ಗಗನಕ್ಕೇರಿರುವ ವಿದ್ಯಾರ್ಥಿ ವೀಸಾ ಬೇಡಿಕೆಯನ್ನು ಪೂರೈಸಿದ ಭಾರತದ U.S. ಮಿಷನ್

By Suvarna News  |  First Published Jun 13, 2024, 9:08 PM IST

ಕಳೆದ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುವ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2023 ರಲ್ಲಿ, ಭಾರತದ U.S. ಮಿಷನ್ 2018, 2019 ಮತ್ತು 2020 ರ ಒಟ್ಟು ವಿದ್ಯಾರ್ಥಿ ವೀಸಾಗಳಿಗಿಂತ ಹೆಚ್ಚಿನ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ.


ನವದೆಹಲಿ:  13 ಜೂನ್, 2024 ರಂದು, ಕಾನ್ಸುಲರ್ ಟೀಮ್ ಇಂಡಿಯಾ ತನ್ನ 8ನೇ ವಾರ್ಷಿಕ ವಿದ್ಯಾರ್ಥಿ ವೀಸಾ ದಿನದಂದು 3900 ವಿದ್ಯಾರ್ಥಿ ವೀಸಾ ಅರ್ಜಿದಾರರನ್ನು ಸಂದರ್ಶಿಸಿದೆ. ವಿದ್ಯಾರ್ಥಿ ವೀಸಾ ದಿನಕ್ಕಾಗಿ ಪ್ರಬಲ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣಕ್ಕೆ ನಮ್ಮ ದೃಢವಾದ ಬದ್ಧತೆ ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವೆ ಬೆಳೆಯುತ್ತಿರುವ ಶೈಕ್ಷಣಿಕ ಸಂಬಂಧಗಳನ್ನು ಮಿಷನ್ ಇಂಡಿಯಾ ಎತ್ತಿ ತೋರಿಸುತ್ತದೆ, ಇದರಲ್ಲಿ ಮಿಷನ್ ಸದಸ್ಯರು ಮತ್ತು EducationUSA ಸಹೋದ್ಯೋಗಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ಮಾಹಿತಿಯನ್ನು ಹಂಚಿಕೊಳ್ಳಲು ಅರ್ಜಿದಾರರೊಂದಿಗೆ ಸದಾ ಸಂವಹನ ನಡೆಸುತ್ತಾರೆ.

ರಾಯಭಾರಿ ಎರಿಕ್ ಗಾರ್ಸೆಟ್ಟಿ ರವರು ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ ಹೇಳಿದರು, “U.S. ಕ್ಯಾಂಪಸ್‌ನಲ್ಲಿರುವ ಪ್ರತಿಯೊಬ್ಬ ಅಂತರರಾಷ್ಟ್ರೀಯ ವಿದ್ಯಾರ್ಥಿಯು ಪ್ರಚಂಡ ಯಶಸ್ಸನ್ನು ಪ್ರತಿನಿಧಿಸುತ್ತಾನೆ - ಶೈಕ್ಷಣಿಕ ಉತ್ಕೃಷ್ಟತೆಯ ತಯಾರಿಗಾಗಿ ಬೇಕಾಗುವ ವರ್ಷಗಳ ಅಧ್ಯಯನ ಮತ್ತು ಕಠಿಣ ಪರಿಶ್ರಮ. ಈ ಹಿಂದೆ ಹೋದವರಂತೆ, ಇಂದಿನ ಭಾರತೀಯ ವಿದ್ಯಾರ್ಥಿಗಳು ಸಹ ಪ್ರಚಂಡ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಾರೆ - ನೀವು ಪಡೆದುಕೊಳ್ಳುವ ಜ್ಞಾನ, ನೀವು ಅನುಭವಿಸುವ ಹೊಸ ಕೌಶಲ್ಯಗಳು ಮತ್ತು ಅವಕಾಶಗಳು ಮತ್ತು ನೀವು ನಿರ್ಮಿಸುವ ಸಂಬಂಧಗಳು ಹೂಡಿಕೆಗೆ ಯೋಗ್ಯವಾಗಿರುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾರತದ ರಾಯಭಾರಿಯಾಗಿರುತ್ತಾನೆ. ನಾವು ಒಟ್ಟಾಗಿ U.S.-ಭಾರತ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ!”

Tap to resize

Latest Videos

undefined

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ: ಒಂದೂವರೆ ತಿಂಗಳಲ್ಲಿ ಐವರು ಬಲಿ

