ಸ್ಕೂಲಲ್ಲಿ ಮಕ್ಕಳಿಗೆ ಹೋಮ್ ವರ್ಕ್ ನೀಡೋದು ಸಾಮಾನ್ಯ. ಈ ಹೋಮ್ ವರ್ಕ್ ಬಗ್ಗೆ ಈಗ ಮತ್ತೆ ಚರ್ಚೆ ನಡೆದಿದೆ. ಬೇಕು, ಬೇಡಕ್ಕೆ ಮಹಿಳೆ ವಿಡಿಯೋ ಕಾರಣವಾಗಿದೆ.
ಟೀಚರ್ಸ್, ಪಾಲಕರಿಗೆ ಉದ್ದೇಶ ಪೂರ್ವಕವಾಗಿ ತೊಂದರೆ ನೀಡ್ತಾರೆ…. ಟೀಚರ್ ಮೇಲೆ ಹೀಗಂತ ಗಂಭೀರ ಆರೋಪ ಮಾಡಿರೋ ಮಹಿಳೆಯೊಬ್ಬಳ ವಿಡಿಯೋ ಫುಲ್ ವೈರಲ್ ಆಗಿದೆ. ಮಹಿಳೆ, ಮಕ್ಕಳಿಗೆ ನೀಡುವ ಹಾಲಿಡೇ ಹೋಂ ವರ್ಕ್ ಬಗ್ಗೆ ಈ ವೈರಲ್ ಆದ ವೀಡಿಯೋದಲ್ಲಿ ದೂರಿದ್ದಾಳೆ ಅಮ್ಮ. ಬರೀ 33 ಸೆಕೆಂಡ್ ಇರುವ ಈ ವಿಡಿಯೋವನ್ನು ಈವರೆಗೆ 7 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. 300ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದು, ಹೋಮ್ ವರ್ಕ್ ಬಗ್ಗೆ ಇಲ್ಲಿ ಗಂಭೀರ ವಾದ – ವಿವಾದ ನಡೆದಿರೋದನ್ನು ನೀವು ನೋಡ್ಬಹುದು.
ಇನ್ಸ್ಟಾಗ್ರಾಮ್ (Instagram) ನ Eminent Woke ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪ್ರತಿಯೊಬ್ಬ ಟೀಚರ್ (teacher) ಗೂ ನಾವು ನೀಡಿದ ಹೋಮ್ ವರ್ಕ್ (homework) ಮಕ್ಕಳು ಮಾಡೋದಿಲ್ಲ, ಅದನ್ನು ಪಾಲಕರು ಮಾಡ್ತಾರೆ ಎನ್ನುವ ಸತ್ಯ ಗೊತ್ತಿರುತ್ತೆ. ಆದ್ರೂ ಅವರು ಬೇಕೆಂದೆ ಮಕ್ಕಳಿಗೆ ಹೋಮ್ ವರ್ಕ್, ಪ್ರಾಜೆಕ್ಟ್ ನೀಡ್ತಾರೆ. ಪಾಲಕರು ರಜೆ ಎಂಜಾಯ್ ಮಾಡ್ಬಾರದು ಅನ್ನೋದೇ ಈ ಟೀಚರ್ ಗಳ ಉದ್ದೇಶ. ಅಪ್ಪ ಅಮ್ಮ ಕುಳಿತು ಪ್ರಾಜೆಕ್ಟ್ ಕಂಪ್ಲೀಟ್ ಮಾಡ್ತಾರೆ ಅನ್ನೋದು ಅವರಿಗೆ ಗೊತ್ತಿದೆ. ನೋಡಿ ಈಗ ನಾವು ಮಾಡ್ತಿದ್ದೇವೆ. ಮಕ್ಕಳು ಆಡ್ತಿದ್ದಾರೆ. ಕೈ ಮುಗಿದು ವಿನಂತಿ ಮಾಡ್ತೇನೆ, ಮಕ್ಕಳು ಖುದ್ದಾಗಿ ಮಾಡುವಷ್ಟು ಹೋಮ್ ವರ್ಕ್ ಮಾತ್ರ ನೀಡಿ ಅಂತಾ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾಳೆ.
undefined
ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ
ಮಹಿಳೆಯ ಈ ವಿಡಿಯೋಕ್ಕೆ ಜನರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ತಮ್ಮೆಲ್ಲ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಮ್ಮ ಪಕ್ಕದ ಮನೆಯಲ್ಲಿರುವ ನಾಲ್ಕನೇ ತರಗತಿ ಮಗುವಿಗೆ ಕಂಪ್ಯೂಟರ್ ಉತ್ಪಾದನೆ ಕುರಿತು ಪಿಪಿಟಿ ಸಿದ್ಧಪಡಿಸಲು ಹೇಳಿದ್ದಾರೆ. ಶಾಲೆಯಲ್ಲಿ ಓದುತ್ತಿರುವ 200 – 300 ಮಕ್ಕಳ ಮನೆಯಲ್ಲಿ ಕಂಪ್ಯೂಟರ್ ಇದೆ. ಹಾಗಾಗಿ ಅವರು ಪಿಪಿಟಿ ಬಳಕೆ ಕಲಿತಿದ್ದಾರೆ ಅಂತ ಸ್ಕೂಲ್ ನಲ್ಲಿ ಹೇಳಲಾಗ್ತಿದೆ. ಆ ಮಗುವಿನ ಕೆಲಸವನ್ನು ಈಗ ನಾನು ಮಾಡ್ತಿದ್ದೇನೆ ಎಂದು ಬಳಕೆದಾರರೊಬ್ಬರು ಅವರ ಕಷ್ಟ ತೋಡಿಕೊಂಡಿದ್ದಾರೆ.
