ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ಶಿಕ್ಷಣವನ್ನು ಒದಗಿಸುತ್ತಿದೆ. ಈ ಮೊಬೈಲ್ ಎಜುಕೇಶನ್ ಗಾಗಿಯೇ ಶಾಲೆ ಮೂರು ಬಸ್ ಗಳ ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲದೇ ವ್ಯಾಲಂಟೈರ್ ಆಗಿ ಕೆಲಸ ಮಾಡುವ ಸಿಬ್ಬಂದಿಯನ್ನು ಮಾಡ್ರನ್ ಪಬ್ಲಿಕ್ ಶಾಲೆ ನೇಮಿಸಿದೆ.
ನಮ್ಮ ದೇಶ ಅಭಿವೃದ್ಧಿಶೀಲ ರಾಷ್ಟ್ರಗಳೊಂದು. ಸ್ವಾತಂತ್ರ್ಯ ಬಂದಾಗಿನಿಂದಲೂ ನೂರಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಅದ್ರಲ್ಲೂ ಮಕ್ಕಳ ಶಿಕ್ಷಣ, ಅಪೌಷ್ಟಿಕತೆ, ಬಡತನ, ನಿರುದ್ಯೋಗ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಬಡಮಕ್ಕಳ ಶಿಕ್ಷಣ ಹಾಗೂ ಅಪೌಷ್ಟಿಕತೆ ನಿವಾರಣೆಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಇದರ ಫಲವಾಗಿ ಸಾಕಷ್ಟು ಸುಧಾರಣೆಯೂ ಆಗಿತ್ತು. ಆದ್ರೆ ಮಹಾಮಾರಿ ಕೊರೊನಾದಿಂದಾಗಿ ಮತ್ತದೇ ಸಮಸ್ಯೆಗಳು ತಲೆದೋರಿವೆ. ಲಾಕ್ಡೌನ್ ನಿಂದಾಗಿ ಬಡ ಮಕ್ಕಳು ಅಪೌಷ್ಟಿಕತೆ ಸಮಸ್ಯೆಎದುರಿಸ್ತಿದ್ದಾರೆ, ಜೊತೆಗೆ ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಇಂಥ ಮಕ್ಕಳಿಗೆ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ವಿತರಿಸಲು, ಇಲ್ಲೊಂದು ಶಾಲೆ ಹೊಸ ಮಾರ್ಗ ಕಂಡುಕೊಂಡಿದೆ.
ದೆಹಲಿಯ ಶಾಲಿಮರ್ ಬಾಗ್‌ನಲ್ಲಿರುವ ಮಾಡ್ರನ್ ಪಬ್ಲಿಕ್ ಸ್ಕೂಲ್ ಆನ್ ವೀಲ್ಸ್ ಕ್ಲಾಸ್ ಅಂದ್ರೆ ಚಲಿಸುವ ಬಸ್‌ನಲ್ಲೇ ತರಗತಿ ಆರಂಭಿಸಿದೆ. ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ಶಿಕ್ಷಣವನ್ನು ಒದಗಿಸುತ್ತಿದೆ. ಈ ಮೊಬೈಲ್ ಎಜುಕೇಶನ್ ಗಾಗಿಯೇ ಶಾಲೆ ಮೂರು ಬಸ್ ಗಳ ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲದೇ ವ್ಯಾಲಂಟೈರ್ ಆಗಿ ಕೆಲಸ ಮಾಡುವ ಸಿಬ್ಬಂದಿಯನ್ನು ಮಾಡ್ರನ್ ಪಬ್ಲಿಕ್ ಶಾಲೆ ನೇಮಿಸಿದೆ.
ವೈಜ್ಞಾನಿಕ ಪ್ರಜ್ಞೆ ಬೆಳೆಸಲು ಯುವ ಬ್ರೇಗೇಡ್‌ನಿಂದ ಸ್ಪಾರ್ಕ್ ಯೋಜನೆ
ಬೇರೆ ಬೇರೆ ಹೆಸರು
ಪ್ರತಿ ಬಸ್ ಕೂಡ ನಿರ್ದಿಷ್ಟ ಉದ್ದೇಶ ಹೊಂದಿದ್ದು, ಅವುಗಳ ಸೇವೆಯಿಂದಲೇ ಗುರುತಿಸಲ್ಪಡುತ್ತವೆ. ಸೈನ್ಸ್ ಪಾರ್ಕ್ ಆನ್ ವೀಲ್ಸ್, ರೋಟಿ ಬ್ಯಾಂಕ್ ಆನ್ ವೀಲ್ಸ್ ಹಾಗೂ ಲೈಬ್ರರಿ ಆನ್ ವೀಲ್ಸ್ ಎಂದು ಕರೆಯಲಾಗುತ್ತದೆ.
ಸೈನ್ಸ್ ಪಾರ್ಕ್ ಆನ್ ವೀಲ್ಸ್ ಬಸ್‌ನಲ್ಲಿ ಎಂಪಿಎಸ್ ಶಾಲೆಯಲ್ಲಿರುವ ಸೈನ್ಸ್ ಲ್ಯಾಬ್‌ನ ಉಪಕರಣಗಳಿರುತ್ತವೆ. ಇದರಿಂದ ಮಕ್ಕಳು ಪ್ರಮುಖ ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಪ್ರಾಯೋಗಿಕವಾಗಿ ಕಲಿಯಬಹುದು. ಶಾಲೆಯ ಈ ಪ್ರಯತ್ನವು ವಿಶ್ವಸಂಸ್ಥೆಯ “ಗುಣಮಟ್ಟದ ಶಿಕ್ಷಣ” ಮತ್ತು “ಕಡಿಮೆಯಾದ ಅಸಮಾನತೆಗಳ” ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗೌರವಿಸಲು ಪ್ರಯತ್ನಿಸುತ್ತದೆ.
