ಒಂಬತ್ತೇ ತಿಂಗಳಲ್ಲಿ 8-12ನೇ ತರಗತಿ ಓದಿದ, 15ನೇ ವರ್ಷಕ್ಕೆ ಎಂಜಿನಿಯರಿಂಗ್‌ ಪದವಿ ಪಡೆದ

By Suvarna NewsFirst Published Dec 27, 2023, 2:25 PM IST
Highlights

ತನ್ನ 15ನೇ ವಯಸ್ಸಿನಲ್ಲೇ ಇಂಜಿನಿಯರಿಂಗ್‌ ಪದವಿ ಪಡೆದಿರುವ ನಿರ್ಭಯ್‌ ಥಾಕರ್‌ ಗುಜರಾತಿನ ಅತಿ ಕಿರಿಯ ಇಂಜಿನಿಯರಿಂಗ್‌ ಪದವೀಧರ ಎನಿಸಿರುವ ಚೈಲ್ಡ್‌ ಪ್ರೊಡಿಜಿ. ನಿರ್ಭಯ್‌ ಈ ಹೆಗ್ಗಳಿಕೆ ಪಡೆದು ಐದು ವರ್ಷವಾದರೂ ಯಾರೂ ಸಹ ಇಲ್ಲಿಯವರೆಗೆ ಇವನ ಸಾಧನೆಯನ್ನು ಹಿಂದಿಕ್ಕುವುದು ಸಾಧ್ಯವಾಗಿಲ್ಲ. ಹೀಗಾಗಿ, ಈತನ ಸಾಧನೆಗೆ ಈಗ ಮತ್ತೊಮ್ಮೆ ಎಲ್ಲರೂ ಸಲಾಮ್‌ ಎನ್ನುತ್ತಿದ್ದಾರೆ. 
 

