Utkarsh Digital Classroom : ರಾಜಸ್ಥಾನದಲ್ಲಿ ಉತ್ಕರ್ಷ ಶಿಕ್ಷಾ ರಥ ಶುರು

By Suvarna News  |  First Published Apr 21, 2022, 3:20 PM IST

* ಇ-ಲರ್ನಿಂಗ್ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ವಿಶಿಷ್ಟ ಪ್ರಯತ್ನಕ್ಕೆ ಮುಂದಾದ  ಎಜುಟೆಕ್ ಕಂಪನಿ ಉತ್ಕರ್ಷ್ ಕ್ಲಾಸಸ್
* ಶಿಕ್ಷಾ ರಥ ರಾಜಸ್ಥಾನದ ಹಳ್ಳಿಗಳು, ನಗರಗಳಲ್ಲಿ ಸಂಚರಿಸಿ ಪ್ರಯೋಜನಗಳನ್ನು ತಿಳಿಸಲಿದೆ
* ಉತ್ಕರ್ಷ 6ನೇ ತರಗತಿಯಿಂದ 12ನೇ ತರಗತಿ ಮಕ್ಕಳಿಗೆ ಇ-ಲರ್ನಿಂಗ್ ಕೋರ್ಸ್ ಒದಗಿಸುತ್ತದೆ


ನವದೆಹಲಿ (ಏ.21): ಎಜುಟೆಕ್ ಕಂಪನಿ ಉತ್ಕರ್ಷ್ ಕ್ಲಾಸಸ್ (Utkarsh Classes) ರಾಜಸ್ಥಾನ (Rajasthan) ದ ವಿದ್ಯಾರ್ಥಿಗಳಿಗೆ ನೇರ ಡಿಜಿಟಲ್ ಕಲಿಕೆ (Digital Learning)ಯ ಅನುಭವವನ್ನು ನೀಡಲು ಮುಂದಾಗಿದೆ. ಇ-ಲರ್ನಿಂಗ್‌ನ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೊಬೈಲ್ ಡಿಜಿಟಲ್ ತರಗತಿಯ ‘ಶಿಕ್ಷಾ ರಥ’ (Shiksha Rath)ವನ್ನು ಪ್ರಾರಂಭಿಸಿದೆ.

ಮೊದಲ ಹಂತದಲ್ಲಿ, 'ಶಿಕ್ಷಾ ರಥ' ರಾಜ್ಯದ ಅನೇಕ ನಗರಗಳು ಮತ್ತು ಹಳ್ಳಿಗಳಲ್ಲಿ ಪೋಷಕರು ಮತ್ತು ಮಕ್ಕಳಲ್ಲಿ ಡಿಜಿಟಲ್ ಶಿಕ್ಷಣ (Disgital Education)ದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯ ಮೂಲಕ ಪೋಷಕರು ಡಿಜಿಟಲ್ ಸ್ಟುಡಿಯೊದ ಕಾರ್ಯನಿರ್ವಹಣೆಯನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ತಮ್ಮ ಮಕ್ಕಳು ಶಿಕ್ಷಕರಿಂದ ಹೇಗೆ ಕಲಿಯುತ್ತಾರೆ ಎಂಬುದನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು edtech ಕಂಪನಿ ತಿಳಿಸಿದೆ.

Tap to resize

Latest Videos

ಉತ್ಕರ್ಷ್ ತರಗತಿಗಳು ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು 6ನೇ ತರಗತಿ ಇಂದ 12ನೇ ತರಗತಿಗಳಿಗೆ ಶಾಲಾ ಶಿಕ್ಷಣಕ್ಕಾಗಿ ಇ-ಲರ್ನಿಂಗ್ ಕೋರ್ಸ್‌ಗಳನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ಮೂಲಕ, ವಿದ್ಯಾರ್ಥಿಗಳು ತಮ್ಮ ನಗರಕ್ಕೆ ‘ಶಿಕ್ಷಾ ರಥ’ ಭೇಟಿ ನೀಡಿದಾಗ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಕರನ್ನು ಭೇಟಿ ಮಾಡಲು ಮತ್ತು ಕಲಿಯಲು ಸಾಧ್ಯವಾಗುತ್ತದೆ.

 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ

ಶಿಕ್ಷಾ ರಥ ಏಪ್ರಿಲ್ 13 ರಂದು ಜೋಧ್‌ಪುರದಿಂದ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಧಾರ್ಮಿಕ ಸ್ಥಳವಾದ ರಾಮದೇವ್ರಾಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಪ್ರಾಯೋಗಿಕ ಹಂತದಲ್ಲಿ ಜೋಧಪುರ, ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳಲ್ಲಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಶಿಕ್ಷಾ ರಥ ಸಂಚರಿಸಲಿದೆ.

