ಸೆಕೆಂಡ್ ಪಿಯು ಮುಗಿದ್ಮೇಲೆ ಯಾವ ಕೋರ್ಸ್ ಮಾಡಬೇಕು?

By Suvarna News  |  First Published Jun 15, 2022, 3:25 PM IST

*ದ್ವಿತೀಯ ಪಿಯು ರಿಸಲ್ಟ್ ಸದ್ಯದಲ್ಲೇ ಅನೌನ್ಸ್ ಆಗಲಿದೆ, ಆ ಬಳಿಕ ಕೋಸ್ ಆಯ್ಕೆ ಗೊಂದಲ ಸಹಜ
*12ನೇ ತರಗತಿಯ ಬಳಿಕ ಬಹಳಷ್ಟು ಆಯ್ಕೆಗಳು ವಿದ್ಯಾರ್ಥಿಗಳ ಮುಂದೆ ತೆರೆದುಕೊಳ್ಳಲಿವೆ
*ಯಾವ ರೀತಿಯ ಕೋರ್ಸುಗಳನ್ನು ಮಾಡಬೇಕು, ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಉತ್ತಮ


ದ್ವಿತೀಯ ಪಿಯುಸಿ (PUC) ಅಥವಾ 12ನೇ ತರಗತಿ, ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ ಘಟ್ಟ. ತಮ್ಮ ಮುಂದಿನ ಭವಿಷ್ಯದ ಹಾದಿ ಹಾಗೂ ವೃತ್ತಿಜೀವನವನ್ನ ನಿರ್ಧರಿಸಬೇಕಾದ ಹಂತವಿದು. ಸಾಕಷ್ಟು ಯೋಜನೆ ಮತ್ತು ಚಿಂತನೆ ಮಾಡಿ, ಮುಂದಿನ ಪದವಿ (Degree) ಅಥವಾ ಡಿಪ್ಲೋಮಾ ಕೋರ್ಸ್ (Diploma Course) ಗಳನ್ನ ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ಯಾವ ವಿಷಯದಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದೆ? ಮುಂದೆ ಯಾವ ಕೋರ್ಸ್ ಸೇರಬೇಕು? ಯಾವ ಕೋರ್ಸ್ ಮಾಡಿದ್ರೆ  ಪ್ರೊಫೆಷನಲ್ ಕರಿಯರ್ ಉತ್ತಮವಾಗಿರುತ್ತದೆ - ಹೀಗೆ ಸಾಕಷ್ಟು ಲೆಕ್ಕಾಚಾರ ಹಾಕಿ, ತಿಳಿದವರಿಂದ, ಮಾರ್ಗದರ್ಶಿಗಳಿಂದ ಉತ್ತಮ ಸಲಹೆ ಪಡೆದು ತಮ್ಮ ನೆಚ್ಚಿನ ಕೋರ್ಸ್ ಮಾಡೋದು ಉತ್ತಮ.  ದ್ವಿತೀಯ ಪಿಯುಸಿ ಮುಗಿದ ನಂತರ ಜಾಗರೂಕತೆಯಿಂದ ಮುಂದಿನ ಹಾದಿಯನ್ನ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಆಸಕ್ತಿಗಳು, ಉದ್ಯೋಗ ವ್ಯಾಪ್ತಿ ಮತ್ತು ಅವಕಾಶಗಳು ಇತ್ಯಾದಿಗಳಂತಹ ವಿವಿಧ ಅಂಶಗಳನ್ನು ನೀವು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯನ್ನ ನಿಭಾಯಿಸಲು ನೆರವಾಗುವಂತೆ ನಿಮಗೆ ಒಂದಷ್ಟು ಮಾಹಿತಿ ನೀಡೋ ಪ್ರಯತ್ನ ನಮ್ಮದು. ನೀವು 12 ನೇ ತರಗತಿಯಲ್ಲಿ ವಿಜ್ಞಾನದ (PCM, PCB ಮತ್ತು PCMB) ವಿಷಯ ಅಭ್ಯಾಸ ಮಾಡಿದ್ರೆ,  ಕೆಲವು ಉತ್ತಮ ಕೋರ್ಸ್‌ಗಳ ಪಟ್ಟಿ ಇಲ್ಲಿದೆ.  

ಬಿ.ಎಸ್ಸಿ  ಕೋರ್ಸ್‌ಗಳು: ಬಿ.ಎಸ್ಸಿ  ಅಗ್ರಿಕಲ್ಚರ್ (B.Sc. Agriculture), ಬಿ.ಎಸ್ಸಿ ಹಾರ್ಟಿಕಲ್ಚರ್ (B.Sc. Horticulture), ಬಿ.ಎಸ್ಸಿ  ಫಾರೆಸ್ಟ್ರಿ (B.Sc. Forestry), ಬಿ.ಎಸ್ಸಿ ಐಟಿ (B.Sc. IT), ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ (B.Sc. Computer Science), ಬಿ.ಎಸ್ಸಿ ಕೆಮಿಸ್ಟ್ರಿ(B.Sc. Chemistry),ಬಿ.ಎಸ್ಸಿ ಮ್ಯಾಥಮೆಟಿಕ್ಸ್ (B.Sc. Mathematics).

