Belagavi: ಆರ್‌ವಿ ಕಾಲೇಜಿನಲ್ಲಿ 'ವಿಟಿಯು-ತರಬೇತಿ ಹಾಗೂ ನಿಯೋಜಕರ ಸಮಾವೇಶ' ಯಶಸ್ವಿ

By Suvarna News  |  First Published Jan 30, 2023, 9:39 PM IST

ವಿಟಿಯು ಬೆಳಗಾವಿ ವತಿಯಿಂದ ನಗರದ ಪ್ರತಿಷ್ಟಿತ ಆರ್‌ವಿ ಕಾಲೇಜಿನಲ್ಲಿ ಇಂದು ಬೆಳಗ್ಗೆ 9 ಗಂಟೆಗೆ  'ವಿಟಿಯು - ತರಬೇತಿ ಹಾಗೂ ನಿಯೋಜಕರ ಸಮಾವೇಶ' ನಡೆಯಿತು. ಈ ಸಮಾವೇಶದ ಗುರಿ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಪರಿಣಾಮಕಾರಿ ಔದ್ಯೋಗಿಕ ತಂತ್ರಗಳನ್ನು ರೂಪಿಸುವುದು.


ಬೆಳಗಾವಿ (ಜ.30): ವಿಟಿಯು ಬೆಳಗಾವಿ ವತಿಯಿಂದ ನಗರದ ಪ್ರತಿಷ್ಟಿತ ಆರ್‌ವಿ ಕಾಲೇಜಿನಲ್ಲಿ ಇಂದು ಬೆಳಗ್ಗೆ 9 ಗಂಟೆಗೆ  'ವಿಟಿಯು - ತರಬೇತಿ ಹಾಗೂ ನಿಯೋಜಕರ ಸಮಾವೇಶ' ನಡೆಯಿತು. ಈ ಸಮಾವೇಶದ ಗುರಿ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಪರಿಣಾಮಕಾರಿ ಔದ್ಯೋಗಿಕ ತಂತ್ರಗಳನ್ನು ರೂಪಿಸುವುದು ಹಾಗೂ ವಿದ್ಯಾರ್ಥಿಗಳನ್ನು ಉದ್ಯಮ ಮಟ್ಟಕ್ಕೆ ತಯಾರಿಸುವುದು. ಈ ಸಮಾವೇಶವು ರಾಜ್ಯಾದ್ಯಂತ ಪ್ರಸಿದ್ಧ ಕಾಲೇಜಿನ ಮುಖ್ಯಸ್ಥರ ಭಾಷಣ, ಒಂದು ಕಾರ್ಯಾಗಾರ ಹಾಗೂ ಪ್ಯಾನೆಲ್ ಮಾತುಕತೆಗಳನ್ನು ಒಳಗೊಂಡಿದೆ. 

ಸುಮಾರು 150 ಕಾಲೇಜುಗಳಿಂದ ಪ್ಲೇಸ್ಮೆಂಟ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಸಭೆಯ ಸ್ವಾಗತ ಭಾಷಣವನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ ಎನ್ ಸುಬ್ರಹಮಣ್ಯನವರು ಸ್ವಾಗತಿಸಿ ಸಮಾವೇಶದ ಒಟ್ಟು ಕಾರ್ಯಸೂಚಿಯನ್ನು ತಿಳಿಸಿದರು. ಕಾರ್ಯಕ್ರಮ ಮುಖ್ಯ ಅತಿಥಿಯಾದ ಶ್ರಿ ಟಿ ಆರ್ ಪರಶುರಾಮನ್, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರು , ಟೊಯೊಟಾ ಇಂಡಸ್ಟ್ರಿ ಅವರು ಆತಿಥೇಯ ಭಾಷಣವನ್ನು ನೀಡಿ ಸಮಾವೇಶದ ಪ್ರಶಂಸೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ವಿಟಿಯುವಿನ ಉಪಕುಲಪತಿಗಳಾದ ಡಾ. ವಿದ್ಯಾಶಂಕರ್ ಅವರು ಅಫಿಲಿಯೇಟ್ಡ್ ಕಾಲೇಜುಗಳ ಮಹತ್ವವನ್ನು ತಿಳಿಸಿ ಮಾತನಾಡಿದರು. 

