ಬೆಂಗಳೂರು: ಫೆ. 12 ರಿಂದ 20ರವರೆಗೆ ಯು.ಎಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಮೇಳ!

Published : Feb 10, 2024, 06:15 PM ISTUpdated : Feb 10, 2024, 06:19 PM IST
ಬೆಂಗಳೂರು: ಫೆ. 12 ರಿಂದ 20ರವರೆಗೆ ಯು.ಎಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಮೇಳ!

ಸಾರಾಂಶ

ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್, ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್, ಭಾರತದಲ್ಲಿನ ಯುಎಸ್ ಕಮರ್ಷಿಯಲ್ ಸರ್ವಿಸ್ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ವತಿಯಿಂದ ಫಬ್ರವರಿ 12 ರಿಂದ 20, 2024 ರವರೆಗೆ ಬೆಂಗಳೂರು, ಮಣಿಪಾಲ, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಉನ್ನತ ಶಿಕ್ಷಣದ ಸರಣಿ ಮೇಳಗಳನ್ನು ಆಯೋಜಿಸಿದೆ

ಬೆಂಗಳೂರು (ಫೆ.29): ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್, ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್, ಭಾರತದಲ್ಲಿನ ಯುಎಸ್ ಕಮರ್ಷಿಯಲ್ ಸರ್ವಿಸ್ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ವತಿಯಿಂದ ಫಬ್ರವರಿ 12 ರಿಂದ 20, 2024 ರವರೆಗೆ ಬೆಂಗಳೂರು, ಮಣಿಪಾಲ, ಮಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನಲ್ಲಿ ಯುಎಸ್ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಎಜುಕೇಶನ್ ಟ್ರೇಡ್ ಮಿಷನ್‌ ಅನ್ನು ಆಯೋಜಿಸುತ್ತಿದೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿದ್ದು, ಇದು ಅಮೇರಿಕನ್ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ವೈವಿಧ್ಯತೆ ಮತ್ತು ನಾವೀನ್ಯತೆಯ ಪ್ರತಿಬಿಂಬಿಸುತ್ತದೆ ಎಂದು ಚೆನ್ನೈನಲ್ಲಿರುವ ಯುಎಸ್ ಕಾನ್ಸಲ್ ಜನರಲ್ ಕ್ರಿಸ್ಟೊಫರ್ ಹಾಡ್ಜಸ್ ಹೇಳಿದರು.

ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ ಯುಎಸ್- ಭಾರತ ಉಪಕ್ರಮವು ಹೇಗೆ ವಾಣಿಜ್ಯ ಸ್ಥಳ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಮತ್ತು ಹಸಿರು ಹೈಡ್ರೋಜನ್‌ನಂತಹ ಮುಂದಿನ ಪೀಳಿಗೆಯ ಕ್ಷೇತ್ರಗಳಲ್ಲಿ ಹೊಸ ಪ್ರಗತಿಗಳು ಮತ್ತು ಹೂಡಿಕೆಗಳನ್ನು ಉತ್ತೇಜಿಸುತ್ತದೆ ಎಂದರು.

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ನಂ.1 ಆಯ್ಕೆ, ನಮ್ ರಾಜ್ಯದಲ್ಲಿ ವಿವಿಧ ದೇಶಗಳ 6000 ವಿದ್ಯಾರ್ಥಿಗಳು

ಚೆನ್ನೈನಲ್ಲಿರುವ US ಕಾನ್ಸುಲೇಟ್ ಜನರಲ್ ಅಮೆರಿಕದ ವಿಶ್ವವಿದ್ಯಾನಿಲಯಗಳನ್ನು ದಕ್ಷಿಣ ಭಾರತದ ವ್ಯಾಪಾರ ಮತ್ತು ಸಂಶೋಧನಾ ಪಾಲುದಾರರೊಂದಿಗೆ ಸಂಪರ್ಕಿಸುವ ಮೂಲಕ ನಮ್ಮ ಎರಡೂ ದೇಶಗಳಲ್ಲಿನ ಅಗಾಧ ಪ್ರತಿಭೆಯನ್ನು ಚಾಲಕಶಕ್ತಿಯಾಗಿ ಬಳಸಿಕೊಂಡು ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಾವೀನ್ಯತೆಯನ್ನು ಉತ್ತೇಜಿಸಲು ಬಳಸಿಕೊಳ್ಳುತ್ತದೆ. ನಮ್ಮನ್ನು ಆ ನಿಟ್ಟಿನಲ್ಲಿ ಕೊಂಡೊಯ್ಯುವ ಅತ್ಯುತ್ತಮ ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳನ್ನು ಈ ನಗರಗಳಲ್ಲಿ ಕಾಣುತ್ತೇವೆ. ಅಮೇರಿಕ ಉನ್ನತ ಶಿಕ್ಷಣದ ಶಕ್ತಿಯನ್ನು ಎತ್ತಿ ತೋರುವ ಅಮೇರಿಕ ವಿಶ್ವ ವಿದ್ಯಾಲಯಗಳ ಸಹಭಾಗಿಗಳನ್ನು ದಕ್ಷಿಣ ಭಾರತಕ್ಕೆ ಕರೆತರಲು ಹೆಮ್ಮೆಯಿದೆ,”ಎಂದರು.
 
ಯು ಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ನಮ್ಮ ಅಧಿಕೃತ @EducationUSAindia ನೊಂದಿಗೆ ತಮ್ಮ #StudyInTheUS ಕನಸನ್ನು ಯೋಜಿಸಲು ಬೆಂಗಳೂರು, ಕೊಚ್ಚಿ ಮತ್ತು ಕೊಯಮತ್ತೂರಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.
 