Tap to resize

Latest Videos

ಬಿ.ಎಸ್ಸಿ ಫಿಸಿಕ್ಸ್ (B.Sc. Physics), ಬಿ.ಎಸ್ಸಿ ಹೊಟೇಲ್ ಮ್ಯಾನೇಜ್ಮೆಂಟ್ (B.Sc. Hotel Management), ಬಿ.ಎಸ್ಸಿ ನ್ಯಾಚುರಲ್ ಸೈನ್ಸ್ (B.Sc. Nautical Science) ,ಬಿ.ಎಸ್ಸಿ ಎಲೆಕ್ಟ್ರಾನಿಕ್ಸ್ (B.Sc. Electronics), ಬಿ.ಎಸ್ಸಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್(B.Sc. Electronics and Communication), ಬಿ.ಎಸ್ಸಿ ಬಯೋಟೆಕ್ನಾಲಜಿ (B.Sc. Biotechnology), ಬಿ.ಎಸ್ಸಿ ಎವಿಯೇಷನ್(B.Sc. Aviation), ಬಿ.ಎಸ್ಸಿ ಅನಿಮೇಷನ್ ಆಂಡ್ ಮಲ್ಟಿಮೀಡಿಯಾ (B.Sc. Animation and Multimedia) - ಪದವಿ ಕೋರ್ಸ್ಗಳನ್ನು ಮಾಡಬಹುದು. ಬಿ.ಎಸ್ಸಿ ನಂತರ ಎಂಎಸ್ಸಿ ಸ್ನಾತಕೋತ್ತರ ಪದವಿ ಮಾಡಿದ್ರೆ,    ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಬಹುದು. 

25 ಲಕ್ಷ ರೂ. ನಿವೃತ್ತಿ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ ಶಿಕ್ಷಕ, ಶ್ಲಾಘಿಸಿದ ಮೋದಿ

ಬಿ.ಇ. ಅಥವಾ ಬಿ.ಟೆಕ್ ಕೋರ್ಸ್‌ಗಳು:  ಮೆಕಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (Electrical Engiiniering), ಸಿವಿಲ್ ಇಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್(Chemical Engineering), ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್(Computer Science Engineering), ಐಟಿ ಇಂಜಿನಿಯರಿಂಗ್ ( IT Engineering), ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (Electronics Engineering), ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಎಂಜಿನಿಯರಿಂಗ್,  ಪೆಟ್ರೋಲಿಯಂ ಎಂಜಿನಿಯರಿಂಗ್ (Petroleum Engineering), ಏರೋನಾಟಿಕಲ್ ಇಂಜಿನಿಯರಿಂಗ್(Aeronautical Engineering), ಏರೋಸ್ಪೇಸ್ ಎಂಜಿನಿಯರಿಂಗ್ (Aerospace Engineering), ಆಟೋಮೊಬೈಲ್ ಎಂಜಿನಿಯರಿಂಗ್(Automobile Engineering), ಮೈನಿಂಗ್ ಇಂಜಿನಿಯರಿಂಗ್(Mining Engineering), ಬಯೋಟೆಕ್ನಾಲಜಿ ಎಂಜಿನಿಯರಿಂಗ್(BoiTechnology Engineering), ಅಗ್ರಿಕಲ್ಚರಲ್ ಇನ್ಫಾರ್ಮೇಶನ್ ಎಂಜಿನಿಯರಿಂಗ್(Agricultural Information Engineering) - ಇನ್ನು ಸಾಕಷ್ಟು ಸ್ಟ್ರೀಮ್ಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಅವಕಾಶಗಳಿವೆ.  ಎಂಜಿನಿಯರಿಂಗ್ ನಂತರ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಸಂಬಂಧಿತ ಉದ್ಯೋಗಗಳನ್ನು ಸುಲಭವಾಗಿ ಹುಡುಕಬಹುದು. ಪದವಿ ನಂತರ M.E./M.Tech ಮಾಡಿ, ಅಧ್ಯಾಪಕ ಕ್ಷೇತ್ರಕ್ಕೆ ಕಾಲಿಡಬಹುದು.

ಸೂಪರ್ ಸಂಬಳ ನೀಡುವ CA ಜಾಬ್, ಆದರೆ ಪರೀಕ್ಷೆ ಬರೆಯೋದು ಹೇಗೆ?

 ಇನ್ನು 12ನೇ ತರಗತಿಯಲ್ಲಿ ಫಿಸಿಕ್, ಕೆಮಿಸ್ಟ್ರಿ ಹಾಗೂ ಬಯಾಲಜಿ ಓದಿದ ವಿದ್ಯಾರ್ಥಿಗಳು ಮೆಡಿಕಲ್ ಪದವಿ ಕೋರ್ಸ್ಗಳನ್ನು ಮಾಡಬಹುದು. ಎಂಬಿಬಿಎಸ್(MBBS) ಬಿಡಿಎಸ್(BDS), ಬಿಎಎಂಎಸ್ (BAMS),  ಬಿಎಸ್ಸಿ ನರ್ಸಿಂಗ್ (B.Sc. Nursing), ಬಿಪಿಟಿ(BPT-Bachelor of Physiotherapy), ಪ್ಯಾರಾಮೆಡಿಕಲ್ ಕೋರ್ಸ್ಗಳಿಗೆ ಸೇರಬಹುದು.

click me!