ಇಸ್ಲಾಮಿಕ್‌ ಸಾಮ್ರಾಜ್ಯದ ಪಾಠಕ್ಕೆ CBSE ಕೊಕ್‌!

By Suvarna News  |  First Published Apr 24, 2022, 6:26 AM IST

* 10, 11, 12ನೇ ತರಗತಿ ಪಠ್ಯಕ್ರಮದಲ್ಲಿ ವ್ಯಾಪಕ ಬದಲಾವಣೆ

* ಇಸ್ಲಾಮಿಕ್‌ ಸಾಮ್ರಾಜ್ಯದ ಪಾಠಕ್ಕೆ ಸಿಬಿಎಸ್‌ಇ ಕೊಕ್‌

* ನೆಹರು ಅವರ ಅಲಿಪ್ತ ನೀತಿ ಪಾಠ, ಉರ್ದು ಕವಿ ಫಯಾಜ್‌ ಕವಿತೆಗಳಿಗೂ ತಿಲಾಂಜಲಿ

* ಎನ್‌ಸಿಇಎಆರ್‌ಟಿ ಶಿಫಾರಸು ಆಧರಿಸಿ ಈ ಕ್ರಮ: ಸಿಬಿಎಸ್‌ಇ ಸ್ಪಷ್ಟನೆ


ನವದೆಹಲಿ(ಏ.24): ಈ ಹಿಂದಿನ ಇಸ್ಲಾಮಿಕ್‌ ಸಾಮ್ರಾಜ್ಯಗಳು, ಶೀತಲ ಸಮರ ಯುಗ, ಪಂ| ನೆಹರು ಅವರ ಅಲಿಪ್ತ ನೀತಿ- ಮೊದಲಾದ ವಿಷಯಗಳ ಕುರಿತ ಪಾಠಗಳನ್ನು ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ) ಕೈಬಿಟ್ಟಿದೆ. 11 ಹಾಗೂ 12ನೇ ತರಗತಿಯ ಇತಿಹಾಸ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿದ್ದ ಈ ಪಾಠಗಳಿಗೆ ಕೊಕ್‌ ನೀಡಲಾಗಿದೆ.

ಇನ್ನು 10ನೇ ತರಗತಿ ಪಠ್ಯಕ್ರಮದಲ್ಲಿ ‘ಆಹಾರ ಭದ್ರತೆ’ ಕುರಿತಾದ ‘ಕೃಷಿಯ ಮೇಲೆ ಜಾಗತೀಕರಣದ ಪರಿಣಾಮ’ ಎಂಬ ಪಾಠಕ್ಕೆ ತಿಲಾಂಜಲಿ ನೀಡಲಾಗಿದೆ. ಕವಿ ಫಯಾಜ್‌ ಅಹ್ಮದ್‌ ಫಯಾಜ್‌ ಬರೆದಿದ್ದ ‘ಧರ್ಮ, ಕೋಮುವಾದ ಹಾಗೂ ರಾಜಕೀಯ ಕೋಮುವಾದ, ಜಾತ್ಯತೀತ ರಾಷ್ಟ್ರ’ ವಿಭಾಗದಲ್ಲಿನ 2 ಅನುವಾದಿತ ಉರ್ದು ಪದ್ಯ, ‘ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆ’ ಕುರಿತ ಪಾಠವನ್ನು ಈ ಶೈಕ್ಷಣಿಕ ವರ್ಷದಲ್ಲಿ ಕೈಬಿಡಲು ಸಿಬಿಎಸ್‌ಇ ನಿರ್ಧರಿಸಿದೆ.

Tap to resize

Latest Videos

ಕೈಬಿಡಲು ಕಾರಣ ಏನು?:

ಈ ಪಠ್ಯಗಳನ್ನು ಕೈಬಿಡುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದಾಗ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ಈ ಪಠ್ಯಗಳನ್ನು ಕೈಬಿಡಬೇಕು. ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕು ಎಂದು ಸೂಚಿಸಿತ್ತು. ಈ ಶಿಫಾರಸು ಆಧರಿಸಿ ಕೈಬಿಟ್ಟಿದ್ದೇವೆ ಎಂದು ಸಿಬಿಎಸ್‌ಇ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ, ಈ ರೀತಿ ಪಠ್ಯದಲ್ಲಿ ಬದಲಾವಣೆ ತರುವುದು ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಬದಲಾವಣೆ ಮಾಡಲಾಗಿತ್ತು. 2020ರಲ್ಲಿ ನಾಗರಿಕತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಫೆಡರಲಿಸಂ- ಮೊದಲಾದ 11ನೇ ತರಗತಿಯ ಪಾಠಗಳನ್ನು ಪರೀಕ್ಷೆಗೆ ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ 2021-22ರಲ್ಲಿ ಮತ್ತೆ ಅವನ್ನು ಪರಿಗಣಿಸಲಾಗಿತ್ತು.

ಕೈಬಿಡಲಾದ ಪಾಠದಲ್ಲೇನಿದೆ?:

‘ಸೆಂಟ್ರಲ್‌ ಇಸ್ಲಾಮಿಕ್‌ ಲ್ಯಾಂಡ್‌್ಸ’ ಎಂಬ 11ನೇ ತರಗತಿಯ ಇತಿಹಾಸ ಪುಸ್ತಕದಲ್ಲಿರುವ ಪಾಠವು ಆಫ್ರಿಕಾ-ಏಷ್ಯಾ ಪ್ರದೇಶದಲ್ಲಿ ಇಸ್ಲಾಮಿಕ್‌ ಸಾಮ್ರಾಜ್ಯದ ಸೃಷ್ಟಿ, ಅದರಿಂದ ಸಮಾಜ ಹಾಗೂ ಆರ್ಥಿಕತೆ ಮೇಲಾಗುವ ಪರಿಣಾಮದ ವಿವರಣೆ ನೀಡುತ್ತದೆ.

ಅದೇ ರೀತಿ 12ನೇ ತರಗತಿಯ ಇತಿಹಾಸ ವಿಷಯದಲ್ಲಿ ‘ದ ಮುಘಲ್‌ ಕೋರ್ಚ್‌’ ಎಂಬ ಪಾಠವನ್ನೂ ಕೈಬಿಡಲಾಗಿದೆ. ಇದು ಮುಘಲ್‌ ನ್ಯಾಯಾಲಯಗಳು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸ ಬದಲಿಸಿದವು ಎಂಬುದರ ಮಾಹಿತಿ ನೀಡುತ್ತದೆ.

click me!