ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ತಿಳಿ ಹೇಳಿದರು. ನಮ್ರತೆ ಹಾಗೂ ಪರಿಣಾಮಕಾರಿ ಸಂವಹನವು ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸಿನ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು, ಇದರ ಜೊತೆಗೆ ಯಾವುದೇ ಹಾನಿ ಮಾಡಬೇಡಿ ಎಂಬ ಮೂಲಭೂತ ಮೌಲ್ಯಗಳು ಇರಬೇಕು: ಡಾ. ಎಂ.ಡಿ. ವೆಂಕಟೇಶ್
ಉಡುಪಿ(ಸೆ.02): ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ (KMC) ಮೆಡ್ ಓರಿಯಂಟ್ (MBBS ಬ್ಯಾಚ್ 2023-24 ರ ಓರಿಯಂಟೇಶನ್ ಪ್ರೋಗ್ರಾಂ) ಅನ್ನು ಅಧಿಕೃತವಾಗಿ ಇಂದು(ಶನಿವಾರ) ಉದ್ಘಾಟಿಸಲಾಯಿತು.
ಹೊಸದಾಗಿ ಸೇರ್ಪಡೆಗೊಂಡ MBBS ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಸಮಾರಂಭದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆಯ ಸಹ ಕುಲಪತಿ ಡಾ. ಎಚ್.ಎಸ್.ಬಲ್ಲಾಳ್, ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ ಡಿ ವೆಂಕಟೇಶ್, ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಅವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ನೀಟ್‌ನಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಭಾಗವಹಿಸಿ ಕೆಎಂಸಿ ಮಣಿಪಾಲದ ದಾರ್ಶನಿಕ ಸಂಸ್ಥಾಪಕ ಡಾ.ಟಿಎಂಎ ಪೈ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಅವರು ವೈದ್ಯರುಗಳು ಮತ್ತು ನಾಯಕರ ಮಹತ್ವವನ್ನು ತಿಳಿಸಿ ಹೇಳಿದರು.
undefined
ಉಡುಪಿ: ವಿಚಿತ್ರಾತಿಚಿತ್ರಗಳ ಉರಿಪಿಂಡ ನಮ್ಮ ಸೂರ್ಯ, ಡಾ.ಎ.ಪಿ.ಭಟ್
ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ತಿಳಿ ಹೇಳಿದರು. ನಮ್ರತೆ ಹಾಗೂ ಪರಿಣಾಮಕಾರಿ ಸಂವಹನವು ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸಿನ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು, ಇದರ ಜೊತೆಗೆ ಯಾವುದೇ ಹಾನಿ ಮಾಡಬೇಡಿ ಎಂಬ ಮೂಲಭೂತ ಮೌಲ್ಯಗಳು ಇರಬೇಕು ಎಂದು ಹೇಳಿದರು.
ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಅವರು 2023-24 ನೇ ಸಾಲಿನ ವಿದ್ಯಾರ್ಥಿ ಕೈಪಿಡಿಯನ್ನು ಬಿಡುಗಡೆ ಮಾಡಿದರು ಮತ್ತು ಕೆಎಂಸಿ ಮಣಿಪಾಲವನ್ನು ತಮ್ಮ ಕಲಿಕೆಯ ಸಂಸ್ಥೆಯಾಗಿ ಆಯ್ಕೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಅವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಶಿಸ್ತು, ಪ್ರಬುದ್ಧತೆ, ಸಮಯ ನಿರ್ವಹಣೆ ಮತ್ತು ಒಟ್ಟಾರೆ ಯೋಗಕ್ಷೇಮದ ಮಹತ್ವವನ್ನು ಒತ್ತಿ ಹೇಳಿದರು.
ಅಸೋಸಿಯೇಟ್ ಡೀನ್ ಡಾ.ಅನಿಲ್ ಭಟ್ ಅವರು ಬಿಳಿ ಕೋಟ್‌ನ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಹೊಸ ವಿದ್ಯಾರ್ಥಿಗಳಿಗೆ ಚರಕ ಶಪಥ (ಪ್ರಮಾಣ) ಬೋಧಿಸಿದರು, ಹಾಗೂ ವೈದ್ಯರ ನೈತಿಕ ಜವಾಬ್ದಾರಿಗಳನ್ನು ಒತ್ತಿಹೇಳಿದರು.
ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ದೂರದೃಷ್ಟಿಯುಳ್ಳ ಡಾ.ಟಿ.ಎಂ.ಎ.ಪೈ ಅವರನ್ನು ಸ್ಮರಿಸುತ್ತಾ, ಕೌಶಲ್ಯ ಶಿಕ್ಷಣದಲ್ಲಿ ಅವರ ಪ್ರವರ್ತಕ ಪ್ರಯತ್ನಗಳ ಬಗ್ಗೆ ಮಾತನಾಡಿದರು. ನೀಟ್‌ನಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಡಾ. ರೇಹಾನ್ ಹಾಸನ ಮತ್ತು ಡಾ. ಮೆಹರ್ ಬ್ಯಾಟರಿವಾಲಾ ಅವರನ್ನು ಅವರು ಅಭಿನಂದಿಸಿದರು.
ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಕ್ಯಾಂಪ್ಕೊ ಪತ್ರ; ಯಾಕೆ ಗೊತ್ತಾ?
ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು ಆಗಮಿಸಿದ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣಕ್ಕೆ ಮಾರ್ಗದರ್ಶನ ನೀಡಿದರು. ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಅವರ ವಂದನಾರ್ಪಣೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು. ಡಾ. ಸುಷ್ಮಾ ಪ್ರಭಾತ್ ಮತ್ತು ಡಾ.ಅನ್ನಾ ಡಿಸೋಜಾ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳು ಮಣಿಪಾಲದ ಎಂಡ್‌ಪಾಯಿಂಟ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಸಾಂಕೇತಿವಾಗಿ ತಮ್ಮ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಯಾಣವನ್ನು ಪ್ರಾಂಭಿಸಿದರು.