ಶಿಕ್ಷಣದಲ್ಲಿ ವಿಶೇಷವಾಗಿ ಪರಿವರ್ತನೆ ಅತ್ಯಗತ್ಯ: ಸಚಿವ ನಾಗೇಶ್‌

By Govindaraj S  |  First Published Sep 4, 2022, 11:59 PM IST

ವಿವೇಕಾನಂದರಂತಹ ಮಹನೀಯ ವ್ಯಕ್ತಿಗಳ ಆಶಯದಂತೆ ಶಿಕ್ಷಣದಲ್ಲಿ ವಿಶೇಷವಾಗಿ ಪರಿವರ್ತನೆಯಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.


ಸರಗೂರು (ಸೆ.05): ವಿವೇಕಾನಂದರಂತಹ ಮಹನೀಯ ವ್ಯಕ್ತಿಗಳ ಆಶಯದಂತೆ ಶಿಕ್ಷಣದಲ್ಲಿ ವಿಶೇಷವಾಗಿ ಪರಿವರ್ತನೆಯಾಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಅಂಗಸಂಸ್ಥೆಯಾದ ವಿವೇಕಾ ಸ್ಕೂಲ್‌ ಆಫ್‌ ಎಕ್ಸೆಲೆನ್ಸ್‌ ಸೈನಿಕ ಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕು, ಯಾವ ಜ್ಞಾನದ ಮೂಲಕ ಭಾರತ ಪ್ರಪಂಚವನ್ನು ಗೆದ್ದಿತ್ತೋ ಆ ರೀತಿಯ ಜ್ಞಾನ ಮುಂದಿನ ಪೀಳಿಗೆಯ ಮಕ್ಕಳಿಗೆ ಬರಬೇಕು ಎಂಬ ಅವರ ಯೋಚನೆಗಳು ಕಾರ್ಯರೂಪಕ್ಕೆ ಬರಲು ಸ್ವಾತಂತ್ರ್ಯ ಬಂದು 75 ವರ್ಷ ಬೇಕಾಯಿತು ಎಂದರು.

ಶಿಕ್ಷಣದಿಂದ ಜಾಗೃತಿ ಸಾಧ್ಯ. ಆದ್ದರಿಂದ ಈ ದೇಶದ ಶಿಕ್ಷಣ ಪದ್ಧತಿ ಬದಲಾಯಿಸಬೇಕು ಎಂದು ತೀರ್ಮಾನಿಸಿ 2020ರಲ್ಲಿ ಬದಲಾಯಿಸಲಾಯಿತು. ಆದರೆ ಯೋಚನೆ ಈ ದೇಶದ ಪ್ರಧಾನಿಯದಲ್ಲ ಬದಲಿಗೆ ಯಾರು ಬ್ರಿಟಿಷರ ಕಾಲವನ್ನು ನೋಡಿದ್ದರು, ಯಾರು ಅವರ ಅನ್ಯಾಯ ನೋಡಿದ್ದರು, ಅನ್ಯಾಯದ ಮೂಲಕ ದೇಶದ ಸಮಾಜವನ್ನು ಹಾಳು ಮಾಡಲು ಹೊರಟಿದ್ದು, ಅವರ ಎಲ್ಲ ವ್ಯವಸ್ಥೆಗಳನ್ನು ಬದಲಾಯಿಸಬೇಕು ಎಂದು ಹೋರಾಡಿದ ವಿವೇಕಾನಂದರಂತಹ ಅನೇಕ ಸಾಧು, ಸಂತರು, ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳ ಯೋಚನೆಯಾಗಿತ್ತು ಎಂದರು.

Tap to resize

Latest Videos

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಇನ್ನಿಲ್ಲ: ಸಾವಿನಲ್ಲೂ ಸಾರ್ಥಕತೆ ಮೆರೆದ ಜನಮೆಚ್ಚಿದ ಡಾಕ್ಟರ್

ಯಾರು ತನ್ನ ವೈಯಕ್ತಿಕ ಆಸೆಗಾಗಿ ರಾಜಕೀಯಕ್ಕೆ ಬಂದರು ಅವರು ದೇಶಭಕ್ತರಾಗಿದ್ದರು, ಯಾರು ಈ ದೇಶ ಒಗ್ಗಟ್ಟಾಗಿರಬೇಕು, ದೇಶ ಪ್ರಪಂಚದ ಗುರುವಾಗಬೇಕು ಎಂದು ಆಸೆ ಪಟ್ಟರೋ ಅವರು ದೇಶದ್ರೋಹಿಗಳಂತಾಗಿದೆ, ಇದಕ್ಕೆ ಕಾರಣ ನಮ್ಮಲ್ಲಿದ್ದ ಶಿಕ್ಷಣ ಪದ್ದತಿ. ನಮ್ಮ ಮೈಡ್‌ಸೆಚ್‌ ಆ ಮಟ್ಟದಲ್ಲಿದೆ ಆದ್ದರಿಂದ ನಮ್ಮಲ್ಲಿದ್ದ ಶಿಕ್ಷಣ ನೀತಿ ಬದಲಾಗಬೇಕು ಎಂದು ತಜ್ಞರ ಅಭಿಪ್ರಾಯದಂತೆ ಹೊಸ ಶಿಕ್ಷಣ ನೀತಿಯನ್ನು ಈ ದೇಶಕ್ಕೆ ತರಲಾಯಿತು ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿಯಲ್ಲಿ ಮಗುವಿಗೆ ಎಲ್ಲಿ ಸಂತೋಷದ ಜೊತೆಗೆ ತನಗಿಚ್ಛೆ ಬಂದಂತೆ ಜ್ಞಾನಾರ್ಜನೆಯ ಅವಕಾಶದ ಜೊತೆಗೆ ಮಕ್ಕಳಿನ ಪ್ರತಿಭೆಯನ್ನು ಆಚೆ ತರುವ ಪ್ರಯತ್ನ ಮಾಡುವುದು, ಎಲ್ಲದಕ್ಕಿಂತ ರಾಷ್ಟ್ರೀಯ ಭಕ್ತಿಯನ್ನು ಮಕ್ಕಳಲ್ಲಿ ಬೆಳಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು. ವಿವೇಕಾನಂದರು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಹಾಗೂ ದೇಶದ ಅಭಿವೃದ್ಧಿಯ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸೈನಿಕ ಶಾಲೆ ಬಗ್ಗೆ ಯೋಚನೆ ಮಾಡಿದ್ದರು, ಆದರೆ ಅದು ಸಾಧ್ಯವಾಗಲು ಸ್ವಾತಂತ್ರ ಬಂದ 75 ವರ್ಷಗಳೇ ಬೇಕಾಯಿತು. ಇಂದು ವಿವೇಕಾನಂದರ ಕನಸು ನನಸಾಗಿದೆ ಎಂದರು.

