ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

By Suvarna NewsFirst Published Oct 16, 2020, 2:28 PM IST
Highlights

ರಾಜ್ಯದ ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಿಸಲ್ಟ್ ಪ್ರಕಟಿಸಿದೆ.

ಬೆಂಗಳೂರು, (ಅ.16): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ ಇಬಿ) ಎಸ್‌ಎಸ್‌ಎಲ್ ಸಿ ಪೂರಕ ಫಲಿತಾಂಶ ಪ್ರಕಟಿಸಿದ್ದು, ಶೇ. 51.28 ರಷ್ಟುವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ದಿನಾಂಕ 21-9-2020ರಿಂದ 29-9-2020ರ ವರೆಗೆ ರಾಜ್ಯಾದ್ಯಾಂತ ಒಟ್ಟು 772 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಒಟ್ಟು  213955 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

SSLC: ಇನ್ನೂ ಮಾರ್ಕ್ಸ್ ಬರಲೇಬೇಕೆಂದು ಮರು ಮೌಲ್ಯಮಾಪನ ಹಾಕಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್

* 1352020 ಗಂಡು ಮಕ್ಕಳ ಪರೀಕ್ಷೆ ಬರೆದಿದ್ದು, ಇವರಲ್ಲಿ  65652 ಅಂದ್ರೆ 48.56% ವಿದ್ಯಾರ್ಥಿಗಳು ಉತ್ತೀರ್ಣಾಗಿದ್ದಾರೆ. ಇನ್ನು 78753 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಈ ಪೈಕಿ 44067 ಅಂದ್ರೆ 55.96%ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.

* ನಗರದ ಪ್ರದೇಶಗಳಲ್ಲಿ 105207 ವಿದ್ಯಾರ್ಥಿಗಳಲ್ಲಿ  50764 (48.25%) ಮಕ್ಕಳು ತೇರ್ಗಡೆಯಾಗಿದ್ರೆ ಗ್ರಾಮೀಣ ಭಾಗದದಲ್ಲಿ 108748ರಲ್ಲಿ 58955 (54.21%)ರಷ್ಟು ಸ್ಟುಡೆಂಟ್ಸ್ ಪಾಸಾಗಿದ್ದಾರೆ.

ಮರು ಮೌಲ್ಯಮಾಪನ ಮಾಡ್ಸಿ ರಾಜ್ಯಕ್ಕೆ ಸೆಕೆಂಡ್ ಬಂದ SSLC ವಿದ್ಯಾರ್ಥಿನಿ: ಇದು ಕಾನ್ಫಿಡೆಂಟ್ ಅಂದ್ರೆ 

* ಸರ್ಕಾರಿ ಶಾಲೆ 50.19%ರಷ್ಟು ರಿಸಲ್ಟ್ ಪಡೆದಿದ್ದರೆ, ಅನುದಾನಿತ ಶಾಲೆ 53.13%, ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು50.87% ರಷ್ಟು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು.

 

click me!