇರಣೆ ಏನು?

By Suvarna News  |  First Published Feb 26, 2022, 6:36 PM IST

ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ  ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ  ಕಡಿಮೆಯಾಗಿರುವುದೇ ಉಕ್ರೇನ್‌ ಗೆ ತೆರಳಲು ಪ್ರೇರಣೆಯಾಗಿದೆ.


ಬೆಂಗಳೂರು(ಫೆ.26): ರಷ್ಯಾ- ಉಕ್ರೇನ್ (Russia-Ukraine) ಸಂಘರ್ಷದ ನಡುವೆ ಪೂರ್ವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರೊಮೇನಿಯಾ ಮತ್ತು ಹಂಗೇರಿಯಂತಹ ಇತರ ಸುರಕ್ಷಿತ ನೆರೆಯ ದೇಶಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಹೀಗೆ ಸಿಲುಕಿರುವವರಲ್ಲಿ ಬಹುತೇಕ ಮಂದಿ ಟೌನ್ ನ್ಯಾಷನಲ್ ಮೆಡಿಕಲ್ ಯೂನಿರ್ವಸಿಟಿ, ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ (kharkiv national university ukraine), ಇವಾನೊ - ಫ್ರಾನ್ ಕಿವ್ಸ್ಕ್  ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.

ಈ ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ  ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆಯಾಗಿರುವುದರಿಂದ ಭಾರತದ ವಿದ್ಯಾರ್ಥಿಗಳು ಉಕ್ರೇನ್ ಗೆ ತೆರಳಲು ಪ್ರೇರಣೆಯಾಗಿದೆ.

Tap to resize

Latest Videos

ಮಾತ್ರವಲ್ಲ ವಿಶ್ವ ಆರೋಗ್ಯ ಸಂಸ್ಥೆ (WHO), ಯುರೋಪಿಯನ್ ಕೌನ್ಸಿಲ್ ಮತ್ತು ಇತರ ಜಾಗತಿಕ ಸಂಸ್ಥೆಗಳು ಸೇರಿದಂತೆ ಉಕ್ರೇನ್‌ನಲ್ಲಿ ಗಳಿಸಿದ ಪದವಿಗಳನ್ನು ವಿಶ್ವದಾದ್ಯಂತ ಗುರುತಿಸಲಾಗಿದೆ. ಇದಲ್ಲದೆ, ಉಕ್ರೇನ್‌ನಲ್ಲಿ ಅಧ್ಯಯನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಯುರೋಪ್‌ನಲ್ಲಿ ಶಾಶ್ವತ ನಿವಾಸ ಮತ್ತು ವಸಾಹತು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Indian Army Recruitment 2022: 10ನೇ ತರಗತಿಯಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗವಕಾಶ

ವೈದ್ಯಕೀಯ ಕೋರ್ಸ್‌ಗಳ ಹೊರತಾಗಿ, ಕೆಲವು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೂ ದಾಖಲಾಗಿದ್ದಾರೆ. ಉಕ್ರೇನ್‌ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ವೆಬ್‌ಸೈಟ್ ವರದಿ ಪ್ರಕಾರ, ಉಕ್ರೇನ್‌ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳಿದ್ದಾರೆ ಮತ್ತು ಅವರಲ್ಲಿ 18,000 ವಿದ್ಯಾರ್ಥಿಗಳೇ ಆಗಿದ್ದಾರೆ. ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 76,000 ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರು ದೊಡ್ಡ ಗುಂಪನ್ನು ಹೊಂದಿದ್ದಾರೆ.

ಕರ್ನಾಟಕದಲ್ಲಿ ಶ್ರೀಮಂತರು ಮಾತ್ರ ವೈದ್ಯಕೀಯ ಶಿಕ್ಷಣ ಮಾಡಬಹುದು, ಮಧ್ಯಮ ವರ್ಗದ ಕುಟುಂಬಗಳು ಜಾಗತಿಕ ಮಾನ್ಯತೆಯ ಚಿಂತನೆಗಳೊಂದಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಉಕ್ರೇನ್ ಗೆ ಕಳುಹಿಸುತ್ತಾರೆ ಎಂದು ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಉಡುಪಿಯ ಕೆಮ್ಮಣ್ಣುವಿನ ಗ್ಲೇನ್ ವಿಲ್ ಪರ್ನಾಂಡೀಸ್ ತಂದೆ ಮೆಲ್ವಿನ್ ಫೆರ್ನಾಂಡಿಸ್ ಹೇಳುತ್ತಾರೆ. 

ONGC Recruitment 2022: ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿ

ಕರ್ನಾಟಕದಲ್ಲಿ ನೀಟ್ ಮೂಲಕ ಸೀಟು ದೊರೆಯದಿದ್ದರೆ ಐದೂವರೆ ವರ್ಷಗಳಿಗೆ 60 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ, ಉಕ್ರೇನ್ ಯೂನಿವರ್ಸಿಟಿಗಳಲ್ಲಿ ನನ್ನ ಮಗ ಆರು ವರ್ಷಗಳಿಗೆ 35 ರಿಂದ 40 ಲಕ್ಷ ರೂಪಾಯಿ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪೂರೈಸಬಹುದಾಗಿದೆ. ದುಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಮಗನಿಗೆ ಉಕ್ರೇನ್ ಉತ್ತಮ ಸ್ಥಳವೆಂದು ಯೋಚಿಸಿದ್ದಾಗಿ ಅವರು ತಿಳಿಸಿದರು. 

ಭಾರತದಲ್ಲಿ ಕೈಗೆಟ್ಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆಯದವರು ಎಂಬಿಬಿಎಸ್ ಶಿಕ್ಷಣಕ್ಕಾಗಿ ಯುಎಸ್ ಎಸ್ ಆರ್ ನ ಮಾಜಿ ರಾಷ್ಟ್ರಗಳಿಗೆ ತೆರಳುವುದಾಗಿ ಟ್ರೇಂಡ್ ಆಗಿದೆ ಎಂದು ಉಡುಪಿಯ ಅಕಾಡೆಮಿಕ್ ತಜ್ಞ ವಿಜಯ್ ಪಿ ರಾವ್ ಹೇಳಿದರು. 

ಉಕ್ರೇನ್ ನಲ್ಲಿ 4 ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯನ್ನು ತಡೆದುಕೊಂಡು ಬಂಕರ್ ನಲ್ಲಿ ಆಶ್ರಯ ಪಡೆದುಕೊಂಡಿರುವುದಾಗಿ ಗ್ಲೇನ್ ವಿಲ್ ಫರ್ನಾಂಡೀಸ್ ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಶನಿವಾರದವರೆಗೂ ಕೈವ್ ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

click me!