ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ

Published : Jul 02, 2024, 07:41 PM IST
ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ

ಸಾರಾಂಶ

ಕೋಲಾರದಲ್ಲಿ ಹೈಸ್ಕೂಲ್ ಮುಗಿಸಿ ಈಗಷ್ಟೇ ಪಿಯು ಕಾಲೇಜಿಗೆ ಸೇರಿಕೊಂಡಿದ್ದ ಅಪ್ರಾಪ್ತ ಬಾಲಕಿ ಕಾಲೇಜು ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಕೋಲಾರ (ಜು.02) ಕೋಲಾರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಈಗಷ್ಟೇ ಹದಿ ಹರೆಯದ ವಯಸ್ಸಿಗೆ ಕಾಲಿಟ್ಟ ಬಾಲಕಿ ಪ್ರೌಢಶಾಲೆಗೆ ಹೋಗುವಾಗಲೇ ಆಕೆಯ ಮನಸ್ಸು ಕೆಡಿಸಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇನ್ನು ಯುವತಿ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಳಾಗಿ ಪಿಯು ಕಾಲೇಜು ಸೇರಿದ್ದಾಳೆ. ಆದರೆ, ಕಾಲೇಜಿನ ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಹೌದು, ಕೋಲಾರದಲ್ಲಿ ಅಪ್ರಾಪ್ತರ ಮದುವೆ, 13 ವರ್ಷದ ಹಾಸ್ಟೆಲ್ ಬಾಲಕಿಗೆ ಹೆರಿಗೆ, ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣ, ಮರ್ಯಾದಾ ಹತ್ಯೆ ಪ್ರಕರಣಗಳು ಆಗಿಂದಾಗ್ಗೆ ಕಂಡುಬರುತ್ತಲೇ ಇರುತ್ತವೆ. ಇಂತಹ ಘಟನೆಗೆ ಸಾಕ್ಷಿಯಾಗುವಂತೆ ಮತ್ತೊಂದು ಘಟನೆ ಕೋಲಾರದ ಹೊರವಲಯದ ಕಾಲೇಜಿನಲ್ಲಿ ನಡೆದಿದೆ. ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಅನಾಮಿಕ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿಯೂ ಬಳಕೆ ಮಾಡಿಕೊಂಡಿದ್ದಾರೆ. ನಿರಂತರ ಅತ್ಯಾಚಾರ ಮಾಡಿದ ಪರಿಣಾಮ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ, ಬಾಲಕಿ ಗರ್ಭಿಣಿ ಆಗಿದ್ದರೂ ಈ ವಿಚಾರ ಹೆರಿಗೆ ಆಗುವವರೆಗೂ ಮನೆಯವರಿಗೆ ಗೊತ್ತಾಗದೇ ಹೇಗೆ ಗುಟ್ಟಾಗಿ ಕಾಪಾಡಿಕೊಳ್ಳಲಾಗಿತ್ತು ಎಂಬುದು ಆಶ್ಚರ್ಯಕ್ಕೆ ಒಳಗಾದ ವಿಚಾರವಾಗಿದೆ.

 

ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೇರಿದ್ದ ವಿದ್ಯಾರ್ಥಿನಿ ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿಗೆ ಹೋದ ಬಳಿಕ ಹೆರಿಗೆ ನೋವು ಕಾಣಿಸಿಕೊಂಡು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಕಾಲೇಜಿನ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ.
ಆಸ್ಪತ್ರೆಗೆ ಬಂದು ವಿದ್ಯಾರ್ಥಿನಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಕೆಯ ಹೇಳಿಕೆ ಪಡೆದುಕೊಂಡಿದ್ದಾರೆ. ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕಿ ಹಸ್ಕೂಲ್ ಓದುವಾಗಲೇ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಯುವಕನ ಬಗ್ಗೆ ಆಕೆ ಯಾವ ವಿಚಾರವನ್ನೂ ಹೇಳಿಲ್ಲ. ಅಪ್ತಾಪ್ತ ಬಾಲಕಿಯ ತಲೆಕೆಡಿಸಿ ಗರ್ಭಿಣಿ ಮಾಡಿದವನಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಅತ್ಯಾಚಾರ ಮಾಡಿದ ಯುವಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲಿ ಮಗಳು ತುಂಬು ಗರ್ಭಿಣಿ ಆಗಿದ್ದರೂ ಆಕೆಯ ಮನೆಯಲ್ಲಿ ಪೋಷಕರು, ಸ್ನೇಹಿತರಿಗೆ ಈ ವಿಚಾರ ಗೊತ್ತೇ ಆಗಲಿಲ್ವಾ ಎಂಬ ಪ್ರಶ್ನೆ ಮೂಡುತ್ತಿದೆ. ಜೊತೆಗೆ, ಹೈಸ್ಕೂಲ್ ಪಾಸಾಗಿ ಕಾಲೇಜು ಮೆಟ್ಟಿಲು ಹತ್ತಿದ ಯುವತಿಗೆ ಪ್ರೀತಿಯಲ್ಲಿ ಬಿದ್ದು ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿದ ನಂತರ ಹೊಟ್ಟೆ ಮುಂದಕ್ಕೆ ಬಂದರೂ ತಾನು ಗರ್ಭಿಣಿ ಎಂಬುದು ಆಕೆಗೆ ತಿಳಿದಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಇನ್ನು ಬಾಲಕಿಗೆ ಹಾಗೂ ಆಕೆಯ ಮನೆಯವರಿಗೆ ಗರ್ಭಿಣಿ ಎನ್ನುವ ವಿಚಾರ ಗೊತ್ತಿದ್ದರೂ ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ ಎಂದು ವಿಚಾರವನ್ನು ಮುಚ್ಚಿಟ್ಟಿದ್ದರಾ ಎಂಬ ಅನುಮಾನ ಕಂಡುಬರುತ್ತಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಎಲ್ಲ ವಿಚಾರವನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

PREV
Read more Articles on
click me!

Recommended Stories

ಗದ್ದೆ ಅಂಚಲ್ಲಿ uniform ಹಾಕ್ಕೊಂಡು ಎಣ್ಣೆ ಹೊಡೀತಾ ಇರೋ ಹೈಸ್ಕೂಲ್ ಹುಡ್ಗೀರು, parents shock! ವಿಡಿಯೋ ವೈರಲ್
15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ ಹುಡುಗ :18 ವರ್ಷದ ಯುವಕನ ತಿಂಗಳ ಆದಾಯ ಈಗ 6 ಲಕ್ಷ