ಕೇಂದ್ರ ಲೋಕಸೇವಾ ಆಯೋಗವು 2023 ರಲ್ಲಿ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಬೆಂಗಳೂರು (ಏ.16): ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023 ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆಸಿದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಇಂದು (16, ಏಪ್ರಿಲ್, 2024) ಪ್ರಕಟಿಸಲಾಗಿದೆ. ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್ ಆಗೊ ಹೊರಹೊಮ್ಮಿದ್ದಾರೆ. 2023 ಯುಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್ https://upsc.gov.in/ ರಿಜಿಸ್ಟರ್ ನಂಬರ್ ಮತ್ತು ಹೆಸರಿನ ಪ್ರಕಾರ ಚೆಕ್ ಮಾಡಿಕೊಳ್ಳಬಹುದು.
ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. 355 ಅಭ್ಯರ್ಥಿಗಳ ಸ್ಥಿತಿ ತಾತ್ಕಾಲಿಕವಾಗಿ ಉಳಿದಿದೆ. ಇಲ್ಲಿ ಕ್ರಮ ಪ್ರಕಾರವಾಗಿ ಟಾಪರ್‌ಗಳ ಹೆಸರು ನೀಡಲಾಗಿದೆ.
undefined
ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವಿದೇಶಿ ಸೇವೆ ಮತ್ತು ಇತರೆ ಕೇಂದ್ರೀಯ ಸೇವೆಗಳಿಗೆ (ಗ್ರೂಪ್ ಎ ಮತ್ತು ಗ್ರೂಪ್ ಬಿ) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯುಪಿಎಸ್‌ಸಿ ಪರೀಕ್ಷೆ ನಡೆಸಲಾಗುತ್ತದೆ.
ಯುಪಿಎಸ್‌ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ?
- ಕೇಂದ್ರ ಲೋಕಸೇವಾ ಆಯೋಗದ ವೆಬ್‌ಸೈಟ್ ವಿಳಾಸ https://upsc.gov.in/ ಕ್ಕೆ ಭೇಟಿ ನೀಡಿ.
- ತೆರೆದ ವೆಬ್‌ಪುಟದಲ್ಲಿ ' Final Result - Civil Services Examination, 2023 ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- ಪಿಡಿಎಫ್ ಫೈಲ್ ಒಂದು ಓಪನ್ ಆಗುತ್ತದೆ. ಇಲ್ಲಿ ಅಭ್ಯರ್ಥಿಗಳು ಹೆಸರು, ರಿಜಿಸ್ಟರ್ ನಂಬರ್ ಅನ್ನು ಹಾಕಿ ಚೆಕ್ ಮಾಡಬಹುದು.