ಫೆಬ್ರವರಿ, ಮಾರ್ಚಲ್ಲಿ 10, 12ನೇ ಕ್ಲಾಸ್‌ ಪರೀಕ್ಷೆ

Kannadaprabha News   | Asianet News
Published : Dec 11, 2020, 09:15 AM IST
ಫೆಬ್ರವರಿ, ಮಾರ್ಚಲ್ಲಿ  10, 12ನೇ ಕ್ಲಾಸ್‌ ಪರೀಕ್ಷೆ

ಸಾರಾಂಶ

10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಪ್ರತಿ ವರ್ಷದಂತೆ ಫೆಬ್ರವರಿ-ಮಾರ್ಚಲ್ಲೇ ನಡೆಸಲಾಗುತ್ತದೆ ಮತ್ತು ಇವು ಆಫ್‌ಲೈನ್‌ನಲ್ಲೇ ನಡೆಯುತ್ತವೆ ಎಂದು  ಸ್ಪಷ್ಟಪಡಿಸಲಾಗಿದೆ

ನವದೆಹಲಿ (ಡಿ.11): ಕೊರೋನಾ ಹಿನ್ನೆಲೆಯಲ್ಲಿ 2021ರ ಕೇಂದ್ರೀಯ ಪಠ್ಯಕ್ರಮದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಪ್ರತಿ ವರ್ಷದಂತೆ ಫೆಬ್ರವರಿ-ಮಾರ್ಚಲ್ಲೇ ನಡೆಸಲಾಗುತ್ತದೆ ಮತ್ತು ಇವು ಆಫ್‌ಲೈನ್‌ನಲ್ಲೇ ನಡೆಯುತ್ತವೆ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಅದರೊಂದಿಗೆ, 2021ರ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ ಹಾಗೂ ಕಳೆದ ವರ್ಷದಂತೆ ಈ ವರ್ಷವೂ ಪರೀಕ್ಷೆ ತಡವಾಗುತ್ತದೆ ಎಂಬಿತ್ಯಾದಿ ವದಂತಿಗಳಿಗೆ ತೆರೆ ಎಳೆದಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಾಮ್‌ ಭಾರದ್ವಾಜ್‌, 2021ರ ಬೋರ್ಡ್‌ ಎಕ್ಸಾಮ್‌ಗಳು ಪ್ರತಿ ವರ್ಷದಂತೆ ಫೆಬ್ರವರಿ-ಮಾಚ್‌ರ್‍ ತಿಂಗಳಲ್ಲೇ ನಡೆಯಲಿವೆ. ಮತ್ತು ಇವುಗಳನ್ನು ಎಂದಿನಂತೆ ಆಫ್‌ಲೈನ್‌ನಲ್ಲೇ ನಡೆಸಲಾಗುತ್ತದೆ. ಕಳೆದ ಬಾರಿ ಕೊರೋನಾ ಕಾರಣಕ್ಕೆ ಕಡಿಮೆ ಅಂತರ ನೀಡಿ ತರಾತುರಿಯಲ್ಲಿ ಪರೀಕ್ಷೆ ನಡೆಸಿದಂತೆ ಈ ಬಾರಿ ಮಾಡದೆ ಪ್ರತಿಯೊಂದು ಪರೀಕ್ಷೆಗೂ ಸಾಕಷ್ಟುದಿನಗಳ ಅಂತರ ನೀಡಲಾಗುತ್ತದೆ.

ಸಿಇಟಿ 2ನೇ ಸುತ್ತಿನ ವೇಳಾಪಟ್ಟಿ ಪ್ರಕಟ ...

ಪ್ರಾಕ್ಟಿಕಲ್‌ ಪರೀಕ್ಷೆಗಳು ಕೂಡ ಎಂದಿನಂತೆ ನಡೆಯಲಿವೆ. ಅವುಗಳಿಗೆ ಸಿದ್ಧತೆ ಮಾಡಿಕೊಳ್ಳಲು ಶಾಲೆಗಳಿಗೆ 2 ತಿಂಗಳಿಗೂ ಹೆಚ್ಚು ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೆಇಇ ಮೇನ್‌, ನೀಟ್‌ ವಿಳಂಬ: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2021ರ ಜೆಇಇ ಮೇನ್‌ ಪರೀಕ್ಷೆ ಹಾಗೂ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ನೀಟ್‌ ಪರೀಕ್ಷೆ ಈ ವರ್ಷ ವಿಳಂಬವಾಗುವ ಸಾಧ್ಯತೆಯಿದೆ. ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ರದ್ದುಪಡಿಸುವುದಿಲ್ಲ. ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವ ಚಿಂತನೆ ನಡೆದಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ.

PREV
click me!

Recommended Stories

ಮುಂದಿನ ಶೈಕ್ಷಣಿಕ ವರ್ಷದಿಂದ ಗಣಿತ ಪರೀಕ್ಷಾ ಪದ್ಧತಿ ಬದಲಾವಣೆ ಬಹುತೇಕ ಫಿಕ್ಸ್, ವರದಿ ಕೊಡಲು ಶಿಕ್ಷಣ ಸಚಿವರ ಸೂಚನೆ
ಪ್ರಶ್ನೆಪತ್ರಿಕೆ ಸೋರಿಕೆ, ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಿಪರೇಟರಿ–2, 3 ಪರೀಕ್ಷೆಗೆ ಖಡಕ್ ರೂಲ್ಸ್!