UPSCಯಲ್ಲಿ ದೇಶಕ್ಕೆ ಫಸ್ಟ್ ರ‍್ಯಾಂಕ್ ಪಡೆದಿರುವ ಶ್ರುತಿ ಶರ್ಮಾ ಭಾರತೀಯ ಆಡಳಿತ ಸೇವೆಗಳಿಗೆ ಸೇರುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದ್ದಾರೆ. ತಮ್ಮ ಸಾಧನೆ ಬಗ್ಗೆ ಅವರೇನು ಹೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ (ಮೇ.31): 2021ರ ನಾಗರಿಕ ಸೇವಾ ಪರೀಕ್ಷೆಯಲ್ಲಿ (Civil Services Exam) ಈ ಬಾರಿ ಹೆಣ್ಣುಮಕ್ಕಳೇ ಟಾಪ್ 3 ಸ್ಥಾನ ಬಾಚಿಕೊಂಡಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ (Union Public Service Commission - UPSC) ಪ್ರಕಟಿಸಿದ ಅಂತಿಮ ಫಲಿತಾಂಶಗಳ ಪ್ರಕಾರ ಶ್ರುತಿ ಶರ್ಮಾ (Shruti Sharma), ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ.
UPSC ಟಾಪರ್ ಶ್ರುತಿ ದೆಹಲಿ ಮೂಲದವರು. ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ (ಆನರ್ಸ್) ಪದವಿ ಪಡೆದರು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರೂ ಕೂಡ UPSC ಆಕಾಂಕ್ಷಿಯಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಪ್ರವೇಶ ಪಡೆದಿದ್ದರಿಂದ ಅವರು ತಮ್ಮ ಕೋರ್ಸ್ ನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಸಿವಿಲ್ಸ್‌ಗೆ ತಯಾರಿ ನಡೆಸುತ್ತಿದ್ದರು.
ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ
ಇತಿಹಾಸದ ವಿದ್ಯಾರ್ಥಿನಿ ಶ್ರುತಿ ಶರ್ಮಾ ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಬಂದವರು. ಅವರು ತನ್ನ ಶಿಕ್ಷಣವನ್ನು ದೆಹಲಿಯಲ್ಲಿ ಮುಗಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿ. ನಂತರ ಸ್ನಾತಕೋತ್ತರ ಪದವಿಯನ್ನು ಪಡೆಯಲು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ) ಗೆ ಸೇರಿದರು.
ಈ ವರ್ಷ UPSC ತೇರ್ಗಡೆಯಾದ ಜಾಮಿಯಾದ 23 ವಿದ್ಯಾರ್ಥಿಗಳಲ್ಲಿ ಶ್ರುತಿ ಶರ್ಮ ಕೂಡ ಒಬ್ಬರಾಗಿದ್ದಾರೆ. ಪ್ರಸ್ತುತ, ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂಎ ಸಮಾಜಶಾಸ್ತ್ರವನ್ನು ಓದುತ್ತಿದ್ದಾರೆ. ನನ್ನ ಮೊದಲ ಆದ್ಯತೆ ನಾನು ಮೂಲತಃ ಸೇರಿರುವ ಉತ್ತರ ಪ್ರದೇಶ ಕೇಡರ್ ಆಗಿದೆ. ಉತ್ತರ ಪ್ರದೇಶವು ದೊಡ್ಡ ಅವಕಾಶಗಳನ್ನು ಹೊಂದಿದೆ. ನಾನು ಕೆಲಸ ಮಾಡಲು ಬಯಸುವ ಹಲವು ಕ್ಷೇತ್ರಗಳನ್ನು ಹೊಂದಿದೆ ಎನ್ನುತ್ತಾರೆ.
Kuvempu Row; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ
UPSC 2021 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿರುವ ಶ್ರುತಿ ಶರ್ಮಾ, ಪೋಷಕರು ಮತ್ತು ಸ್ನೇಹಿತರು ತನ್ನ ಪ್ರಯಾಣದಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಪ್ರೋತ್ಸಾಹ ನೀಡಿದ್ದಾರೆ ಎಂದರು. ತಾನು ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ, ಅತ್ಯಂತ ಖುಷಿಯಾಗಿದೆ ಎಂದರು.
"ನನ್ನ ಪ್ರಯಾಣದಲ್ಲಿ ವಿಶೇಷವಾಗಿ ನನ್ನ ತಂದೆ-ತಾಯಿಗಳಿಗೆ ಶ್ರೇಯಸ್ಸು ಸಲ್ಲುತ್ತದೆ. ನನಗೆ ಮಾರ್ಗದರ್ಶನ ನೀಡಿದ ಸ್ನೇಹಿತರಿಗೂ ಧನ್ಯವಾದಗಳು ಎಂದಿದ್ದಾರೆ. ನಾನು ಪಾಸ್ ಆಗುತ್ತೇನೆಂಬ ನಂಬಿಕೆಯಲ್ಲಿದ್ದೆ. ಆದರೆ ಫಸ್ಟ್ ರ‍್ಯಾಂಕ್ ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ. ಶರ್ಮಾ ಅವರು ಭಾರತೀಯ ಆಡಳಿತ ಸೇವೆಗಳಿಗೆ (IAS) ಸೇರುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದ್ದಾರೆ.
ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ವೈಯಕ್ತಿಕ ಆಸಕ್ತಿಯ ಮೂಲಕ ತನಗೆ ನೀಡಿದ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ ಎಂದು ಶರ್ಮಾ ಹೇಳಿದ್ದಾರೆ.
UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್‌ಗೆ 31ನೇ ರ‍್ಯಾಂಕ್!
UPSE ಯ ಪಠ್ಯಕ್ರಮವು ತುಂಬಾ ದೊಡ್ಡದಾಗಿದೆ ಮತ್ತು ದಣಿದಿದೆ. ಅದನ್ನು ಭೇದಿಸಲು ಸರಿಯಾದ ತಂತ್ರದ ಅಗತ್ಯವಿದೆ. ಅಭ್ಯರ್ಥಿಯು ತನ್ನ ಸ್ವಂತ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಮಾತ್ರವಲ್ಲದೆ ಅವುಗಳನ್ನು ಪರಿಷ್ಕರಿಸಬೇಕು. UPSC ಅಭ್ಯರ್ಥಿಗಳಿಗೆ ತಾಳ್ಮೆ ಅತ್ಯಗತ್ಯ ಎಂದು ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.
ಶೃತಿ ಶರ್ಮಾ ಅವರ ಸಾಧನೆಯಿಂದ ತುಂಬಾ ಸಂತೋಷವಾಗಿದೆ, ಇದೆಲ್ಲವೂ ಶ್ರುತಿಯ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ, ಅವಳು ಯಾವಾಗಲೂ ತನ್ನ ಅಧ್ಯಯನದಲ್ಲಿ ನಿರತಳಾಗಿದ್ದಳು, ನಾವು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮಲಗಲು ಕೇಳುತ್ತಿದ್ದೆವು. ಸಾಮಾಜಿಕ ಮಾಧ್ಯಮದಲ್ಲಿ ಆಕೆ ಸಕ್ರಿಯರಾಗಿರುವುದು ತುಂಬಾ ಕಡಿಮೆ ಎಂದು ಪೋಷಕರು ಹೇಳಿದ್ದಾರೆ.