ದಾವಣಗೆರೆಯ ಅವಿನಾಶ್ ಐಎಎಸ್ ನಲ್ಲಿ ಆಲ್ ಇಂಡಿಯಾ ರ್ಯಾಂಕ್ ನಲ್ಲಿ 31 ನೇ ಸ್ಥಾನದಲ್ಲಿದ್ದು ,ಕೇವಲ 25 ವರ್ಷದ ಯುವಕ ಐಎಸ್ ಎ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಕ್ಲಿಯರ್ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ದಾವಣಗೆರೆ (ಮೇ 30): ಆ ಹುಡುಗನ ಪ್ರತಿಭೆ ನೋಡಿದ ಕ್ಲಾಸ್ ಟೀಚರ್ ನೀನು ಏನಾಗಬೇಕು ಅಂತಿದಿಯಾ ಅಂತಾ ಕೇಳಿದ್ದರು. ಅಂದೇ ಐಎಎಸ್ ಆಪೀಸರ್ ಆಗಬೇಕೆಂದು ಧೈರ್ಯವಾಗಿ ಹೇಳಿದ್ದ ಆದ್ರೆ ಆಗ ಐಎಎಸ್ ಪುಲ್ ಪಾರ್ಮ್ ಗೊತ್ತಿರಲಿಲ್ಲ. ಅದೇ ಹುಡುಗ ಇಂದು ಐಎಎಸ್ ಟಾಪರ್ ಲೀಸ್ಟ್ ಇಡೀ ರಾಜ್ಯಕ್ಕೆ ಮೊದಲಿಗನಾಗಿ ಹೊರವೊಮ್ಮಿದ್ದಾನೆ. ದಾವಣಗೆರೆ (Davanagere) ಲಾಯರ್ ರಸ್ತೆಯ ಸ್ಮಿತಾ ಹಾಗು ವಿಠ್ಹಲ್ ರಾವ್ ಪುತ್ರ ಅವಿನಾಶ್ ಐಎಎಸ್ ನಲ್ಲಿ ಆಲ್ ಇಂಡಿಯಾ ರ್ಯಾಂಕ್ ನಲ್ಲಿ 31 ನೇ ಸ್ಥಾನದಲ್ಲಿದ್ದು ರಾಜ್ಯಕ್ಕೆ ಮೊದಲಿಗನಾಗಿದ್ದಾನೆ. ಇನ್ನು ಕೇವಲ 25 ವರ್ಷದ ಯುವಕ ಐಎಸ್ ಎ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಕ್ಲಿಯರ್ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಅವಿನಾಶ್ ಡೆಲ್ಲಿ ಹೈದಾರಾಬಾದ್ ಗೆ ಹೋಗದೇ ಬೆಂಗಳೂರಿನಲ್ಲೇ ಕೋಚಿಂಗ್ ಪಡೆದು ಮೊದಲ ಯತ್ನದಲ್ಲೇ ಐಎಎಸ್ ಕ್ಲಿಯರ್ ಮಾಡಿದ್ದಾರೆ. ಇವರು ಓದಿದ್ದು ಪ್ರಾಥಮಿಕ ಶಿಕ್ಷಣ - ದಾವಣಗೆರೆ ಬಾಪೂಜಿ ಸ್ಕೂಲ್ , ಹೈಸ್ಕೂಲ್ ತೋಳಹುಣಸೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಇಂಗ್ಲೀಷ್ ಮೀಡಿಯಂ ರೆಸಿಡೆನ್ಸಿಯಲ್ ಸ್ಕೂಲ್ , ದವನ್ ಪಿ ಯು ಕಾಲೇಜ್ ನಲ್ಲಿ ಪಿ ಯುಸಿ ಕಾಮರ್ಸ್ ವ್ಯಾಸಂಗ ಮಾಡಿ, ನಂತರ ಕ್ಲಾಟ್ ಎಕ್ಸಾಂ ಬರೆದು ಆಲ್ ಇಂಡಿಯಾ ಲೆವಲ್ ನಲ್ಲಿ 19 ನೇ ರ್ಯಾಂಕ್ ಪಡೆದು ಇಂಡಿಯನ್ ನ್ಯಾಷನಲ್ ಲಾ ಸ್ಕೂಲ್ ಸೇರಿದ ಅವಿನಾಶ್ ಐದು ವರ್ಷಗಳ ಲಾ ಡಿಗ್ರಿಯನ್ನು ಪಡೆದಿದ್ದಾರೆ. ನಂತರ ಯುಪಿಎಸ್ ಸಿ ಪರೀಕ್ಷೆಗೆ ಇನ್ ಸೈಟ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ಮೊದಲ ಯತ್ನದಲ್ಲೇ ಯುಪಿಎಸ್ಸಿ ಕ್ಲಿಯರ್ ಮಾಡಿದ ಸಾಧನೆಗೆ ಪಾತ್ರರಾಗಿದ್ದಾರೆ.