 ಉತ್ಕರ್ಷ್‌ನಲ್ಲಿ ನಾವು ದೇಶದ ಪ್ರತಿಯೊಂದು ಕುಟುಂಬಕ್ಕೂ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣವನ್ನು ಒದಗಿಸುತ್ತೇವೆ ಎಂದು ನಂಬುತ್ತೇವೆ. ಉತ್ಕರ್ಷ್ ಈ ವರ್ಷ ಎರಡು ದಶಕಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದರೊಂದಿಗೆ, ದೇಶದಲ್ಲಿ ಡಿಜಿಟಲ್ ಶಿಕ್ಷಣದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಯುವ ಪೀಳಿಗೆಯ ಭವಿಷ್ಯವನ್ನು ರೂಪಿಸುವಲ್ಲಿ ಅಗತ್ಯವಿರುವ ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನದ ಪಾತ್ರವನ್ನು ತಿಳಿಸಲು ನಾವು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಅಂತಾರೆ ಉತ್ಕರ್ಷ್ ಕ್ಲಾಸ್‌ಗಳ ಸಂಸ್ಥಾಪಕ ಮತ್ತು ಸಿಇಒ ನಿರ್ಮಲ್ ಗೆಹ್ಲೋಟ್ (Nirmal Gehlot).

ಅಂದಹಾಗೇ ಪೋಷಕರು ಕೂಡ ಈ ಡಿಜಿಟಲ್ ಸ್ಟುಡಿಯೋ (Digital Studio)ದ ಕೆಲಸವನ್ನು ನೋಡಬಹುದಾಗಿದೆ.  ತಮ್ಮ ಮಕ್ಕಳು ಉನ್ನತ ಶಿಕ್ಷಣ ತಜ್ಞರಿಂದ ಉತ್ತಮ ಕಲಿಕೆಯ ಅನುಭವವನ್ನು ಹೇಗೆ ಪಡೆಯಬಹುದು ಎಂಬುದನ್ನು ಗಮನಿಸಬಹುದು.  ಇದಲ್ಲದೆ, ಶಿಕ್ಷಾ ರಥವು ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಶಿಕ್ಷಕರಲ್ಲಿ "ಗುಪ್ತ ರತ್ನಗಳನ್ನು" ಗುರುತಿಸುತ್ತದೆ. ಅವರ ಶೈಕ್ಷಣಿಕ ವಿಷಯಗಳನ್ನು ತನ್ನ ಡಿಜಿಟಲ್ ವೇದಿಕೆಗಳ ಮೂಲಕ ದೇಶಾದ್ಯಂತ ವಿದ್ಯಾರ್ಥಿಗಳಿಗೆ ತಲುಪಿಸಲು ಅನುವು ಮಾಡಿಕೊಡುತ್ತದೆ. ಈ ಶಿಕ್ಷಾ ರಥದ ಯೋಜನೆ ಮೂಲಕ ಮುಂದಿನ ಎರಡು ವರ್ಷಗಳಲ್ಲಿ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಶಿಕ್ಷಾ ರಥವು ಆರಂಭದಲ್ಲಿ ದೇಶದ ಹಿಂದಿ ಹೃದಯಭಾಗ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ  ಪ್ರಯಾಣಿಸಲಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಾದ್ಯಂತ ಇನ್ನೂ 10 ಶಿಕ್ಷಾ ರಥಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಅಂತಾರೆ ನಿರ್ಮಲ್ ಗೆಹ್ಲೋಟ್.

ಹರಿಯಾಣದಲ್ಲಿ ಡ್ರೋನ್ ಪೈಲಟ್ ತರಬೇತಿ ಕೇಂದ್ರ!

ಈ ಡಿಜಿಟಲ್ ತರಗತಿ (Digital Class Room)ಯು ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಪರಿಣಾಮಕಾರಿ ಮತ್ತು ಸಮರ್ಥ ತಿಳುವಳಿಕೆಯೊಂದಿಗೆ ಶೈಕ್ಷಣಿಕ ಸೌಲಭ್ಯಗಳನ್ನು ವಿಸ್ತರಿಸುತ್ತದೆ. ಈ ಯೋಜನೆಯು ಯುವ ಪೀಳಿಗೆಯ ಭವಿಷ್ಯವನ್ನು ರೂಪಿಸುವಲ್ಲಿ ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.

click me!