ಸಾವರ್ಕರ್‌ ದೇಶಕ್ಕಾಗಿ ಕಠಿಣ ಜೈಲು ವಾಸ ಅನುಭವಿಸಿದವರು. ಅವರು ಎಸ್‌ವಿವೈಎಂ ಈ ಸಂಸ್ಥೆ ಸರಗೂರಿನಲ್ಲಿ 1984 ರಲ್ಲಿ ಸರಗೂರು ಪಟ್ಟಣದಲ್ಲಿ ವಿವೇಕ ಆಸ್ಪತ್ರೆ ಪ್ರಾರಂಭವಾಯಿತು. ನಂತರ 2202 ರಲ್ಲಿ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಚ್‌ ಅಡಿಯಲ್ಲಿ ವಿವೇಕ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಡಾ. ಆರ್‌. ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಆರಂಭಗೊಂಡಿತು. ಮುಂದುವರೆದ ಭಾಗವಾಗಿ ಇಲ್ಲೇ ಸೈನಿಕ ಶಾಲೆ ಪ್ರಾರಂಭವಾಗುತ್ತಿದೆ ಎಂದು ಅವರು ಹೇಳಿದರು.

ಸೈನಿಕ ಶಾಲೆಯ ಪ್ರವೇಶಕ್ಕೆ ರಕ್ಷಣಾ ಸಚಿವಾಲಯದ ಸೈನಿಕ ಶಾಲೆ ಸೊಸೈಟಿಯು ಈ ವರ್ಷದ ಜನವರಿಯಲ್ಲಿ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ನಡೆಸಿತ್ತು. ವಿವೇಕ ಸ್ಕೂಲ್‌ ಅಫ್‌ ಎಕ್ಸಲೆನ್ಸ್‌ ಶಾಲೆಯಲ್ಲಿ ಓದುತ್ತಿರುವ 26 ಮಕ್ಕಳು ಸೇರಿದಂತೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಇತರ 24 ಮಕ್ಕಳಿಗೆ (ಒಟ್ಟು 50 ) ಇಲ್ಲಿ 6ನೇ ತರಗತಿಗೆ ಪ್ರವೇಶ ಸಿಗಲಿದೆ ಎಂದರು. ಶಾಲೆಯಲ್ಲಿ ಸಿಬಿಎಸ್‌ಇ ಮಾದರಿಯಲ್ಲಿ ಪಠ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.30 ರ ತನಕ ಪಠ್ಯದ ಚಟುವಟಿಕೆಗಳು ಇರುತ್ತದೆ. ನಂತರ 2.30 ರಿಂದ ಸೈನಿಕ ಶಾಲೆಗಳಲ್ಲಿ ನಡೆಯುವಂತೆ ಇಲ್ಲೂ ಚಟುವಟಿಕೆ ನಡೆಸಲಾಗುತ್ತದೆ, ದೇಶದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರಲಿದ್ದಾರೆ. ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕೂಡ ಇರಲಿದೆ ಎಂದಿದ್ದಾರೆ.

ಅದ್ಧೂರಿ ದಸರಾ ಆಚರಣೆಗೆ ಕೈಜೋಡಿಸಿ: ಮೈಸೂರು ಜಿಲ್ಲಾಡಳಿತ ಮನವಿ

ಹೈದರಾಬಾದ್‌ನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋದಮಯಾನಂದಜೀ, ವಿಧಾನಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಕೊಡಗಿನ ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್‌ ಜಿ. ಕಣ್ಣನ್‌, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಉಪಾಧ್ಯಕ್ಷ ಡಾ.ಬಿ. ಸುಧೀರ್‌, ವಿವೇಕಾ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷ ಏರ್‌ ಕಮಾಂಡರ್‌ ಆರ್‌.ಎನ್‌. ಜಯಸಿಂಹ, ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಿಬ್ಬಂದಿ ಡಾ. ಡೆನ್ನೀಸ್‌ ಚೌಹಾಣ್‌, ಎಸ್‌. ಪ್ರವೀಣ್‌ ಕುಮಾರ್‌ ಇದ್ದರು. ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್‌, ಉಪಾಧ್ಯಕ್ಷ ವಿನಾಯಕ ಪ್ರಸಾದ್‌, ಸದಸ್ಯರಾದ ನೂರಾಳಸ್ವಾಮಿ, ಶಿವಕುಮಾರ್‌, ಉಮಾರಾಮು, ಚೈತ್ರ ಸ್ವಾಮಿ, ಸಣ್ಣ ತಾಯಮ್ಮ ಇದ್ದರು.

click me!