ಪಠ್ಯಪುಸ್ತಕ ವಿವಾದ, ಚುನಾವಣಾ ಗಿಮಿಕ್‌: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

By Kannadaprabha News  |  First Published Jun 1, 2022, 4:09 AM IST

*   ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ
*  ಇದು ಒಂದು ರೀತಿಯ ಅಸಹಿಷ್ಣುತೆ
*  ಪಠ್ಯಪುಸ್ತಕ ನೋಡಲು ಆಹ್ವಾನವನ್ನೂ ನೀಡಲಾಗಿದೆ 
 


ಹುಬ್ಬಳ್ಳಿ(ಜೂ.01):  ಚುನಾವಣೆ ಸಮೀಪಿಸಿರುವ ಕಾರಣ ಮಸೀದಿ, ಮಂದಿರ, ಪಠ್ಯ ಪುಸ್ತಕ ಸೇರಿ ಅನೇಕ ವಿಚಾರ ಮುಂದಿಟ್ಟು ಪ್ರತಿಪಕ್ಷಗಳು ವಿವಾದ ಸೃಷ್ಟಿಸುತ್ತಿವೆ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಇವೆಲ್ಲ ಚುನಾವಣೆ ಗಿಮಿಕ್‌ ಹಾಗೂ ಅಸಹಿಷ್ಣುತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಡವರಿಗಾಗಿ ಯಾವುದೇ ಕೆಲಸ ಮಾಡಿದರೂ ಸಹ ವಿರೋಧ ಪಕ್ಷಗಳು ವಿವಾದ ಮಾಡುತ್ತಿವೆ. ಇನ್ನು ಪಠ್ಯ ಪುಸ್ತಕವೇ ಹೊರಗೆ ಬಂದಿಲ್ಲ. ಆಗಲೇ ಭಗತ್‌ಸಿಂಗ್‌, ನಾರಾಯಣ ಗುರು, ಬಸವೇಶ್ವರರ ವಿಷಯ ಕೈಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಪಠ್ಯಪುಸ್ತಕ ನೋಡಲು ಆಹ್ವಾನವನ್ನೂ ನೀಡಲಾಗಿದೆ. ಬಿಜೆಪಿ ತತ್ವಾದರ್ಶವನ್ನು ಜನತೆ ಒಪ್ಪಿರುವ ಕಾರಣ ವಿಪಕ್ಷಗಳು ಮಹಾತ್ಮರ ಹೆಸರಿನಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Latest Videos

undefined

ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸುವ ಮನೋಭಾವ ಇರಬೇಕು. ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿ ಬಿಟ್ಟವಿಚಾರಗಳನ್ನು ಕೂಡ ಈಗಿನ ಸಮಿತಿಯ ತಲೆಗೆ ಕಟ್ಟಿವಿವಾದ ಮಾಡುತ್ತಿದ್ದಾರೆ. ಪಠ್ಯ ಪುಸ್ತಕ ಕಮಿಟಿ ಎಲ್ಲ ಮಹನೀಯರ ಮತ್ತು ಆದರ್ಶ ವ್ಯಕ್ತಿಗಳ ವಿಚಾರಧಾರೆ ಒಳಗೊಂಡು ಪುಸ್ತಕ ತಯಾರಿಸಿದ್ದಾರೆ. ವಿರೋಧ ಪಕ್ಷಗಳು ಬಿಟ್ಟಿದ್ದ ಮಹನೀಯರ ವಿಷಯವನ್ನು ಸಹ ಸೇರಿಸಲಾಗಿದೆ. ವಿವಾದ ಮಾಡುವುದು ಬಿಡಬೇಕು. ಪಠ್ಯ ಪುಸ್ತಕ ಬಂದ ಮೇಲೆ ನೋಡಿ ಎಂದರು.

ವಿಪಕ್ಷ ನಾಯಕನಿಗಾಗಿ ಕಾಂಗ್ರೆಸ್ಸಿನಲ್ಲಿ ತಲಾಶ್‌..!

ಮಸೀದಿ, ಮಂದಿರಗಳ ವಿಚಾರವನ್ನು ಯಾರೂ ವಿವಾದ ಮಾಡಬಾರದು. ಮಳಲಿಯಲ್ಲಿ ಮಸೀದಿ ಮಂದಿರ ವಿವಾದ ಸೌಹಾರ್ದತೆಯಿಂದ ಬಗೆಹರಿಸಲು ಸರ್ಕಾರ ಮುಂದಾಗಿದೆ ಹೊರತು ವಿಫಲವಾಗಿಲ್ಲ. ಚುನಾವಣೆ ಸಮೀಪ ಬಂದಿರುವ ಕಾರಣ ವಿಪಕ್ಷಗಳು ಈ ವಿಚಾರ ಇಟ್ಟುಕೊಂಡು ಗಿಮಿಕ್‌ ಮಾಡುತ್ತಿವೆ ಎಂದು ದೂರಿದರು.

3ನೇ ಅಭ್ಯರ್ಥಿ:

ರಾಜ್ಯಸಭೆ ಚುನಾವಣೆಯಲ್ಲಿ ನಮಗಿಂತ ಕಡಿಮೆ ಶಕ್ತಿ ಇದ್ದವರು ಮೂರನೇ ಅಭ್ಯರ್ಥಿ ಹಾಕಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ವಿಶ್ವಾಸವಿದೆ. ಇಬ್ಬರಿಗೆ ಮತದಾನ ಬಳಿಕ ನಮ್ಮಲ್ಲಿ 32 ಮತಗಳು ಉಳಿಯುತ್ತವೆ. 2ನೇ ಪ್ರಾಶಸ್ತ್ಯದ ಮತ, 3ನೇ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರವಿದೆ. ಒಟ್ಟಾರೆ ನಮ್ಮ ಮೂರು ಅಭ್ಯರ್ಥಿಗಳು ಕೂಡ ಚುನಾವಣೆ ಗೆಲ್ಲಲಿದ್ದಾರೆ. ಮತದಾನ ಆದ ದಿನ ನಾವೇನು ಸ್ಟ್ರಾಟರ್ಜಿ ಮಾಡಿದ್ದೇವು ಎಂಬುದನ್ನು ಹೇಳುತ್ತೇವೆ ಎಂದರು.

ಹಿಂದಿನ ಸರ್ಕಾರಗಳು ‘ಗರೀಬಿ ಹಟಾವೋ, ರೋಟಿ-ಕಪಡಾ ಔರ್‌ ಮಕಾನ್‌, ಹಮಾರಾ ಹಾಥ್‌ ಗರೀಬೋಂಕೆ ಸಾಥ್‌’ ಎಂಬೆಲ್ಲ ಘೋಷಣೆ ಮಾಡಿದ್ದವು. ಆದರೆ ಯಾವುದೂ ಪರಿವರ್ತನೆಗೆ ಕಾರಣವಾಗಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ 8 ವರ್ಷದಲ್ಲಿ ಆಡಳಿತದಲ್ಲಿ ಅಭೂತಪೂರ್ವ ಬದಲಾವಣೆ ಆಗಿದೆ ಎಂದು ಸಚಿವ ಜೋಶಿ ಬಣ್ಣಿಸಿದರು.
 

click me!