IIT Delhiಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ

Published : Jun 03, 2022, 02:18 PM IST
IIT Delhiಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ

ಸಾರಾಂಶ

ಕೋಡ್ ವೀಟಾದ ಹತ್ತನೇ ಸೀಸನ್‌ನಲ್ಲಿ ಭಾಗವಹಿಸಿದ 87 ದೇಶಗಳ 1 ಲಕ್ಷಕ್ಕೂ ಹೆಚ್ಚು ಕೋಡರ್‌ಗಳ ಪಟ್ಟಿಯಲ್ಲಿ ಉತ್ತುಂಗದಲ್ಲಿರುವ ಐಐಟಿ ದೆಹಲಿಯ ವಿದ್ಯಾರ್ಥಿಯಾಗಿರುವ ಕೈಲಾಶ್ ಗುಪ್ತಾ  'ವಿಶ್ವದ ಅತ್ಯುತ್ತಮ ಕೋಡರ್' ಪ್ರಶಸ್ತಿಯನ್ನು ಗೆದ್ದಿದ್ದಾರೆ.

ನವದೆಹಲಿ (ಜೂ.2): ಐಐಟಿ ದೆಹಲಿಯಲ್ಲಿ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವ ಕೈಲಾಶ್ ಗುಪ್ತಾ (Kailash Gupta)  ಅವರು  'ವಿಶ್ವದ ಅತ್ಯುತ್ತಮ ಕೋಡರ್' ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೋಡ್ ವೀಟಾದ ಹತ್ತನೇ ಸೀಸನ್‌ನಲ್ಲಿ ಭಾಗವಹಿಸಿದ 87 ದೇಶಗಳ 1 ಲಕ್ಷಕ್ಕೂ ಹೆಚ್ಚು ಕೋಡರ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ವಾರ್ಷಿಕವಾಗಿ ನಡೆಸುವ ಜಾಗತಿಕ ಪ್ರೋಗ್ರಾಮಿಂಗ್ ಸ್ಪರ್ಧೆಯಲ್ಲಿ ಟಾಪರ್‌ಗೆ  10,000 ಡಾಲರ್ ನಗದು ಬಹುಮಾನ ದೊರೆಯುತ್ತದೆ.

ಕೈಲಾಶ್ ಗುಪ್ತಾ   ಅವರು 2018 ರಲ್ಲಿ  ನಡೆದಿದ್ದ ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ    3 ನೇ ಟಾಪರ್ ಆಗಿ ಹೊರಹೊಮ್ಮಿದ್ದರು ಮಾತ್ರವಲ್ಲ  ದೆಹಲಿ ವಲಯದಲ್ಲಿ ಮೊದಲ ಸ್ಥಾನ ಪಡೆದಿದ್ದರು.

 Chikkamagaluru; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Guinness Book of World Records) ಪ್ರಕಾರ, ಕೋಡ್ ವೀಟಾ (Code Vita ) ವಿಶ್ವದ ಅತಿದೊಡ್ಡ ಕೋಡಿಂಗ್ ಸ್ಪರ್ಧೆಯಾಗಿದೆ.

"ವಿಶ್ವದ ಉನ್ನತ ಕೋಡರ್‌ಗಳು" ಪಟ್ಟಿಯಲ್ಲಿ ಹಲವಾರು ಐಐಟಿಗಳು (IITs) ಸೇರಿದಂತೆ ವಿವಿಧ ಭಾರತೀಯ ವಿಶ್ವವಿದ್ಯಾನಿಲಯಗಳ (Indian universities) 21 ವಿದ್ಯಾರ್ಥಿಗಳ ಹೆಸರುಗಳಿವೆ.

ಅಗ್ರ ಕೋಡರ್‌ಗಳ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳಲ್ಲಿ 20 ವರ್ಷದ ದೀಪಾಂಶು ಪಾಂಡೆ, ಡೂನ್-ಆಧಾರಿತ ಗ್ರಾಫಿಕ್ ಎರಾ ವಿಶ್ವವಿದ್ಯಾನಿಲಯದಲ್ಲಿ (Era University) ಕಂಪ್ಯೂಟರ್ ವಿಜ್ಞಾನದ (computer science) ಮೂರನೇ ವರ್ಷದ ವಿದ್ಯಾರ್ಥಿ, ಅವರು ವಿಶ್ವಾದ್ಯಂತ 11 ನೇ ರ್ಯಾಂಕ್ ಗಳಿಸಿದರು. ಅವರ ಪ್ರದರ್ಶನಗಳ ಆಧಾರದ ಮೇಲೆ, ಪಾಂಡೆ ಜೊತೆಗೆ ಉನ್ನತ ಕೋಡರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಇತರ ವಿದ್ಯಾರ್ಥಿಗಳು TCS ನಿಂದ ಸಂದರ್ಶನ ಕರೆಗಳನ್ನು ಸ್ವೀಕರಿಸಿದ್ದಾರೆ. ಈಗಾಗಲೇ ಸಂದರ್ಶನಗಳನ್ನು ನಡೆಸಲಾಗಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

ಇದು ಸ್ಪರ್ಧೆಯ 10 ನೇ ಆವೃತ್ತಿಯಾಗಿತ್ತು.  ಭಾಗವಹಿಸುವವರಲ್ಲಿ ಹೆಚ್ಚಿನವರು ಭಾರತೀಯರು, ಉಳಿದವರು ಸಿಂಗಾಪುರ, ಚೀನಾ, ಸ್ವಿಟ್ಜರ್ಲೆಂಡ್, ಜೆಕ್ ರಿಪಬ್ಲಿಕ್, ಚಿಲಿ ಮತ್ತು ರಷ್ಯಾದಿಂದ ಬಂದವರು ಎಂದು ಸಂಘಟಕರು ತಿಳಿಸಿದ್ದಾರೆ.

ಟಿಸಿಎಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಕೆ ಅನಂತ್ ಕೃಷ್ಣನ್ ಅವರು ಮಾತನಾಡಿ “ನಾಲ್ವರು ಫೈನಲಿಸ್ಟ್‌ಗಳು ಎಲ್ಲಾ 10 ಸಮಸ್ಯೆಗಳನ್ನು ಹೇಗೆ ಪರಿಹರಿಸಿದರು ಎಂಬುದನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ. ಇದು ಹಿಂದೆಂದೂ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

KCET Hall Ticket 2022 ಬಿಡುಗಡೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examinations Authority - KEA) ವಿದ್ಯಾರ್ಥಿಗಳ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ) ಅಥವಾ KCET 2022ರ ಪರೀಕ್ಷೆಯ ಪ್ರವೇಶ ಪತ್ರ ಕಾರ್ಡ್ ಅಥವಾ ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಲಾಗಿದೆ.  ಅಭ್ಯರ್ಥಿಗಳು  ಕೆಇಎ ಅಧಿಕೃತ ವೆಬ್‌ಸೈಟ್‌ kea.kar.nic.in ಅಥವಾ cetonline.karnataka.gov.in/kea ಗೆ ಭೇಟಿ ನೀಡಿ ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್  ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪರೀಕ್ಷೆಯನ್ನು ಜೂನ್ 16, 17 ಮತ್ತು 18 ರಂದು ನಡೆಯಲಿದ್ದು, ಸರಕಾರ ಈಗಾಗಲೇ ಬೇಕಾದ ತಯಾರಿಯನ್ನು ನಡೆಸುತ್ತಿದೆ. ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು KCET ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