ಯುನೈಟೆಡ್ ಸ್ಟೇಟ್‌ನಲ್ಲಿ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮೇಳವು ತೆರೆದಿರುತ್ತದೆ. ಮೇಳದ ಸಮಯದಲ್ಲಿ 18 ಯು.ಎಸ್. ಉನ್ನತ ಶಿಕ್ಷಣ ಪ್ರತಿನಿಧಿಗಳು, ಎಜುಕೇಷನ್‌ ಯುಎಸ್‌ಎ ಸಲಹೆಗಾರರು ಮತ್ತು ಯು.ಎಸ್ ಕಾನ್ಸುಲೇಟ್ ಜನರಲ್ ಚೆನ್ನೈನಿಂದ ವೀಸಾ ಅಧಿಕಾರಿಗಳು/ರಾಜತಾಂತ್ರಿಕರನ್ನು ಭೇಟಿ ಮಾಡಬಹುದಾಗಿದೆ. ಯು.ಎಸ್ ಉನ್ನತ ಶಿಕ್ಷಣ, ವಿದ್ಯಾರ್ಥಿ ವೀಸಾಗಳ ಕುರಿತು ಅಧಿಕಾರಿಗಳು ಮಾಹಿತಿಯನ್ನು ಪ್ರಸ್ತುತಪಡಿಸುತ್ತಾರೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
 
ಮೇಳಕ್ಕೆ ಪ್ರವೇಶ ಉಚಿತ ಮತ್ತು ಯು.ಎಸ್ ಉನ್ನತ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ತೆರೆದಿದೆ. ನೋಂದಣಿ ಕಡ್ಡಾಯವಾಗಿದೆ. ನೀವು https://yocket.com/events/graduate-student-fair-a-world-class-education-awaits-you-in-the-us-3533 ನಲ್ಲಿ ನೋಂದಾಯಿಸಿಕೊಳ್ಳಬಹುದು.
 
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅಮೆರಿಕದಲ್ಲಿ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು ಹೆಚ್ಚುವರಿ ಸಂಪನ್ಮೂಲಗಳಿಗಾಗಿ, EducationUSA ವೆಬ್‌ಸೈಟ್‌ಗೆ ಭೇಟಿ ನೀಡಬಹುದು: https://www.usief.org.in/Study-in-the-US.aspx 

11,894 ಶಿಕ್ಷಕರ ನೇಮಕ ಸುಪ್ರೀಂ ಅಂತಿಮ ತೀರ್ಪಿಗೆ ಬದ್ಧ: ಸರ್ಕಾರ
 
ಕಾರ್ಯಕ್ರಮದ ವಿವರ:
 
ಬೆಂಗಳೂರಿನಲ್ಲಿ ವಿದ್ಯಾರ್ಥಿ ಮೇಳ: ದಿನಾಂಕ: ಸೋಮವಾರ, ಫೆಬ್ರವರಿ 12, 2024
ಸಮಯ: 4:0kpm ಗೆ 7:00pm ಸ್ಥಳ: ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್, 24/1, ವಿಟ್ಟಲ್ ಮಲ್ಯ ರಸ್ತೆ, ಕೆ.ಜಿ.ಹಳ್ಳಿ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001, ಭಾರತ
 
ಭಾಗವಹಿಸುವ ಯುಎಸ್‌ ಉನ್ನತ ಶಿಕ್ಷಣ ಸಂಸ್ಥೆಗಳು:
 
1.    ಅರಿಝೋನಾ ಸ್ಟೇಟ್ ಯೂನಿವರ್ಸಿಟಿ
2.    ಬ್ರ್ಯಾಂಟ್ ಯೂನಿವರ್ಸಿಟಿ
3.    ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಅಮೇರಿಕಾ
4.    ಸಿಟಿ ಯೂನಿವರ್ಸಿಟಿ ಆಫ್ ಸಿಯಾಟಲ್
5.    ಕ್ಲಾರ್ಕ್ಸನ್ ಯೂನಿವರ್ಸಿಟಿ
6.    ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ
7.    ಕೆನ್ನೆಸಾ ಸ್ಟೇಟ್ ಯೂನಿವರ್ಸಿಟಿ
8.    ಮೇರಿಮೌಂಟ್ ಯೂನಿವರ್ಸಿಟಿ
9.    ಪಾರ್ಕ್ ಯೂನಿವರ್ಸಿಟಿ
10.    ಪೆನ್ ಕಾಲೇಜ್ ಆಫ್ ಟೆಕ್ನಾಲಜಿ
11.    ಸೇಂಟ್ ಲೂಯಿಸ್ ಯೂನಿವರ್ಸಿಟಿ
12.    ಸೇಂಟ್ ಮೇರಿ ಯೂನಿವರ್ಸಿಟಿ ಟೆಕ್ಸಾಸ್
13.    ಸನ್ನಿ ಬಫಲೋ
14.    ಯೂನಿವರ್ಸಿಟಿ ಆಫ್‌ ಅರ್ಕಾನ್ಸಾಸ್
15.    ಯೂನಿವರ್ಸಿಟಿ ಆಫ್‌ ಸ್ಯಾನ್ ಡಿಯಾಗೋ
16.    ಯೂನಿವರ್ಸಿಟಿ ಆಫ್‌ ಟೆಕ್ಸಾಸ್ ಸ್ಯಾನ್ ಆಂಟೋನಿಯೊ
17.    ಯೂನಿವರ್ಸಿಟಿ ಆಫ ಉತಾಹ್
18.    ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್ ಸ್ಟೌಟ್

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