
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜೂ.3): ಮಂಗಳೂರಿನ ವಿವಿ ಘಟಕ ಕಾಲೇಜಿನ ಹಿಜಾಬ್ ವಿವಾದ (Hijab Row) ಬಗೆ ಹರಿಸಲು ಹಿಜಾಬ್ ವಿದ್ಯಾರ್ಥಿನಿಯರು (Hijab Students) ಎರಡು ದಿನಗಳ ಗಡುವು ನೀಡಿದ್ದು, ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇವರ ಈ ಹೋರಾಟಕ್ಕೆ ಮಂಗಳೂರು ವಿವಿ (Mangaluru University) ಸಮನ್ವಯ ಸಮಿತಿ ಹೆಸರಿನ ಹೊಸ ಸಂಘಟನೆಯೊಂದು ಬೆಂಬಲ ಘೋಷಿಸಿದೆ.
ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ವಿಚಾರದಲ್ಲಿ ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಹೇಳಿಕೆ ನೀಡಿದ್ದು, ಮಂಗಳೂರು ವಿವಿ ಸಮನ್ವಯ ಸಮಿತಿ ಮುಂದೆ ಬೃಹತ್ ಹೋರಾಟ ನಡೆಸಲಿದೆ. ನಾವು ಎರಡು ದಿನದ ಗಡುವು ದ.ಕ ಜಿಲ್ಲಾಡಳಿತಕ್ಕೆ ಕೊಡ್ತೇವೆ. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸರ್ಕಾರಿ ಪ್ರೇರಿತ. ಪಠ್ಯ ಪುಸ್ತಕ ವಿವಾದ (Textbook Row) ಬದಲಿಸಲು ಹಿಜಾವ್ ವಿವಾದ ತರಲಾಗಿದೆ. ಅವರದ್ದೇ ಎಬಿವಿಪಿ (ABVP) ಸಂಘಟನೆ ಕಾಲೇಜಿನಲ್ಲಿ ಗಲಭೆಗೆ ಯತ್ನಿಸ್ತಿದೆ. ಹೈ ಕೋರ್ಟ್ ತೀರ್ಪು ಬಂದ ಬಳಿಕ ಎರಡು ತಿಂಗಳು ಈ ಸಮಸ್ಯೆ ಇರಲಿಲ್ಲ. ಆದರೆ ಎಬಿವಿಪಿ ಒತ್ತಡದಿಂದ ಈ ವಿವಾದ ಸೃಷ್ಟಿ ಮಾಡಲಾಗಿದೆ. ಇದನ್ನ ಮಂಗಳೂರು ವಿವಿ ಸಮನ್ವಯ ಸಮಿತಿ ಖಂಡಿಸುತ್ತದೆ.
IIT DELHIಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ
ನಮ್ಮ ಸಮನ್ವಯ ಸಮಿತಿ ನಾಲ್ಕು ತಿಂಗಳಿನಿಂದ ವಿವಿ ಕಾಲೇಜಿನಲ್ಲಿ ಇದೆ. ಹೀಗಾಗಿ ಮುಸ್ಲಿಂ ಧರ್ಮದ ಮುಖಂಡರು, ನಾಯಕರು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಲ್ಲಿಬೇಕು. ಉಪ್ಪಿನಂಗಡಿ ಕಾಲೇಜಿನ ಅಮಾನತಾದ ವಿದ್ಯಾರ್ಥಿನಿಯರು ಸಂಪರ್ಕಿಸಿದ್ರೆ ನಮ್ಮ ಬೆಂಬಲ ಎಂದಿದ್ದಾರೆ.
"
'ಕಾನೂನು ಹೋರಾಟ ಮಾಡಿದ್ರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ': ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ಸಂಬಂಧ ವಿದ್ಯಾರ್ಥಿನಿಯರು ಸುದ್ದಿಗೋಷ್ಟಿ ನಡೆಸಿದ್ದಾರೆ. ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಹಿಬಾಬ್ ವಿದ್ಯಾರ್ಥಿನಿಯರು ಸುದ್ದಿಗೋಷ್ಟಿ ಮಾಡಿದ್ದು, ಸುದ್ದಿಗೋಷ್ಟಿಯಲ್ಲಿ ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾಳೆ. ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈ ಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ. ಆದರೆ ಕೆಲ ದಿನಗಳ ಬಳಿಕ ರಾತ್ರೋರಾತ್ರಿ ಈ ಸಮಸ್ಯೆ ಆರಂಭವಾಗಿದೆ.
ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿಯವರು ಡಿಸಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆ ಲೆಟರ್ ತನ್ನಿ ಅಂದ್ರು. ಹೀಗಾಗಿ ನಾವು ಡಿಸಿ ಬಳಿಗೆ ಹೋಗಿದ್ದೆವು, ಆದರೆ ಅವರು ಮೊದಲಿಗೆ ಸಿಗಲಿಲ್ಲ. ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನ ಹೊರಗೆ ಹಾಕಿದ್ದಾರೆ.
KCET Hall Ticket 2022 ಬಿಡುಗಡೆ, ಡೌನ್ಲೋಡ್ ಮಾಡುವುದು ಹೇಗೆ?
ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬೆದರಿಕೆ ಹಾಕಿದ್ದರು. ಆಗ ಪ್ರಾಂಶುಪಾಲರು ನಮ್ಮ ಪ್ರವೇಶ ನಿರ್ಬಂಧ ಮಾಡಿ ಆದೇಶ ಮಾಡಿದ್ರು. ಹೀಗಾಗಿ ನಾವು ಲೈಬ್ರೆರಿಗೆ ಹೋಗಿ ಹೊರಗೆ ಕೂತೆವು. ಆ ಬಳಿಕ ನಮ್ಮನ್ನ ಹಿಜಾಬ್ ಧರಿಸಿ ಕ್ಯಾಂಪಸ್ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಯ್ತು. ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನ ಕ್ಯಾಂಪಸ್ ನಿಂದಲೂ ಹೊರಗೆ ಹಾಕಿದ್ರು. ಆ ಬಳಿಕ ನಾವು ಸೋಮವಾದ ಜಿಲ್ಲಾಧಿಕಾರಿಯವ್ರನ್ನ ಭೇಟಿಯಾದೆವು. ನಮ್ಮ ಜೊತೆಗೆ ನಮ್ಮ ಪೋಷಕರು ಕೂಡ ಮನವಿ ಮಾಡಿದ್ದಾರೆ. ನಮ್ಮ ಮನವಿ ಇಷ್ಟೇ, ಕಾಲೇಜಿನ ಹಳೆಯ ವಸ್ತ್ರ ಸಂಹಿತೆ ಮುಂದುವರೆಸಿ. ಈ ಶೈಕ್ಷಣಿಕ ವರ್ಷ ಹಳೆಯ ವಸ್ತ್ರ ಸಂಹಿತೆ ದಯವಿಟ್ಟು ಮುಂದುವರೆಸಿ.
ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರ್ತಾ ಇದೀವಿ. ಕಾಲೇಜಿನ ಈ ಆದೇಶದ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ. ಬದಲಾಗಿ ಎಬಿವಿಪಿ ಒತ್ತಡಕ್ಕೆ ಬಿದ್ದು ಈ ಆದೇಶ ಹೊರಡಿಸ್ತಾ ಇದಾರೆ. ಇದರ ಬಗ್ಗೆ ಕಾನೂನು ಹೋರಾಟ ಮಾಡಿದ್ರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಅಂದಿದ್ದಾರೆ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ ಎಂದರು.
ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?: ಮಂಗಳೂರು ವಿವಿ ಘಟಕ ಕಾಲೇಜು ಹಿಜಾಬ್ ವಿವಾದ ಸಂಬಂಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತೆ ಹಿಜಾಬ್ ವಿದ್ಯಾರ್ಥಿನಿಯರ ತಲೆ ಕೆಡಿಸಿತಾ ಅನ್ನೋ ಅನುಮಾನ ಮೂಡಿದೆ. ಮಂಗಳೂರು ವಿವಿ ಘಟಕ ಕಾಲೇಜು ಹಿಜಾಬ್ ವಿದ್ಯಾರ್ಥಿನಿಯರಿಗೆ ಸಿಎಫ್ಐ ಪರೋಕ್ಷ ಬೆಂಬಲ ಸೂಚಿಸಿದ್ದು, ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಸಿಎಫ್ಐ ಫೀಲ್ಡಿಗಿಳಿದೆ. ಸಿಎಫ್ ಐ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿ ಹಿಜಾಬ್ ವಿದ್ಯಾರ್ಥಿನಿಯರ ಜೊತೆ ಪ್ರತ್ಯಕ್ಷವಾಗಿದ್ದಾನೆ.
ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಹಿಂದೆ ಮಂಗಳೂರು ವಿವಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಭಟನೆಯಲ್ಲಿ ರಿಯಾಜ್ ಕಾಣಿಸಿಕೊಂಡಿದ್ದ. ಸಿಎಫ್ ಐ ನಡೆಸಿದ್ದ ಪ್ರತಿಭಟನೆಯಲ್ಲಿದ್ದ ಮಂಗಳೂರು ವಿವಿ ವಿದ್ಯಾರ್ಥಿ ರಿಯಾಜ್ ಸಿಎಫ್ ಐ ಬಾವುಟದ ಅಡಿಯಲ್ಲೇ ಹೋರಾಟ ನಡೆಸಿದ್ದ. ಕ್ಯಾಂಪಸ್ ಫ್ರಂಟ್ ಜೊತೆ ಗುರುತಿಸಿಕೊಂಡಿರುವ ರಿಯಾಜ್, ಹಿಜಾಬ್ ವಿವಾದದಲ್ಲಿ ದ.ಕ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದ್ದು, ಜಿಲ್ಲೆಯಾದ್ಯಂತ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಸಿಎಫ್ ಐ ಹೋರಾಟ ಸಂಘಟಿಸ್ತಾ ಇದ್ದು, ಹಿಜಾಬ್ ವಿವಾದದ ಬಳಿಕ ಸಿಎಫ್ ಐನಿಂದಲೇ ಸಮನ್ವಯ ಸಮಿತಿ ಆರಂಭವಾಗಿತ್ತು ಎನ್ನಲಾಗಿದೆ. ಸದ್ಯ ಕ್ಯಾಂಪಸ್ ಫ್ರಂಟ್ ಹೆಸರು ಮರೆಮಾಚಿ ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಹೋರಾಟದ ಪ್ಲಾನ್ ರೂಪಿಸಲಾಗಿದೆ.
"