ಡಿಗ್ರಿ, ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ಆಧಾರ್‌ ನಮೂದಿಗೆ ನಿಷೇಧ

By Suvarna NewsFirst Published Sep 3, 2023, 11:07 AM IST
Highlights

ಯಾವುದೇ ವಿಶ್ವವಿದ್ಯಾಲಯಗಳು ಪದವಿ ಅಥವಾ ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ನಮೂದಿಸುವಂತಿಲ್ಲ ಎಂದು ಯುಜಿಸಿ ಸೂಚಿಸಿದೆ.

ನವದೆಹಲಿ (ಸೆ.3): ಯಾವುದೇ ವಿಶ್ವವಿದ್ಯಾಲಯಗಳು ಪದವಿ ಅಥವಾ ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ನಮೂದಿಸುವಂತಿಲ್ಲ ಎಂದು ಯುಜಿಸಿ (ವಿಶ್ವ ವಿದ್ಯಾಲಯ ಧನಸಹಾಯ ಆಯೋಗ) ಸೂಚಿಸಿದೆ.

ವಿಶ್ವವಿದ್ಯಾಲಯಗಳು ನೀಡುವ ಪದವಿ ಅಥವಾ ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ವಿದ್ಯಾರ್ಥಿಗಳ ಸಂಪೂರ್ಣ ಆಧಾರ್‌ ಸಂಖ್ಯೆ ಮುದ್ರಿಸಲು ರಾಜ್ಯ ಸರ್ಕಾರಗಳು ಚಿಂತಿಸುತ್ತಿವೆ. ಈ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಅಥವಾ ನೇಮಕಾತಿ ವೇಳೆ ಸಂಖ್ಯೆಯನ್ನು ದೃಢೀಕರಣಕ್ಕೆ ಬಳಸಲು ಒಲವು ಹೊಂದಿವೆ ಎಂಬ ವರದಿಗಳ ಬೆನ್ನಲ್ಲೇ ಯುಜಿಸಿ, ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ಈ ಕುರಿತ ಸುತ್ತೋಲೆ ರವಾನಿಸಿದೆ.

ಶಿಕ್ಷಣ ಸಚಿವರೇ ಇತ್ತ ನೋಡಿ: 153 ಮಕ್ಕಳಿರುವ ಶಾಲೆಗೆ ಒಬ್ಬನೇ ಶಿಕ್ಷಕ..!

ನಿಯಮಗಳ ಅನ್ವಯ, ಆಧಾರ್‌ ಸಂಖ್ಯೆ ಹೊಂದಿರುವ ಯಾವುದೇ ಸಂಸ್ಥೆಯು ಅಂಥ ಸಂಖ್ಯೆಯನ್ನು ಸೂಕ್ತ ರೀತಿಯಲ್ಲಿ ಮರೆಮಾಚದೇ ಅದನ್ನು ಬಹಿರಂಗಪಡಿಸುವಂತಿಲ್ಲ. ಈ ಕುರಿತ ಭಾರತೀಯ ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರದ ನಿಯಮಗಳನ್ನು ಎಲ್ಲಾ ವಿವಿಗಳು ತಪ್ಪದೇ ಪಾಲಿಸಬೇಕು ಎಂದು ಯುಜಿಸಿ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ.

ನಿಯಮಗಳ ಪ್ರಕಾರ, ಆಧಾರ್ ಸಂಖ್ಯೆಯನ್ನು ಹೊಂದಿರುವ ಯಾವುದೇ ಘಟಕವು ಯಾವುದೇ ಡೇಟಾಬೇಸ್ ಅಥವಾ ದಾಖಲೆಯನ್ನು ಒಳಗೊಂಡಿರುವ ಯಾವುದೇ ಡೇಟಾಬೇಸ್ ಅಥವಾ ದಾಖಲೆಯನ್ನು ಸೂಕ್ತ ವಿಧಾನಗಳ ಮೂಲಕ ಮರುಸಂಪಾದಿಸದ ಹೊರತು ಅಥವಾ ಬ್ಲ್ಯಾಕ್‌ಔಟ್ ಮಾಡದ ಹೊರತು ಸಾರ್ವಜನಿಕಗೊಳಿಸುವುದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ವಿಶ್ವವಿದ್ಯಾಲಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಪಹರಣಕಾರರಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಹೀಗೆ ಪಾಸ್ವರ್ಡ್ ಬಳಸಿ!

ಪದವಿಗಳು ಮತ್ತು ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ಆಧಾರ್ ಸಂಖ್ಯೆಗಳ ಮುದ್ರಣವನ್ನು ಅನುಮತಿಸಲಾಗುವುದಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಯುಐಡಿಎಐನ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದ್ದಾರೆ.

 

click me!