‘ನಾಳೆಯಿಂದಲೇ ಶಾಲೆ ತೆರೆಯಿರಿ’

Kannadaprabha News   | Asianet News
Published : Dec 13, 2020, 07:34 AM IST
‘ನಾಳೆಯಿಂದಲೇ ಶಾಲೆ ತೆರೆಯಿರಿ’

ಸಾರಾಂಶ

ಕೊರೊನಾ ಸೋಂಕು ನಿಯಂತ್ರಿಸುವ ನೆಪದಲ್ಲಿ ಶಾಲೆ-ಕಾಲೇಜು ಮಾರ್ಚ್‌ ತಿಂಗಳಿನಿಂದಲೇ ಬಂದ್‌| ಪ್ರಸ್ತುತ ಸೋಂಕು ಕಡಿಮೆಯಾಗಿದೆ, ಸಮಾಜದಲ್ಲಿ ‘ಹರ್ಡ್‌ ಇಮ್ಯೂನಿಟಿ’ ಬೆಳೆದಿದೆ| ಒಂಬತ್ತು ತಿಂಗಳಾದರೂ ಶಾಲೆ ಆರಂಭಿಸದಿರುವುದು ಸರಿಯಲ್ಲ| 

ಬೆಂಗಳೂರು(ಡಿ.13):  ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಡಿ.15ರೊಳಗೆ ರಾಜ್ಯದಲ್ಲಿ ಎಲ್ಲ ಶಾಲೆ ಮತ್ತು ಪಿಯು ಕಾಲೇಜುಗಳನ್ನು ತೆರೆಯಬೇಕೆಂದು ಆಗ್ರಹಿಸಿ ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಮೈಸೂರ್‌ ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ನೆಪದಲ್ಲಿ ಶಾಲೆ-ಕಾಲೇಜುಗಳನ್ನು ಮಾರ್ಚ್‌ ತಿಂಗಳಿನಿಂದಲೇ ಮುಚ್ಚಲಾಗಿದೆ. ಪ್ರಸ್ತುತ ಸೋಂಕು ಕಡಿಮೆಯಾಗಿದೆ, ಸಮಾಜದಲ್ಲಿ ‘ಹರ್ಡ್‌ ಇಮ್ಯೂನಿಟಿ’ ಬೆಳೆದಿದೆ. ಮಕ್ಕಳ ಮೇಲೆ ಸೋಂಕಿನ ಪರಿಣಾಮ ತೀರಾ ಕಡಿಮೆ ಇದೆ. ಹೀಗಿದ್ದರೂ ಒಂಬತ್ತು ತಿಂಗಳಾದರೂ ಶಾಲೆಗಳನ್ನು ಆರಂಭಿಸದಿರುವುದು ಸರಿಯಲ್ಲ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಶಾಲೆ ಆರಂಭದ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುಧಾಕರ್‌

ಶಿಕ್ಷಣ ತಜ್ಞರಾದ ಡಾ. ನಿರಂಜನಾರಾಧ್ಯ, ಶ್ರೀಪಾದ ಭಟ್‌, ವಕೀಲ ನರಸಿಂಹಮೂರ್ತಿ, ಎಐಎಸ್‌ಎಫ್‌ ನಾಯಕಿ ಕೆ.ಜ್ಯೋತಿ, ಕೆವಿಎಸ್‌ನ ಸರೋವರ್‌ ಬೆಂಕಿಕೆರೆ, ಶಿಕ್ಷಣ ತಂತ್ರಜ್ಞಾನ ಕೇಂದ್ರದ ಗುರುಮೂರ್ತಿ ಕಾಶಿನಾಥ್‌, ಸಾಮಾಜಿಕ ಹೋರಾಟಗಾರ ಜಿ.ರವಿ, ಕರ್ನಾಟಕ ವಿಚಾರ ವೇದಿಕೆಯ ನಾಗೇಶ್ವರರ. ಎಐವೈಎಫ್‌ನ ಹರೀಶ್‌, ಆರ್‌ಟಿಇ ಪಾಲಕರ ಸಂಘದ ಯೋಗಾನಂದ ಮೊದಲಾದವರು ಪಾಲ್ಗೊಂಡಿದ್ದರು.
 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