ಅನೇಕ ಬಳಕೆದಾರರು ಮಹಿಳೆ ಮಾತನ್ನು ಒಪ್ಪಿದ್ದಾರೆ. ವಯಸ್ಸಿಗೆ ಮೀರಿದ ಪ್ರಾಜೆಕ್ಟ್ ಮಕ್ಕಳಿಗೆ ನೀಡಲಾಗುತ್ತೆ. ಇದ್ರಿಂದ ಮಕ್ಕಳು ಪ್ರಾಜೆಕ್ಟ್ ಮಾಡೋದು ಕಷ್ಟ ಅಂತಾ ಕೆಲ ಅಮ್ಮ – ಅಪ್ಪಂದಿರ ವಾದ. ಆದ್ರೆ ಇನ್ನು ಕೆಲ ಬಳಕೆದಾರರು ಶಾಲೆ ಹಾಗೂ ಹೋಮ್ ವರ್ಕ್ ಪರ ಕಮೆಂಟ್ ಮಾಡಿದ್ದಾರೆ.
ಶಾಲೆಯಲ್ಲಿ ಕೊಟ್ಟ ಪ್ರಾಜೆಕ್ಟ್, ಹೋಮ್ ವರ್ಕ್ ಗಳನ್ನು ಪಾಲಕರು ಯಾವುದೇ ಕಾರಣಕ್ಕೂ ಮಾಡ್ಬಾರದು. ಅದು ಮಕ್ಕಳ ಕೆಲಸ. ಮಕ್ಕಳಿಗೆ ಅದನ್ನು ಹೇಗೆ ಮಾಡ್ಬೇಕು ಅಂತ ಪಾಲಕರು ಕಲಿಸೋದು ಸರಿ. ಆದ್ರೆ ಪಾಲಕರೇ ಅದನ್ನು ಮಾಡಿದ್ರೆ, ಅದ್ರಿಂದ ಮಕ್ಕಳು ಏನನ್ನೂ ಕಲಿಯೋದಿಲ್ಲ ಎಂದಿದ್ದಾರೆ.
ಇನ್ನು ಕೆಲ ಬಳಕೆದಾರರು, ಮಕ್ಕಳು ಹಾಗೂ ಪಾಲಕರ ಮಧ್ಯೆ ಬಾಂಡಿಂಗ್ ಬೆಳೆಯಬೇಕೆನ್ನುವ ಕಾರಣಕ್ಕೆ ಹೋಮ್ ವರ್ಕ್, ಪ್ರಾಜೆಕ್ಟ್ ನೀಡಲಾಗುತ್ತೆ. ಇಬ್ಬರು ಒಟ್ಟಿಗೆ ಕುಳಿತು ಒಂದಿಷ್ಟು ಸಮಯ ಕಳೆಯುತ್ತಾರೆ. ಮನೆಯೇ ಮೊದಲ ಪಾಠಶಾಲೆ ಆಗಿರುವ ಕಾರಣ ಪಾಲಕರು ಕುಳಿತು ಮಕ್ಕಳಿಗೆ ಕಲಿಸಬೇಕು ಎಂದಿದ್ದಾರೆ.
16 ವರ್ಷದ ಈ ಹುಡುಗಿ 100 ಕೋಟಿಯ ಸ್ಟಾರ್ಟಪ್ ಕಟ್ಟಿ ಬೆಳೆಸಿದ ಮಾಲಕಿ!
ಇದು ಭಾರತದ ಅನೇಕ ಮನೆಯ ರಿಯಾಲಿಟಿ. ಮಕ್ಕಳು ಆಡ್ತಿದ್ರೆ ಪಾಲಕರು ಹೋಮ್ ವರ್ಕ್ ಮಾಡ್ತಿರುತ್ತಾರೆ. ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಇಲ್ಲ ಅನ್ನೋ ಕಾರಣಕ್ಕೆ ನಾವು ಆದೇಶದಲ್ಲೇ ಉಳಿದಿದ್ದು ಅಂತ ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ಮಹಿಳೆ ಹೋಮ್ ವರ್ಕ್ ವಿಡಿಯೋಕ್ಕೆ ಜನರು ಪರ ಹಾಗೂ ವಿರೋಧ ಎರಡೂ ಕಮೆಂಟ್ ನೀಡಿದ್ದಾರೆ.
Education system is doing this to parents ❌ pic.twitter.com/0UthwtwHyN
— Eminent Woke (@WokePandemic)