ರಾಯಚೂರು ಕೃಷಿ ವಿವಿಗೆ ಕೇಂದ್ರ ಹಣಕಾಸು ಸಚಿವರಿಂದ ಭರ್ಜರಿ ಗಿಫ್ಟ್..!

By Girish Goudar  |  First Published Aug 28, 2022, 3:30 AM IST

ಕೃಷಿ ವಿವಿಯಿಂದ ಸಿರಿಧಾನ್ಯ ಸಂಶೋಧನೆಗಾಗಿ 25 ಕೋಟಿ ರೂ. ಘೋಷಣೆ, ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ಕೇಂದ್ರ ಸ್ಥಾನ ಆಗಬೇಕು: ಸಿಎಂ ಬೊಮ್ಮಾಯಿ
 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಆ.28): ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಿನ್ನೆ(ಶನಿವಾರ) ಸಿರಿಧಾನ್ಯಗಳ ಸಮಾವೇಶ ನಡೆಯಿತು. ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಯಚೂರು ಉಸ್ತುವಾರಿ ಸಚಿವ ಶಂಕರ್. ಬಿ.ಪಾಟೀಲ್ ಮುನೇನಕಕೊಪ್ಪ ಚಾಲನೆ ನೀಡಿದ್ರು. 

Latest Videos

undefined

ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಆರಂಭದಲ್ಲಿ ಕನ್ನಡದಲ್ಲಿ ಗಣ್ಯರನ್ನ ಸ್ವಾಗತಿಸಿ ಮಾತು ಶುರು ಮಾಡಿದ ಅವರು ದೇಶದಲ್ಲಿ ಸಿರಿಧಾನ್ಯಗಳ ಬೆಳೆಯುವ ಕ್ಷೇತ್ರವು ಶೇ.60 ರಷ್ಟು ಕಡಿಮೆಯಾಗಿದೆ.ಇದಕ್ಕೆ ಕಾರಣ ಏನು‌ ಎಂಬುದನ್ನು ಪತ್ತೆ ಮಾಡಬೇಕು. 2018 ರಲ್ಲಿ ಭಾರತವು ಸಿರಿಧಾನ್ಯಗಳ ವರ್ಷ ಆಚರಿಸಲಾಗಿತ್ತು. ಇದೇ ಪ್ರಸ್ತಾವನೆಯನ್ನು‌ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಗೆ ಸಲ್ಲಿಸಿದ್ದಾರೆ‌. ಸಿರಿಧಾನ್ಯ ಬೆಳೆಯುವಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ವಿಶ್ವದಲ್ಲೇ ಭಾರತವು ಸಿರಿಧಾನ್ಯಗಳ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕದ ಕಾಣಿಕೆ ಅಪಾರವಾಗಿದೆ. ಆಹಾರ ಸುರಕ್ಷತೆ ಸಾಧ್ಯವಾಗಿದ್ದು, ಪೌಷ್ಟಿಕ ಸುರಕ್ಷತೆ ಸಾಧಿಸಬೇಕಾಗಿದೆ. ಸಿರಿಧಾನ್ಯವು ಪೌಷ್ಟಿಕ ಆಹಾರ ಸುರಕ್ಷತೆ ಆಹಾರದಲ್ಲಿ ಒಂದಾಗಿದೆ ಎಂದರು. 

ಗದಗ: ಮೊರಾರ್ಜಿ ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ಸ್ನಾನ, ಕೊಳೆತ ಕಾಯಿಪಲ್ಲೆ ಊಟಕ್ಕೆ ಬಳಕೆ..!

ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮಹಿಳೆಯರ ಭಾಗಿಯಾಗುವುದು ಅಗತ್ಯ

ಕಲ್ಯಾಣ ಕರ್ನಾಟಕವು ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳ ತಾಣವಾಗಲಿ, ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳಲ್ಲಿ ನೂರಾರು ಬಡ ಮಹಿಳೆಯರಿಗೆ ಹೆಚ್ಚು ಉದ್ಯೋಗಗಳು ದೊರೆಯುತ್ತವೆ. ಸಿರಿಧಾನ್ಯಗಳ ಬೆಳೆಯುವ ರೈತರಿಗೆ ರಾಜ್ಯ ಮತ್ತು ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಈ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಐದು ವರ್ಷ ತೆರಿಗೆ ವಿನಾಯಿತಿ ನೀಡಲಾಗುವುದು. ಅಷ್ಟೇ ಅಲ್ಲದೆ ನಬಾರ್ಡ್ ದೇಶದ ಕೃಷಿಯಲ್ಲಿ ಸಾಕಷ್ಟು ಉತ್ತಮ‌ ಕೆಲಸಗಳನ್ನು ಮಾಡುತ್ತಿದೆ. ಎಫ್ ಪಿಒ ಗಳನ್ನು ಸ್ಥಾಪಿಸುತ್ತಿದೆ. ಸಿರಿಧಾನ್ಯಗಳನ್ನು ಬೆಳೆಯುವುದು, ಸಂಸ್ಕರಣೆ ಮಾಡುವುದು ಆಗಿದೆ. ಇನ್ನೂ ಈ ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ದಾಸ್ತಾನು ಮಾಡುವ ಹಬ್ ಆಗಿ ಅಭಿವೃದ್ಧಿ ಆಗಬೇಕು ಅಂತ ಹೇಳಿದ್ದಾರೆ. 

