
ತುಮಕೂರು(ಜು.05): ಇಂದು ತುಮಕೂರು ವಿವಿ 15ನೇ ಘಟಿಕೋತ್ಸವ ಕಾರ್ಯಕ್ರಮ ವಿವಿಯಲ್ಲಿ ನಡೆಯಲಿದೆ. ಪ್ರಸಿದ್ಧ ಕೊಳಲು ವಾದಕ ಪ್ರವೀಣ್ ಗೋಡ್ಡಿಂಡಿ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
ಇಂದು ನಡೆಯಲಿರುವ 15 ನೇ ಘಟಿಕೋತ್ಸವದಲ್ಲಿ ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಕೆಲ ಅಪಸ್ವರ ಕೇಳಿ ಬಂದಿದೆ. ತುಮಕೂರು ವಿವಿ ಸಿಂಡಿಕೇಟ್‌ನ ಯಾವೊಬ್ಬ ಸದಸ್ಯರೂ ಪ್ರಸ್ತಾಪಿಸದೇ ಇದ್ದ ಮೂವರು ಹೆಸರುಗಳು ಕೊನೇ ಘಳಿಗೆಯಲ್ಲಿ ಸಿಂಡಿಕೇಟ್ ಮಂಡಳಿ ಸಭೆಗೆ ತೂರಿದ್ದು , ಈ ಹೆಸರುಗಳನ್ನೇ ಗೌರವ ಡಾಕ್ಟರೇಟ್‌ಗೆ ಅಂತಿಮಗೊಳಿಸಿ ರಾಜ್ಯಪಾಲರ ಅಂಗಳಕ್ಕೆ ಕಳುಹಿಸಲಾಗಿತ್ತು. ಜಿಲ್ಲೆಯ ಸಾಧಕರನ್ನು ಕಡೆಗಣಿಸಲಾಗಿದ್ದು, ಈ ಮೂವರು ಹೊರ ಜಿಲ್ಲೆಯವರೆಂಬ ಅಪಸ್ವರ ಎದ್ದಿದೆ.
ಕುವೆಂಪು ವಿವಿ ಘಟಿಕೋತ್ಸವ: ಸಮಸ್ಯೆ ಪರಿಹಾರಕ್ಕೆ ಬದ್ಧತೆಯ ವಿದ್ಯಾವಂತರು ಅವಶ್ಯ: ಡಾ.ಶ್ರೀದೇವಿ. ಸಿಂಗ್
ಧಾರವಾಡ ಜಿಲ್ಲೆ ಮೂಲದ ಸಂಗೀತ ಕ್ಷೇತ್ರದ ಪ್ರವೀಣ್ ಗೋಡ್ಖಿಂಡಿ, ಸಮಾಜಸೇವೆ ಕ್ಷೇತ್ರದಿಂದ ಮೂಲತಃ ಮೇಲುಕೋಟೆಯ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ, ಕೃಷಿ ವಿಜ್ಞಾನ ಕ್ಷೇತ್ರದಿಂದ ಛತ್ತೀಸ್ ಗಢದ ಮಹಾತ್ಮಗಾಂಧಿ ಯೂನಿವರ್ಸಿಟಿ ಆಫ್ ಹಾರ್ಟಿಕಲ್ಚರ್ ಫಾರೆಸ್ಟ್ ಡ್ರಗ್ ಕುಲಪತಿ ಡಾ.ರಾಮ್ ಶಂಕರ್ ಕುರೀಲ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
10386 ಮಂದಿಗೆ ಪದವಿ ವಿತರಣೆ
ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 10386 ಅಭ್ಯರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. 3 ಅಭ್ಯರ್ಥಿಗಳು ಡಿ.ಲಿಟ್ ಪದವಿ, 74 ಅಭ್ಯರ್ಥಿಗಳು ಪಿ.ಎಚ್‌ಡಿ, ಪದವಿ 1522 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,787 ಅಭ್ಯರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿರುತ್ತಾರೆ. ಒಟ್ಟು 72 ವಿದ್ಯಾರ್ಥಿಗಳಿಗೆ 96 ಚಿನ್ನದ ಪದಕಗಳನ್ನು ನೀಡಲಾಗುವುದು.