ಮಿನಿಸ್ಟರ್‌ ಕೌನ್ಸಲರ್‌ ಫಾರ್‌ ಕೌನ್ಸಲರ್‌ ಅಫೇರ್ಸ್‌ ರಸೆಲ್ ಬ್ರೌನ್ ಈ ಸಂದರ್ಭಕ್ಕೆ ಸಾಕ್ಷಿಯಾಗುತ್ತಾ, “ಈ ವರ್ಷ, ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತಿದೊಡ್ಡ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಗುಂಪಾಗಲು ಸಿದ್ಧರಾಗಿರುವುದರಿಂದ, ವಿದೇಶಾಂಗ ಇಲಾಖೆ ಮತ್ತು ನಮ್ಮ Education USA ಸಹೋದ್ಯೋಗಿಗಳು ವಿದ್ಯಾರ್ಥಿ ವೀಸಾ ದಿನದಂದು ಮತ್ತು ವಿದ್ಯಾರ್ಥಿ ಋತುವಿನ ಉದ್ದಕ್ಕೂ ವಿದ್ಯಾರ್ಥಿ ವೀಸಾ ಅರ್ಜಿದಾರರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ ” ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುವ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2023 ರಲ್ಲಿ, ಭಾರತದ U.S. ಮಿಷನ್ 2018, 2019 ಮತ್ತು 2020 ರ ಒಟ್ಟು ವಿದ್ಯಾರ್ಥಿ ವೀಸಾಗಳಿಗಿಂತ ಹೆಚ್ಚಿನ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ. ಈ ಅಭೂತಪೂರ್ವ ಬೆಳವಣಿಗೆಯು 2021 ಮತ್ತು 2023 ರ ನಡುವೆ ಇತರ ಎಲ್ಲಾ ಬಗೆಯ ವೀಸಾಗಳ ಬೇಡಿಕೆಯಲ್ಲಿ 400 ಪ್ರತಿಶತ ಏರಿಕೆಯನ್ನು ಮಿಷನ್ ಪೂರೈಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಮತ್ತು ಅವರ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ U.S. ಸರ್ಕಾರದ ಪ್ರಸ್ತುತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಭಾರತದಲ್ಲಿನ U.S. ರಾಯಭಾರ ಕಚೇರಿ ಮತ್ತು ದೂತಾವಾಸಗಳು ಭಾರತದಿಂದ ವಿದ್ಯಾರ್ಥಿ ವೀಸಾ ಅರ್ಜಿದಾರರ ನಿರಂತರ ಹೆಚ್ಚಳವನ್ನು ನಿರೀಕ್ಷಿಸುತ್ತವೆ ಮತ್ತು ಈ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು 2024 ರ  ವಿದ್ಯಾರ್ಥಿ ವೀಸಾ ಋತುವಿನ ಅವಧಿಯನ್ನು ವಿಸ್ತರಿಸಿವೆ.

ಭಾರತೀಯ ವಿದ್ಯಾರ್ಥಿಗಳಿಗೆ ಯುನೈಟೆಡ್ ಸ್ಟೇಟ್ಸ್ ಪ್ರಥಮ ಉನ್ನತ ಶಿಕ್ಷಣ ತಾಣವಾಗಿ ಉಳಿದಿದೆ, ಅಧ್ಯಯನಗಳ ಪ್ರಕಾರ 69 ಪ್ರತಿಶತ ಭಾರತೀಯ ವಿದ್ಯಾರ್ಥಿಗಳು ಇತರ ಯಾವುದೇ ದೇಶಗಳಿಗಿಂತ U.S. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಭಾರತೀಯ ವಿದ್ಯಾರ್ಥಿಗಳು, ಈಗಾಗಲೇ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂತರರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳ ದೊಡ್ಡ ಗುಂಪಾಗಿದ್ದು, ಮೌಲ್ಯಯುತವಾದ ನೈಜ-ಪ್ರಪಂಚದ ಅನುಭವವನ್ನು ಪಡೆಯುತ್ತಿರುವುದು, ಉದ್ಯೋಗ-ಆಧಾರಿತ U.S. ವೀಸಾಗಳನ್ನು ಸ್ವೀಕರಿಸುತ್ತಿರುವುದು ಅಥವಾ ಭಾರತದಲ್ಲಿ ತಮ್ಮ ಕ್ಷೇತ್ರಗಳಲ್ಲಿ ನಾಯಕರಾಗುತ್ತಿರುವುದು – U.S. ಶಿಕ್ಷಣದ ಜೀವಿತಾವಧಿಯ ಪ್ರಯೋಜನವನ್ನು ಪ್ರತಿಬಿಂಬಿಸುತ್ತದೆ.

ಅಮೆರಿಕಾ ವೀಸಾಗೆ ಭಾರತೀಯರು ಇನ್ನು ಹೆಚ್ಚು ಕಾಯಬೇಕಿಲ್ಲ

ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸಲು ತಯಾರಿ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು bit.ly/EdUSAIndiaPDO24 ಗೆ ಭೇಟಿ ನೀಡುವ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಧಿಕೃತ ಮಾಹಿತಿಯ ಮೂಲವಾದ EducationUSA ಆಯೋಜಿಸಿರುವ ನಿರ್ಗಮನ-ಪೂರ್ವ ಓರಿಯೆಂಟೇಶನ್ (PDO) ಗೆ ಸೇರಿಕೊಳ್ಳುವ ಮೂಲಕ ವಿದ್ಯಾರ್ಥಿ ವೀಸಾ ಪ್ರಕ್ರಿಯೆಯ ಬಗ್ಗೆ ತಿಳಿಯಬಹುದು.

click me!