ಕೊಡಗು, ಚಿಕ್ಕಮಗಳೂರು ಅಂದ್ರೆ ಎಲ್ಲರಿಗೂ ನೆನಪಿಗೆ  ಕಾಫಿ‌ ಬರುತ್ತೆ. ಅದೇ ಮಾದರಿಯಲ್ಲಿ ಸಿರಿಧಾನ್ಯಗಳ ತಾಣ ಅಂದ್ರೆ ಅದು ಕಲ್ಯಾಣ ಕರ್ನಾಟಕವಾಗಲಿ. ಇದರಿಂದ ದೊಡ್ಡ ಕಂಪೆನಿಗಳು‌ ಭಾಗವಹಿಸಿ ವಹಿವಾಟು ವೃದ್ಧಿಸಲು ಸಾಧ್ಯವಾಗುತ್ತದೆ. ನಬಾರ್ಡ್ ಮೂಲಕ 25 ಕೋಟಿ ಅನುದಾ‌ನವನ್ನು ಸಿರಿಧಾನ್ಯಗಳ ಕುರಿತು ಅಭಿವೃದ್ಧಿ ಮಾಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಒದಗಿಸಲಾಗುವುದು. ಸಿರಿಧಾನ್ಯಗಳ ಸಂಶೋಧನೆ, ಅಭಿವೃದ್ಧಿಗೆ ಅನುದಾನ ಬಳಕೆ‌‌ ಆಗಬೇಕು ಅಂತ ತಿಳಿಸಿದ್ದಾರೆ.

ಸಿರಿಧಾನ್ಯಗಳು ಬೆಳೆಯುವ ಅನ್ನದಾತರ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯಬೇಕು.ಪರಿಹಾರ ಸೂಚಿಸುವ ಮೂರು ಆರಂಭಿಕ ಸಾರ್ಟ್ ಅಪ್ ಗಳಿಗೆ ತಲಾ ಒಂದು ಕೋಟಿ ಬಹುಮಾನ ನೀಡಲಾಗುವುದು. ಪರಿಹಾರ ಸೂಚಿಸುವ 50 ಜನರಿಗೆ ತಲಾ ₹20 ಲಕ್ಷ ಹಾಗೂ ಇನ್ನುಳಿದವರಿಗೆ ₹10 ಲಕ್ಷ ಪ್ರೋತ್ಸಾಹ ಧನವನ್ನು ನೀತಿ ಆಯೋಗದ ಮೂಲಕ ನೀಡಲಾಗುವುದು ಸಿರಿಧಾನ್ಯಗಳು ಬೆಳೆದು ಸಂಸ್ಕರಣೆ ಮಾಡುವರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರ್ಜರಿ ಗಿಫ್ಟ್ ಘೋಷಣೆ ಮಾಡಿದ್ರು.

ನಾನು 30 ವರ್ಷದಿಂದ ಸಿರಿಧಾನ್ಯ ತಿನ್ನುತ್ತಿದ್ದೇನೆ: ಸಿಎಂ ಬೊಮ್ಮಾಯಿ 

ರಾಯಚೂರು ಕೃಷಿ ವಿವಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಬಜೆಟ್‌ನಲ್ಲಿ ವಿಶೇಷ ಅನುದಾನವಿಟ್ಟು ಸಿರಿಧಾನ್ಯಗಳ ಅಭಿಯಾನ ನಡೆಸಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ.ಇಲ್ಲಿನ ನಿರ್ಣಯಗಳನ್ನ ರಾಯಚೂರು ಮಿಲ್ಲೆಟ್ ಡಿಕ್ಲರೇಷನ್ ಅಂತ ಕರೆಯುತ್ತೇವೆ‌. ಈ ಸಮಾವೇಶದಲ್ಲಿನ ಚರ್ಚೆ, ನಿರ್ಣಯಗಳನ್ನ ಅನುಷ್ಠಾನ ಮಾಡುತ್ತೇವೆ. ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಕ್ರಮೇಣವಾಗಿ ಸಿರಿಧಾನ್ಯ ಬೆಳೆಯುವುದು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಸರ್ಕಾರ ಕಾರ್ಯಕ್ರಮ ಮಾಡಿ ಮತ್ತೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುತ್ತಿದೆ. ನಾನು ಕಳೆದ 30 ವರ್ಷಗಳಿಂದ ರೈಸ್ ತಿನ್ನುತ್ತಿಲ್ಲ, ಸಿರಿಧಾನ್ಯಗಳನ್ನ ಸೇವನೆ ಮಾಡುತ್ತಿದ್ದೇನೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸುತ್ತೇವೆ. ರಾಯಚೂರಿನಲ್ಲಿ ಮುಂದಿನ ತಿಂಗಳು ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಲು ಬರುತ್ತಿದ್ದೇನೆ. ಆ ವೇಳೆ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ದಿ ದೃಷ್ಟಿಯಲ್ಲಿ ಜವಳಿ ಪಾರ್ಕ್ ಮಾಡಲು ನಾವು ಸಿದ್ದರಿದ್ದೇವೆ. ಕೃಷಿ ವಿಜ್ಞಾನಿಗಳು ರೈತರಿಗೆ ಪ್ರಯೋಜನವಾಗುವ ಸಂಶೋಧನೆಗಳನ್ನ ಮಾಡಬೇಕು. ಜನವರಿಯಲ್ಲಿ ಬೆಂಗಳೂರಿನಲ್ಲಿ ಮಿಲ್ಲೆಟ್ ಟ್ರೇಡ್ ಫೇರ್ ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ ತಿಳಿಸಿದರು.

ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

ಸಿರಿಧಾನ್ಯವನ್ನು ಅಂತರರಾಷ್ಟ್ರೀಯ ಬೆಳೆಯಾಗಿಸಬೇಕು: 

ರಾಯಚೂರಿನ ಕೃಷಿ ವಿವಿಯ‌ ಸಿರಿಧಾನ್ಯಗಳ ಸಮಾವೇಶದಲ್ಲಿ 600ಕ್ಕೂ ಹೆಚ್ಚು ಕೃಷಿ ವಿಜ್ಞಾನಿಗಳು ಭಾಗವಹಿಸಿದರು. ಇದೇ ವೇಳೆ ಕೃಷಿ ವಿಜ್ಞಾನಿಗಳ ಸಂಶೋಧನೆ ಮತ್ತು ಸಂಸ್ಕರಣೆ ವ್ಯವಸ್ಥೆಯನ್ನು ನೋಡಿದ ರಾಜ್ಯ ಕೃಷಿ ಮಂತ್ರಿ ಶೋಭಾ ಕರಂದ್ಲಾಜೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ್ರು. ಕೇಂದ್ರ ಸರ್ಕಾರ 2023ನೇ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದೆ. ಭಾರತವು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಯಚೂರನ್ನು ಕೇಂದ್ರ ಮಾಡಿಕೊಂಡು ಸಿರಿಧಾನ್ಯಗಳನ್ನು ದೇಶದಾದ್ಯಂತ ಪ್ರಚಾರ ಮಾಡಬೇಕು ಎನ್ನುವ ಆಕಾಂಕ್ಷೆ ಹಣಕಾಸು ಸಚಿವರಲ್ಲಿತ್ತು. ಹೀಗಾಗಿ ಇಂದು ರಾಯಚೂರಿಗೆ ಮುಂಬೈನಿಂದ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ರೈಲಿನಲ್ಲಿ ಪ್ರಯಾಣ ಮಾಡಿ ರಾಯಚೂರಿಗೆ ಬಂದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ದೇಶದಲ್ಲಿ ಆಹಾರದ ಕೊರತೆ ನಿಗಿಸಲು ಹಸಿರು ಕ್ರಾಂತಿ ಆಯಿತು. ಗೋಧಿ ಮತ್ತು ಅಕ್ಕಿಯು ಹೆಚ್ಚು‌ ಬೆಳೆಲಾರಂಭಿಸಿ, ಸಿರಿಧಾನ್ಯವು ಹಿಂದೆ ಸರಿದುಹೋಯಿತು.

ಕರ್ನಾಟಕದಲ್ಲಿ ಸಿರಿಧಾನ್ಯ ಬಳಕೆ ಮಾಡುತ್ತಿದ್ದಾರೆ. ಮಳೆ ಆಧಾರಿತ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಸಲು ಸಾಧ್ಯವಿದೆ. ಈ ಸಿರಿಧಾನ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ.ದೇಶದಲ್ಲಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದೇವೆ. ಈಗ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೃಷಿಯನ್ನು ವ್ಯವಹಾರದಲ್ಲಿ ಮಾಡುವುದಕ್ಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ದೇಶದ ಸಿರಿಧಾನ್ಯಗಳ ಆಹಾರ ಪದ್ದತಿ ಶುರುವಾಗಬೇಕಾಗಿದೆ ರೈತರಿಗೆ ಅಗತ್ಯ ನೆರವು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು. 

ಒಟ್ಟಿನಲ್ಲಿ ಬಿಸಿಲುನಾಡು ರಾಯಚೂರು ಕೃಷಿ ವಿವಿಯಲ್ಲಿ ನಡೆದ ಸಿರಿಧಾನ್ಯಗಳ ಸಮಾವೇಶದಲ್ಲಿ ರಾಜ್ಯದ ನಾನಾ ಜಿಲ್ಲೆಯ ಕೃಷಿ ವಿಜ್ಞಾನಿಗಳು ಹಾಗೂ ರೈತರು ಮತ್ತು ವಿವಿಧ ಇಲಾಖೆಗಳು ಭಾಗವಹಿಸಿದರು.
 

click me!