ಯುಜಿಸಿ NET ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪು, 3 ಪರೀಕ್ಷೆ ರದ್ದುಗೊಳಿಸಿ ರೀ ಎಕ್ಸಾಂಗೆ ದಿನಾಂಕ ಘೋಷಣೆ

Published : Aug 16, 2026, 10:36 PM IST
ugc net exam

ಸಾರಾಂಶ

ಯುಜಿಸಿ NET 2026ರ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಪತ್ತೆಯಾಗಿದೆ. ಪರಿಣಾಮ ಮೂರು ವಿಷಯಗಳ ಪರೀಕ್ಷೆ ರದ್ದುಗೊಳಿಸಲಾಗಿದೆ. ಇಷ್ಟೇ ಅಲ್ಲ ಮರು ಪರೀಕ್ಷೆಗೆ ದಿನಾಂಕವನ್ನು ಎನ್‌ಟಿಎ ಘೋಷಿಸಿದೆ.

ನವದೆಹಲಿ (ಆ.16) ದೇಶಾದ್ಯಂತ ನೀಟ್ ಪೇಪರ್ ಲೀಕ್ ಕೋಲಾಹಲದ ಬಳಿಕ ಇದೀಗ ಯುಜಿಸಿ NET 2026 ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಕಾಣಿಸಿಕೊಂಡು ಪರೀಕ್ಷೆ ರದ್ದುಮಾಡಲಾಗಿದೆ. ಯುಜಿಸಿ NET 2026 ಪರೀಕ್ಷೆಯ ಇಂಗ್ಲೀಷ್, ಕಾಮರ್ಸ್ (ವಾಣಿಜ್ಯ) ಹಾಗೂ ಸೋಶಿಯಾಲಜಿ (ಸಮಾಜಶಾಸ್ತ್ರ)ವಿಷಗಳ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಪತ್ತೆಯಾಗಿದೆ. ಹೀಗಾಗಿ ಈ ಮೂರು ವಿಷಯಗಳ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇಷ್ಟೇ ಅಲ್ಲ ಈ ಮೂರು ವಿಷಗಳ ಮರು ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಭಾರಿ ಲೋಪ

ಯುಜಿಸಿ ನೆಟ್ 2026ರ ಜೂನ್ ಪರೀಕ್ಷೆ ಬಳಿಕ ಅಭ್ಯರ್ಥಿಗಳು ದೂರು ಸಲ್ಲಿಸಿದ್ದರು. ಪ್ರಶ್ನೆ ಪತ್ರಿಕೆಯ ತಪ್ಪುಗಳ ಕುರಿತು ಆಕ್ರೋಶಗಳು ವ್ಯಕ್ತವಾಗಿತ್ತು. ಈ ದೂರುಗಳನ್ನು ಸ್ವೀಕರಿಸಿದ ಎನ್‌ಟಿಎ ಪರಿಶೀಲನೆದೆ ತಜ್ಞರ ಸಮಿತಿ ನೇಮಕ ಮಾಡಲಾಗಿತ್ತು. ತಜ್ಞರ ಸಮಿತಿ ಪ್ರಶ್ನೆ ಪತ್ರಿತೆಯಲ್ಲಿ ಲೋಪಗಳು ಇರುವುದು ಪತ್ತೆ ಹಚ್ಚಿದೆ. ತಜ್ಞರು, ಲೇಖಕರು, ಸೇರಿದಂತೆ ಹಲವು ಹೆಸರುಗಳು ತಪ್ಪಾಗಿ ಮುದ್ರಣಗೊಂಡಿತ್ತು. ಪುಸ್ತಕಗಳ ಹೆಸರುಗಳೂ ಅಸ್ಪಷ್ಟವಾಗಿತ್ತು. ಇನ್ನು ವ್ಯಾಕರಣ ದೋಷ ಸೇರಿದಂತೆ ಸಾಲು ಸಾಲು ತಪ್ಪುಗಳು ಪತ್ತೆಯಾಗಿತ್ತು. ಇನ್ನು ಇಂಗ್ಲೀಷ್ ವಿಷಯ ಪರೀಕ್ಷೆಯಲ್ಲಿ ಹಿಂದಿನ ಪರೀಕ್ಷೆಯ 67 ಪ್ರಶ್ನೆಗಳನ್ನು ಯಥವಾತ್ತಾಗಿ ನೀಡಲಾಗಿತ್ತು. ಹೀಗಾಗಿ ಮೂರು ಪರೀಕ್ಷೆ ರದ್ದುಗೊಳಿಸಿ , ಮರು ಪರೀಕ್ಷೆಗೆ ದಿನಾಂಕ ಘೋಷಿಸಲಾಗಿದೆ.

ಮರು ಪರೀಕ್ಷೆ ದಿನಾಂಕ

  1. ಇಂಗ್ಲೀಷ್, ಸೆಪ್ಟೆಂಬರ್ 9, ಬೆಳಗ್ಗೆ 9 ರಿಂದ ಮಧ್ಯಾಹ್ನ 12
  2. ಕಾಮರ್ಸ್, ಸೆಪ್ಟೆಂಬರ್ 9, ಮಧ್ಯಾಹ್ನ 3 ರಿಂದ ಸಂಜೆ 6
  3. ಸೋಶಿಯಾಲಜಿ, ಸೆಪ್ಟೆಂಬರ್ 10, ಬೆಳಗ್ಗೆ 9 ರಿಂದ ಮಧ್ಯಾಹ್ನ 12

ಮರುಪರೀಕ್ಷೆಗೆ ಹೆಚ್ಚುವರಿ ಶುಲ್ಕವಿಲ್ಲ

ಮೂರು ವಿಷಯಗಳ ಪರೀಕ್ಷೆ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಈ ಮರು ಪರೀಕ್ಷೆ ಹಾಜರಾಗುವ ಅಭ್ಯರ್ಥಿಗಳಿಗೆ ಶುಲ್ಕ ವಸೂಲಿ ಇರುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

PREV
Read more Articles on
click me!

Recommended Stories

Bihar Boy Success Story: ಕನ್ನಡದ ಕಂಪು ಬೀರಿದ ಬಿಹಾರಿ ಕಂದ; ಹೆತ್ತವರಿಗೆ ಕನ್ನಡ ಬರಲ್ಲ, ಆದರೆ ಮಗ ಮಾತ್ರ ಕನ್ನಡ ಕ್ಲಾಸ್ ಟಾಪರ್!
ಶಿಕ್ಷಕರ ನೇಮಕಾತಿ: ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