undefined
UPSC RESULT 2021; ಕೊನೆಗೂ ಈಡೇರಿದ KOPPALA ದಂತ ವೈದ್ಯೆಯ ಕನಸು
ಯುಪಿಎಸ್ ಸಿ ತಯಾರಿ ನಡೆಸಿದ್ದು ಹೇಗೆ?
ಅವಿನಾಶ್ ಹೈಸ್ಕೂಲ್ ಹಂತದಲ್ಲೇ ಪ್ರತಿಭಾವಂತ ವಿದ್ಯಾರ್ಥಿ. ಜೀವನದಲ್ಲಿ ಏನಾದ್ರು ಒಂದು ದೊಡ್ಡ ಸಾಧನೆ ಮಾಡಬೇಕೆಂದು ಗುರಿ ಇಟ್ಟುಕೊಂಡಿದ್ದ ಯುವಕ. ಎಸ್ ಎಸ್ ಎಲ್ ಸಿ ನಂತರ ಸೈನ್ಸ್ ಗೆ ಸೇರಿದ ಅವಿನಾಶ್ ಒಂದು ವರ್ಷದಲ್ಲೇ ಅದನ್ನು ಡ್ರಾಪ್ ಮಾಡಿ ತಮ್ಮ ಆಸಕ್ತಿಕರ ವಿಷಯ ಕಾಮರ್ಸ್ ಆರಿಸಿಕೊಂಡು ಪಿಯು ಸಿ ವ್ಯಾಸಂಗ ಮಾಡಿದ್ರು. ಅವರ ಸಹೋದರಿ ಅರ್ಪಿತಾ ಅವಿನಾಶ್ ಟ್ವಿನ್ಸ್ ಆಗಿದ್ದರು ಆಕೆಯದ್ದು ಸೈನ್ಸ್ , ಅವಿನಾಶ್ ಕಾಮರ್ಸ್ ಓದಿ ಪಿ ಯು ಮುಗಿಸಿದ್ರು. ನಂತರ ಅವರ ಆರಿಸಿಕೊಂಡಿದ್ದು ಲಾ ಡಿಗ್ರಿಯನ್ನು. ಕ್ಲಾಟ್ CLAT ( ಕಾಮನ್ ಲಾ ಅಡ್ಮಿಷನ್ ಟೆಸ್ಟ್ ) ಪರೀಕ್ಷೆಯನ್ನು ಬರೆದು ಆಲ್ ಇಂಡಿಯಾ ಲೆವಲ್ ನಲ್ಲಿ 19 ನೇ ರ್ಯಾಂಕ್ ಗಳಿಸಿ ಸೀಟ್ ಗಿಟ್ಟಿಸಿದ ನಂತರ ಐದು ವರ್ಷಗಳ ಕಾಲ ಲಾ ಓದಿ ಅದರಲ್ಲು ಗೋಲ್ಡ್ ಮೆಡಲ್ ಪಡೆದು ರಾಜ್ಯಕ್ಕೆ ಹೆಸರು ಮಾಡಿದ್ದರು ಅವಿನಾಶ್. ಅವರ ತಂದೆ ಹೇಳುವ ಪ್ರಕಾರ ಅವಿನಾಶ್ ಓದಿದ್ದು ಮೆರಿಟ್ ಸ್ಕಾಲರ್ ಶಿಪ್ ನಲ್ಲಿ. ನಮ್ಮ ಮನೆಯಿಂದ ಯಾವುದೇ ದುಡ್ಡು ತೆಗೆದುಕೊಳ್ಳದೇ ಮೆರಿಟ್ ಸ್ಕಾಲರ್ ನಲ್ಲೇ ಓದಿ ಇಂದು ಯುಪಿಎಸ್ ಸಿ ಪಾಸ್ ಅತ್ಯುನ್ನತ ಶಿಖರ ಮುಟ್ಟಿರುವುದಕ್ಕೆ ದೇವರ ಆರ್ಶಿವಾದ ಇದೆ ಎನ್ನುತ್ತಾರೆ.
