UDISE+ 2025-26 Report: ಸರ್ಕಾರಿ ಶಾಲೆ ದಾಖಲಾತಿ 2 ವರ್ಷದಲ್ಲಿ 86 ಲಕ್ಷದಷ್ಟು ಇಳಿಕೆ!

Kannadaprabha News   | Kannada Prabha
Published : Jul 09, 2026, 09:46 AM IST
 UDISE plus 2025 26 Report Why Government School Enrolment Fell by 86 Lakh Students rav

ಸಾರಾಂಶ

ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

  • ಖಾಸಗಿ ಶಾಲೆಗೆ 88 ಲಕ್ಷ ವಿದ್ಯಾರ್ಥಿಗಳು
  • ಶಿಕ್ಷಕ-ವಿದ್ಯಾರ್ಥಿ ಅನುಪಾತ 24: ಚೇತರಿಕೆ
  • 5,663 ಶಾಲೇಲಿ ಶೂನ್ಯ ದಾಖಲಾತಿ
  • ದೇಶದಲ್ಲಿ 1.01 ಲಕ್ಷ ಏಕಶಿಕ್ಷಕ ಶಾಲೆ

ನವದೆಹಲಿ (ಜು.9) : ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಶಾಲಾ ಮೂಲಸೌಕರ್ಯ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಿಕ್ಷಕರಿಗೆ ಸಂಬಂಧಿಸಿದ ನೈಜ ಸಮಯದ ಮಾಹಿತಿಯನ್ನು ಒದಗಿಸುವ ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ+ ಡೇಟಾಬೇಸ್‌(UDISE+ 2025-26 Report)ನಲ್ಲಿ ಈ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ, ಒಟ್ಟಾರೆಯಾಗಿ ಪೂರ್ವ-ಪ್ರಾಥಮಿಕದಿಂದ ಪ್ರೌಢಶಿಕ್ಷಣದ ಹಂತದ ವರೆಗೆ 2023-24ರಲ್ಲಿ 24.80 ಕೋಟಿ ದಾಖಲಾತಿಗಳಾಗಿದ್ದು, ಇದು 2025-26ರ ಅವಧಿಯಲ್ಲಿ 24.72 ಕೋಟಿಗಿಳಿದಿದೆ. ಇದರಲ್ಲಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ 12.75 ಕೋಟಿಯಿಂದ 11.89 ಕೋಟಿಗಿಳಿದಿದೆ. ಆದರೆ ಖಾಸಗಿ ಶಾಲೆಗಳ ದಾಖಲಾತಿ 9 ಕೋಟಿಗಿಂತ 9.89 ಕೋಟಿಗೇರಿದೆ.

14.72 ಲಕ್ಷವಿದ್ದ ಶಾಲೆಗಳ ಸಂಖ್ಯೆ 14.67 ಲಕ್ಷಕ್ಕಿಳಿದಿದೆ. ಶಿಕ್ಷಕರ ಸಂಖ್ಯೆ 98.08 ಲಕ್ಷದಿಂದ 1.03 ಕೋಟಿಗೇರಿದೆ. ಇದರಿಂದ ವಿದ್ಯಾರ್ಥಿ-ಶಿಕ್ಷಕ ಅನುಪಾತ 25ರಿಂದ 24 (ಸುಧಾರಣೆ) ಆಗಿದೆ. ಏಕಶಿಕ್ಷಕ ಶಾಲೆಗಳು 1.11 ಲಕ್ಷದಿಂದ 1.01 ಲಕ್ಷಕ್ಕಿಳಿದಿದೆ. 5,663 ಶಾಲೆಗಳಲ್ಲಿ ಒಂದೂ ದಾಖಲಾತಿಯಾಗಿಲ್ಲ.

PREV
Read more Articles on
click me!

Recommended Stories

ZOZO Connect: ಒಂದೇ ಒಂದು ಚಿಕ್ಕ ಐಡಿಯಾದಿಂದ 11 ವರ್ಷದ ಹುಡುಗ 25 ಕೋಟಿ ಮೌಲ್ಯದ ಸ್ಟಾರ್ಟ್‌ಅಪ್ ಸಂಸ್ಥಾಪಕ
ಅಯ್ಯೋ ದೇವರೇ...! ಇದೇನು ಸರ್ಕಾರಿ ಶಾಲೆಯೋ, ಮದ್ಯದ ಬಾಟಲಿ ಗೋಡನ್ನೋ....!