ವರ್ಷಾನುಗಟ್ಟಲೆ ಓದಿದರೂ ಒಂದೇ ಕ್ಲಾಸನ್ನು ಪಾಸು ಮಾಡಲಾಗದೇ ಒದ್ದಾಡುವ ವಿದ್ಯಾರ್ಥಿಗಳು ಎಷ್ಟೋ ಇದ್ದಾರೆ. ಒಂದೇ ತರಗತಿಯ ಪಠ್ಯವನ್ನು ಅರಗಿಸಿಕೊಳ್ಳಲು ಬರೋಬ್ಬರಿ ಒಂದು ವರ್ಷ ಸಮಯ ನೀಡಿದರೂ ಸಾಕಾಗುವುದಿಲ್ಲ. ಇನ್ನು, ಖಾಸಗಿ ಶಾಲೆಗಳ ಸಿಲೆಬಸ್‌ ಅಂತೂ ದೇವರಿಗೇ ಪ್ರೀತಿ. ನಿಜಕ್ಕೂ ಅವುಗಳನ್ನು ಓದಿ, ಅರ್ಥೈಸಿಕೊಂಡು ಅಷ್ಟೆಲ್ಲ ಮಾರ್ಕ್ಸು ತೆಗೆಯುವ ವಿದ್ಯಾರ್ಥಿಗಳು ನಿಜಕ್ಕೂ ಗ್ರೇಟೇ. ಅದರಲ್ಲೂ 10ನೇ ತರಗತಿ, 12ನೇ ಕ್ಲಾಸುಗಳ ವಿದ್ಯಾರ್ಥಿಗಳು ಹಗಲಿರುಳು ಓದಿದ ಪಠ್ಯವನ್ನೇ ಮತ್ತೆ ಮತ್ತೆ ಓದುತ್ತ, ಆರು ತಿಂಗಳ ಕಾಲ ಮನನ ಮಾಡುತ್ತಾರೆ. ಕೊನೆಗೊಮ್ಮೆ ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ಸಾಧನೆಗೈದು ಮುಂದಿನ ಹಂತಕ್ಕೇರುತ್ತಾರೆ. ಆದರೆ, ಗುಜರಾತ್‌ ರಾಜ್ಯದಲ್ಲೊಬ್ಬ ಯುವಕನಿದ್ದಾನೆ. ಈತ ಕೇವಲ ಒಂಭತ್ತು ತಿಂಗಳಲ್ಲಿ 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಅಷ್ಟೂ ಪರೀಕ್ಷೆಗಳನ್ನು ಪಾಸಾಗಿದ್ದಾನೆ. ಬಳಿಕ, ಇಂಜಿನಿಯರಿಂಗ್‌ ಸೀಟು ಗಳಿಸಿ, ಒಂದೇ ವರ್ಷದಲ್ಲಿ ನಾಲ್ಕೂ ವರ್ಷಗಳ ಕೋರ್ಸ್‌ ಮುಗಿಸಿ ಅತಿ ಕಿರಿಯ ಇಂಜಿನಿಯರಿಂಗ್‌ ಪದವೀಧರ ಎನಿಸಿಕೊಂಡಿದ್ದಾನೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು (Students) ತಮ್ಮ ಶಾಲೆಯನ್ನು (Schooling) ಹದಿನೆಂಟನೇ ವಯಸ್ಸಿಗೆ ಪೂರ್ಣಗೊಳಿಸುತ್ತಾರೆ. ಕಾಲೇಜು (College) ಶಿಕ್ಷಣವನ್ನು 21ರಿಂದ 22ನೇ ವಯಸ್ಸಿನಲ್ಲಿ ಮುಗಿಸುತ್ತಾರೆ. ಪದವಿಯ ಅವಧಿಯನ್ನು ಆಧರಿಸಿ ಒಂದು ವರ್ಷ ಹೆಚ್ಚು-ಕಮ್ಮಿಯಾಗಬಹುದು. ಒಟ್ಟಿನಲ್ಲಿ ತಮ್ಮ ಜೀವನದ 22ನೇ ವಯಸ್ಸಿನ ಸಮಯಕ್ಕೆ ಪದವಿ (Degree) ಶಿಕ್ಷಣ ಪಡೆಯುತ್ತಾರೆ. ಆದರೆ, ಕೆಲವು ವಿದ್ಯಾರ್ಥಿಗಳು ಮಾತ್ರ ವಿಶೇಷ ಕೌಶಲ (Skill) ಹೊಂದಿರುತ್ತಾರೆ. ಸಣ್ಣ ವಯಸ್ಸಿನಿಂದಲೂ ಅಪಾರ ಚುರುಕು, ಬುದ್ಧಿಮತ್ತೆ ಹೊಂದಿದ್ದು, 20ಕ್ಕಿಂತ ಕಡಿಮೆ ವಯಸ್ಸಿಗೇ ಪದವಿ ಪಡೆದುಕೊಂಡುಬಿಡುತ್ತಾರೆ. ಇಂಥವರನ್ನು ನಿಸ್ಸಂಶಯವಾಗಿ ಚೈಲ್ಡ್‌ ಪ್ರೊಡಿಜಿ (Child Prodigy) ಎನ್ನಬಹುದು. ಇಂಥ ವಿದ್ಯಾರ್ಥಿಗಳಲ್ಲಿ ಒಬ್ಬ ನಿರ್ಭಯ್‌ ಥಾಕರ್.‌ 

ತಾವು ಓದಿದ ಐಐಟಿ ಬಾಂಬೆಗೆ 57 ಕೋಟಿ ರೂ. ಕೊಡುಗೆ ನೀಡಿದ 1998 ರ ಬ್ಯಾಚ್ ವಿದ್ಯಾರ್ಥಿಗಳು!