ರೋಟಿ ಬ್ಯಾಂಕ್ ಆನ್ ವೀಲ್ಸ್
ರೋಟಿ ಬ್ಯಾಂಕ್ ಆನ್ ವೀಲ್ಸ್ ಬಸ್, ಎಲ್ಲ ದಲಿತ ಪ್ರದೇಶಗಳಿಗೆ ಆಹಾರವನ್ನು ತಲುಪಿಸುವ ಕಾರ್ಯ ಮಾಡಲಿದೆ.ಉದಾತ್ತ ಸಹಾಯ ಹಸ್ತ ನೀಡಲು ಸಿದ್ಧರಿರುವವರಿಗೆ ನೆರವಾಗಲಿದೆ. ಹೃದಯವಂತ ನಾಗರಿಕರ ಮನೆ ಮನೆಗೆ ತೆರಳಿ ಆಹಾರ ಪ್ಯಾಕೆಟ್‌ಗಳನ್ನು ಸಂಗ್ರಹಿಸುತ್ತದೆ. ಈ ಯೋಜನೆಯು “ಶೂನ್ಯ ಹಸಿವು” ಮತ್ತು “ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗೌರವಿಸುವ ಪ್ರಯತ್ನವಾಗಿದೆ.
ಲೈಬ್ರರಿ ಆನ್ ವೀಲ್ಸ್ ಬಸ್‌ನಲ್ಲಿ ಎಂಪಿಎಸ್ ಶಾಲೆಯಲ್ಲಿರುವ ಗ್ರಂಥಾಲಯದ ಪುಸ್ತಕಗಳ ಸಂಗ್ರಹವಿದೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಶಾಲೆಗಳು ಸ್ಥಗಿತಗೊಂಡಿದ್ದರಿಂದ ಶಿಕ್ಷಣದಿಂದ ವಂಚಿತಗೊಂಡಿರುವ ದೀನದಲಿತ ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಅಧ್ಯಯನ ಮಾಡಬಹುದು. ಅವರ ಆಸಕ್ತಿಯ ವಿಷಯಗಳನ್ನು ಸಂಪೂರ್ಣವಾಗಿ ಅನ್ವೇಷಿಸುವ ಮೂಲಕ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ. ಇದು ವಿಶ್ವಸಂಸ್ಥೆಯ “ಗುಣಮಟ್ಟದ ಶಿಕ್ಷಣ” ಮತ್ತು “ಕಡಿಮೆಯಾದ ಅಸಮಾನತೆಗಳ” ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿದೆ.
ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೂದ್ ಸಮಾಜ ಮುಖಿ ಕಾರ್ಯ!
ಲೈಬ್ರರಿ ಆನ್ ವೀಲ್ಸ್
ಪ್ರಸ್ತುತ, ನಾವು ಉತ್ತರ ದೆಹಲಿಯ ಕೊಳೆಗೇರಿ ಪ್ರದೇಶಗಳಾದ ರೋಹಿಣಿ, ಕಮಲಾ ನಗರ, ಶಾಲಿಮಾರ್ ಬಾಗ್ ಮುಂತಾದವುಗಳ ಮೇಲೆ ಕೇಂದ್ರೀಕರಿಸಿದ್ದೇವೆ. ದಿನಕ್ಕೆ 1 ರಿಂದ 2 ಕೊಳೆಗೇರಿ ಪ್ರದೇಶಗಳಿಗೆ ಬಸ್ ತೆರಳಲಿದೆ. ಸೈನ್ಸ್ ಪಾರ್ಕ್ ಆನ್ ವೀಲ್ಸ್ ಬಸ್ ವೈಜ್ಞಾನಿಕ ಪರಿಕಲ್ಪನೆಗಳಿಗೆ ಸಂಬಂಧಿಸಿದ ನಿರ್ಣಾಯಕ ಜ್ಞಾನವನ್ನು ಒದಗಿಸುತ್ತಿದ್ದರೆ, ಲೈಬ್ರರಿ ಆನ್ ವೀಲ್ಸ್ ಬಸ್ ಮಕ್ಕಳಿಗೆ ಪುಸ್ತಕಗಳೊಂದಿಗೆ ಸಂಬಂಧ ಹೊಂದಲು ಅವಕಾಶವನ್ನು ನೀಡುತ್ತಿದೆ. ಎಂಪಿಎಸ್ ಬೋಧಕವರ್ಗದ ಸದಸ್ಯರೊಂದಿಗೆ ಸರಿಯಾದ ದೈಹಿಕ ಅಂತರದೊಂದಿಗೆ 10 ರಿಂದ 15 ವಿದ್ಯಾರ್ಥಿಗಳಿಗೆ ಈ ಬಸ್‌ನಲ್ಲಿ ಅವಕಾಶ ಕಲ್ಪಿಸಬಹುದಾಗಿದೆ. ಅವರು ಮಕ್ಕಳಿಗಾಗಿ ಕಾಗುಣಿತ-ಕಥೆ ಹೇಳುವ ಮೂಲಕ ತರಗತಿಗಳನ್ನ ನಡೆಸುತ್ತಿದ್ದಾರೆ ಅಂತಾರೆ ಎಂಪಿಎಸ್ ಪ್ರಾಂಶುಪಾಲರಾದ ಶ್ರೀಮತಿ ಅಲ್ಕಾ ಕಪೂರ್.
ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನಿಯಾಗಿ, ದಿನಕ್ಕೆ 500 ರೂ. ಪಡೆಯಿರಿ