Tap to resize

Latest Videos

ಬೆಳಗಾವಿ ಜಿಲ್ಲೆಯ 18ಕ್ಕೆ 18 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ: ಸಿ.ಟಿ.ರವಿ

ಆರ್‌ಎಸ್‌ಎಸ್‌ಟಿಯ ಜಂಟಿ ಕಾರ್ಯದರ್ಶಿಗಳಾದ ಡಿ ಪಿ ನಾಗರಾಜ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಈ ನಡುವೆ ಆರ್‌ವಿ ಕಾಲೇಜಿನಲ್ಲಿ ಪ್ರತಿಷ್ಟಿತ ಆಫರ್‌ಗಳನ್ನು ಪಡೆದ ನಾಲ್ಕು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅವರ ಹೆಸರು ಹಾಗೂ ಕಂಪನಿಗಳ ವಿವರ ಇಂತಿದೆ. ರಕ್ಷಿತ್ ದತ್ತಾತ್ರೇಯ ಹೆಗ್ಡೆ - 90 ಎಲ್‌ಪಿಎ - ಯುಐಪಾಥ್ , ತರುಣ್ ಶ್ರೀವಾಸ್ತವ್, ವೀರಭದ್ರ ಹಾಗೂ ವೈಭವ್ ಪೋರ್ವಲ್ - 65 ಎಲ್‌ಪಿಎ - ಕಾನ್ಫ್ಲುಯೆನ್ಟ್. ಉಪಕುಲಪತಿಗಳಾದ ವಿದ್ಯಾಶಂಕರ್ ಅವರು ತರಬೇತಿಯ ಪ್ರಸ್ತಾವನೆಯನ್ನು ನೀಡಿದರು. ನಂತರ ಕಾರ್ಯಾಗಾರ ಶುರುವಾದ ಮೇಲೆ , ಶ್ರೀದೇವಿ ಶಿರ ಅವರು ಔದ್ಯೋಗಿಕ ಹಾಗೂ ಭವಿಷ್ಯದ ಕೌಶಲ್ಯಗಳ ವಿವರಣೆಯನ್ನು ನೀಡಿದರು .ಭಾಗವಹಿಸುವವರು ಉತ್ತಮವಾಗಿ ಸಂವಾದ ನಡೆಸಿದರು ಮತ್ತು ವಿವಿಧ ವಿಚಾರಗಳನ್ನು ಚರ್ಚಿಸಲಾಯಿತು.

ನಾನು ಡಿಕೆಶಿ ಅಣ್ಣ ತಮ್ಮಂದಿರಂತೆ ಇದ್ದೆವು- ಗ್ರಾಮೀಣ ಶಾಸಕಿ ಸಂಬಂಧ ಹಾಳು ಮಾಡಿದಳು: ರಮೇಶ್‌ ಜಾರಕಿಹೊಳಿ

ಈ ಸಮಾವೇಶವು ಹಲವಾರು ಪಟ್ಟಣೇತರ ಪ್ರದೇಶಗಳ ಕಾಲೇಜುಗಳ ಅಭಿವೃದ್ಧಿ ಹಾಗೂ ಔದ್ಯೋಗಿಕ ಅವಕಾಶಗಳ ಭವಿಷ್ಯದ ಕುರಿತು ತಿಳಿದುಕೊಳ್ಳುವುದಕ್ಕೆ ಸೂಕ್ತವಾಗಿದೆ. ನಂತರ 4 ಝೋನ್ ಗಳ ಅಧಿಕಾರಿಗಳು ತಮ್ಮ ತಮ್ಮ ಉದ್ದೇಶಗಳನ್ನು ಹೇಳಿ ಹಲವರಿಗೆ ಮಾರ್ಗದರ್ಶನ ನೀಡಿದರು. ಸಭೆಯು 'ಸ್ವಾವಲಂಬನೆಯ ಮೂಲಕ ಉದ್ಯೋಗ ಸೃಷ್ಟಿಸುದು ಹೀಗೆ' ಎಂಬ ಕಾರ್ಯಾಗಾರದ ಮೂಲಕ ಅಂತ್ಯಗೊಂಡಿತು. ಸಭೆಯ ವಂದನಾರ್ಪಣೆಯನ್ನು ಪ್ರೊ. ಎಸ್. ಕೆ ಅಂಬೇಕರ್ ಅವರಿಂದ ನೀಡಲಾಯಿತು.

click me!