Latest Videos

ಅತಿ ಕಿರಿಯ ಇಂಜಿನಿಯರಿಂಗ್‌ ಪದವೀಧರ
ಗುಜರಾತ್‌ ರಾಜ್ಯದ ಅತಿ ಕಿರಿಯ ವಯಸ್ಸಿನ ಇಂಜಿನಿಯರಿಂಗ್‌ (Engineering) ಪದವೀಧರ ಎಂದರೆ ಈತನೇ, ನಿರ್ಭಯ್‌ ಥಾಕರ್.‌ ತನ್ನ 15ನೇ ವಯಸ್ಸಿಗೆ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾನೆ ಎಂದರೆ ಅಚ್ಚರಿಯಾಗುತ್ತದೆ.  ಗುಜರಾತಿನ ಭುಜ್‌ ಜಿಲ್ಲೆಯಲ್ಲಿ ಜನಿಸಿರುವ ನಿರ್ಭಯ್‌, ಪೂರ್ತಿ ಇಂಜಿನಿಯರಿಂಗ್‌ ಕೋರ್ಸ್‌ ಅನ್ನು ಕೇವಲ 1 ವರ್ಷದಲ್ಲಿ ಪೂರ್ಣಗೊಳಿಸಿದ್ದಾನೆ. ಈ ಮೂಲಕ ದೇಶಾದ್ಯಂತ ಮನೆಮಾತಾಗಿದ್ದಾನೆ. 
ಗುಜರಾತ್‌ ತಾಂತ್ರಿಕ ವಿಶ್ವವಿದ್ಯಾಲಯದಿಂದ 2017ರಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದಿರುವ ನಿರ್ಭಯ್‌, ಇಂಜಿನಿಯರಿಂಗ್‌ ಕೋರ್ಸ್‌ ಪಡೆಯುವ ಕೆಲವೇ ಸಮಯದ ಮುನ್ನ ಕೇವಲ ಆರೇ ತಿಂಗಳಲ್ಲಿ ಎಂಟರಿಂದ ಹತ್ತನೇ ತರಗತಿಯವರೆಗಿನ ಶಿಕ್ಷಣ (Education) ಪೂರೈಸಿದ್ದ. ಬಳಿಕ, ಮುಂದಿನ ಮೂರು ತಿಂಗಳಲ್ಲಿ 11 ಮತ್ತು 12ನೇ ತರಗತಿಯನ್ನು ಯಶಸ್ವಿಯಾಗಿ (Successfully) ಮಾಡಿದ್ದ. ಇನ್ನೂ ವಿಶೇಷವೆಂದರೆ, ಗುಜರಾತಿನ ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮಿನೇಷನ್‌ ನಲ್ಲಿ 360ರ ಪೈಕಿ 75ನೇ ಸ್ಥಾನ ಗಳಿಸಿದ್ದ ಎಂದರೆ ಈತನ ಪ್ರತಿಭೆಯ ಪರಿಚಯವಾಗುತ್ತದೆ. ಈತನ ತಂದೆಯೂ ಇಂಜಿನಿಯರ್‌ ಹಾಗೂ ತಾಯಿ ವೈದ್ಯೆಯಾಗಿದ್ದಾರೆ. ಪಾಲಕರ (Parents) ನಿರಂತರವಾದ ಬೆಂಬಲದಿಂದಲೇ ತಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವುದು ಈತನ ಬಲವಾದ ಭಾವನೆ.

ಐಐಟಿಯಲ್ಲಿ ಓದಿದ್ರೂ, ಸಾಧು-ಸಂತರಾಗಿರೋ ಈ ಜನ ಸಮಾಜ ಸೇವೆಯಲ್ಲೇ ನಿರತ

ಹೇಗೆ ಸಾಧ್ಯ?
ನಿರ್ಭಯ್‌ ತನ್ನ ಪ್ರಾಥಮಿಕ (Primary) ಶಿಕ್ಷಣವನ್ನು ಇಂಟರ್‌ ನ್ಯಾಷನಲ್‌ ಜನರಲ್‌ ಸರ್ಟಿಫಿಕೇಷ್‌ ಆಫ್‌ ಸೆಕೆಂಡರಿ ಎಜುಕೇಷನ್‌ ನಲ್ಲಿ ಪೂರೈಸಿದ್ದಾನೆ. ಈ ಸಂಸ್ಥೆಯ ವಿಶೇಷತೆ ಎಂದರೆ, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ಹಾಗೂ ಕಿರು ಅವಧಿಯಲ್ಲೇ ಬೇರೆ ಬೇರೆ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸುತ್ತದೆ. ಬೇರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ, ಅದಕ್ಕೆ ಬೇರೆ ಬೇರೆ ನಿಯಮಗಳಿವೆ. ಇಲ್ಲಿನ ಶಿಕ್ಷಣ ಪಡೆದ ಬಳಿಕ ಬೇರೆ ಸಂಸ್ಥೆಗಳೂ ಅದಕ್ಕೆ ಅನುಮತಿ ನೀಡಬೇಕು. ನಿರ್ಭಯ್‌ ವಿಚಾರದಲ್ಲಿ, ಪ್ರೊಫೆಷನಲ್‌ ಕೋರ್ಸಸ್‌ ನ ಅಡ್ಮಿಷನ್‌ ಸಮಿತಿ ಹಾಗೂ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ (AICTE) ಮುಂದಿನ ಶಿಕ್ಷಣಕ್ಕೆ ಅನುಮತಿ (Permit) ನೀಡಿದ್ದವು.
 

click me!