UPSCಯಲ್ಲಿ 92ನೇ ರ‍್ಯಾಂಕ್ ಪಡೆದ ವೈದ್ಯಾಧಿಕಾರಿ Chitradurgaದ ಕುವರ!
ಅವಿನಾಶ್ ತನ್ನ ಕುಟುಂಬಕ್ಕೆ ಎರಡು ವರ್ಷ ಟೈಮ್ ಕೇಳಿದ್ದರು. ನಾನು ಈ ಬಾರಿ ಯುಪಿಎಸ್ ಸಿ ಬರೆದ ನಂತರ ಇನ್ನೊಂದು ಚಾನ್ಸ್ ಕೊಡಿ ಇಲ್ಲಾ ಅಂದ್ರೆ ನಾನು ಬಂದು ಉದ್ಯಮ ನೋಡಿಕೊಳ್ಳುತ್ತೇನೆ ಎಂದು ತಾಯಿ ಬಳಿ ಹೇಳಿದ್ದರು. ಕೊರೊನೋ ಅಂತಹ ಸಂದರ್ಭದಲ್ಲು ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದ ಅವಿನಾಶ್ ಹಗಲು ಓದಿದ್ದು ತುಂಬಾ ಕಡಿಮೆ. ಇಡೀ ರಾತ್ರಿ ಓದಿ ಹಗಲು ವೇಳೆ ನಿದ್ರಿಸುತ್ತಿದ್ದ ಅವಿನಾಶ್ ತಮ್ಮ ಗೋಲ್ ರೀಚ್ ಆಗಿದ್ದಾರೆ. ಯುಪಿಎಸ್ ಸಿ ಮುಗಿಸಿ ಇಂಡಿಯನ್ ಪಾರಿನ್ ಸರ್ವಿಸ್ ಬಗ್ಗೆ ಕನಸು ಕಂಡಿದ್ದರು ಅವಿನಾಶ್. ಈ ಹಿಂದೆ ಲಾ ಓದುವಾಗ ಸುಷ್ಮಾ ಸ್ವರಾಜ್ ಅವಧಿಯಲ್ಲಿ 3 ತಿಂಗಳ ಕಾಲ ವಿದೇಶಾಂಗ ಇಲಾಖೆಯಲ್ಲಿ ಟ್ರೈನಿಯಾಗಿ ತರಬೇತಿ ಕೂಡ ಪಡೆದಿದ್ದರು. ಇದೀಗ 31 ನೇ ರ್ಯಾಂಕ್ ಗಳಿಸಿದ್ದು ಅವರ ಉದ್ದೇಶ ಆಸೆ ಈಡೇರಿದ್ದು ವಿದೇಶಾಂಗ ಸೇವೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.
ಅವಿನಾಶ್ ದಾವಣಗೆರೆ , ಕರ್ನಾಟಕಕ್ಕೆ ಹೆಸರು ತಂದಿದ್ದು ಆತನ ಕುಟುಂಬದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಅವರ ಕುಟುಂಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅವಿನಾಶ್ ತಾಯಿ ಸ್ಮಿತಾ.. ತಂದೆ ವಿಠ್ಹಲ್ ರಾವ್ , ಸಹೋದರಿ ಅರ್ಪಿತಾ ದೊಡ್ಡಮ್ಮ ಸುನಂದ, ಹಾಗು ನಾಗರಾಜ್ ಕೂಡುಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಇಡೀ ಕುಟುಂಬಕ್ಕೆ ಮಗನ ಸಾಧನೆ ಹೆಮ್ಮೆ ತಂದಿದ್ದು ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅವಿನಾಶ್ ತಾತ ಆನಂದರಾವ್ ಉಡುಪಿ ಮೂಲದವರಾಗಿದ್ದು 1970 ರಲ್ಲೇ ದಾವಣಗೆರೆ ಬಂದು ನೆಲೆಸಿ ದಾವಣಗೆರೆ ಜನತಾ ಹೋಟೆಲ್ ಲಾಡ್ಜ್ ಉದ್ಯಮದಲ್ಲಿ ಹೆಸರು ಮಾಡಿದರು.. ಅನೇಕ ಬಡಮಕ್ಕಳ ಶಿಕ್ಷಣಕ್ಕು ಇವರ ಕುಟುಂಬ ಆಸರೆಯಾಗಿದ್ದು ಅದು ಪ್ರತಿಫಲ ನೀಡಿದೆ ಎನ್ನುತ್ತಿದೆ ಇಡೀ ಕುಟುಂಬ.