ಯುಜಿ ನೀಟ್: ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ, ಕೆಇಎ ಮೂಲಕವೇ ಹಂಚಿಕೆ

By Suvarna News  |  First Published Aug 7, 2024, 8:03 PM IST

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಅರ್ಜಿ ಸಲ್ಲಿಸದ ಹಾಗೂ ಯುಜಿ ನೀಟ್-24 ನಲ್ಲಿ ಅರ್ಹತೆ ಪಡೆದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ತನ್ನ ವೆಬ್‌ ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.
 


ಬೆಂಗಳೂರು (ಆ.07): ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಅರ್ಜಿ ಸಲ್ಲಿಸದ ಹಾಗೂ ಯುಜಿ ನೀಟ್-24 ನಲ್ಲಿ ಅರ್ಹತೆ ಪಡೆದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ತನ್ನ ವೆಬ್‌ ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ರಾಜ್ಯ ಮತ್ತು ಹೊರ ರಾಜ್ಯದ ಅರ್ಹ ಅಭ್ಯರ್ಥಿಗಳು ಮಾತ್ರ ಆಗಸ್ಟ್ 9ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅದರ ನಂತರ ಬರುವವರಿಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಇಎ ವೆಬ್‌ ಪೋರ್ಟಲ್‌ನಲ್ಲಿ, ಯುಜಿ ನೀಟ್-24ಕ್ಕೆ ಹೊಸದಾಗಿ ನೋಂದಣಿ ಮಾಡುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಬಿಜೆಪಿಯವರಿಗೆ ಭಯ: ಶಾಸಕ ಎ.ಆರ್.ಕೃಷ್ಣಮೂರ್ತಿ

ಕೆಇಎ ಮೂಲಕವೇ ಹಂಚಿಕೆ: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಎಲ್ಲ ವಿಧದ (ಖಾಸಗಿ, ಎನ್ ಆರ್ ಐ, ಆಡಳಿತ ಮಂಡಳಿಗಳ ಸೀಟುಗಳೂ ಸೇರಿದಂತೆ) ಸೀಟುಗಳನ್ನು ಕೆಇಎ‌ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೊನೆ ಹಂತದಲ್ಲಿ ಬಾಕಿ ಉಳಿಯುವ ಸೀಟುಗಳನ್ನು ಕೂಡ ಕೆಇಎ ಮೂಲಕವೇ ಮಾಡಲಾಗುತ್ತದೆ. ಈ ಸಂಬಂಧ ರಾಷ್ಟೀಯ ವೈದ್ಯಕೀಯ ಮಂಡಳಿಯ (ಎನ್ ಎಂಸಿ) ಸ್ಪಷ್ಟ ನಿರ್ದೇಶನ ಇದೆ ಎಂದು ಪ್ರಸನ್ನ ಅವರು ತಿಳಿಸಿದರು.

click me!